ಡೀಸೆಂಟ್ ಆಗಿ ಸೀರೆ ಉಟ್ಟು ಫೋಸ್ ಕೊಟ್ಟರೂ, ಕಮೆಂಟ್‌ ಆಫ್ ಮಾಡಿದ ಚೈತ್ರಾ ಆಚಾರ್

Published : Jul 16, 2025, 11:53 AM ISTUpdated : Jul 16, 2025, 12:35 PM IST

ಸ್ಯಾಂಡಲ್ವುಡ್ ನಟಿ ಚೈತ್ರಾ ಆಚಾರ್ ಇತ್ತೀಚೆಗೆ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡು ಶಾಕ್ ನೀಡಿದ್ದರು. ಇದೀಗ ಸೀರೆಯುಟ್ಟು ಮುದ್ದಾಗಿ ಕಾಣಿಸುತ್ತಿದ್ದಾರೆ ಚೆಲುವೆ. 

PREV
19
ಚೈತ್ರಾ ಆಚಾರ್

ಚಂದನವನದಲ್ಲಿ ತಮ್ಮ ಬೋಲ್ಡ್ ಲುಕ್, ಬೋಲ್ಡ್ ಪಾತ್ರದ ಮೂಲಕವೇ ಗಮನ ಸೆಳೆಯುವ ಚೆಲುವೆ ಅಂದ್ರೆ ಅದು ಚೈತ್ರಾ ಆಚಾರ್. ಈಕೆ ತನ್ನ ಅಧ್ಬುತ ನಟನೆಯ ಮೂಲಕ ಕೆಲವೇ ಸಮಯದಲ್ಲಿ ಅಪಾರ ಅಭಿಮಾನಿಗಳನ್ನು ಪಡೆದಿದ್ದಾರೆ.

29
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್

ಚೈತ್ರಾ ಆಚಾರ್ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದು, ದಿನಕ್ಕೊಂದು ಫೋಟೊ ಶೇರ್ ಮಾಡುವ ಮೂಲಕ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಹಾಕಿದ್ದ ಫೋಟೊ ಶೂಟ್ ಸಿಕ್ಕಪಟ್ಟೆ ಸದ್ದು ಮಾಡಿತ್ತು.

39
ಬೋಲ್ಡ್ ಫೋಟೊ ಶೂಟ್

ಇತ್ತೀಚೆಗೆ ಒಳಉಡುಪು ಕಾಣುವಂತೆ ಜೀನ್ಸ್ ಧರಿಸಿ ಪೋಸ್ ಕೊಟ್ಟು ಇಂಟರ್ನೆಟಲ್ಲಿ ಕಾವೇರಿಸಿದ್ದರು. ನೀಲಿ ಬಣ್ಣದ ಜೀನ್ಸ್ ಧರಿಸಿ, ಬಿಳಿ ಬಣ್ಣದ ಸ್ಲೀವ್ ಲೆಸ್ ಬನಿಯನ್ ಧರಿಸಿ, ಬಿಳಿ ಬಣ್ಣದ ಒಳ ಉಡುಪು ಕಾಣುವಂತೆ ಪೋಸ್ ಕೊಟ್ಟಿದ್ದರು.

49
ಟ್ರೋಲಿಗರಿಗೆ ಆಹಾರ

ತಮ್ಮ ಬೋಲ್ಡ್ ಲುಕ್ ನಿಂದಾಗಿಯೇ ನಟಿ ಟ್ರೋಲಿಗರಿಗೆ ಆಹಾರವಾಗಿದ್ದರು. ಕನ್ನಡ ನಟಿಗೆ ಯಾಕೀ ಅವತಾರ ಎಂದು ಜನ ಕೇಳುವಂತಾಗಿತ್ತು. ಸೋಶಿಯಲ್ ಮೀಡಿಯಾ ಪೂರ್ತಿ ಅಪಸ್ವರಗಳು ಕೇಳಿ ಬರುತ್ತಿದ್ದವು. ಆದರೆ ನಟಿ ಮಾತ್ರ ಯಾವುದಕ್ಕೂ ಕ್ಯಾರೇ ಅನ್ನೋದೆ ಇಲ್ಲ.

59
ಸೀರೆಯಲ್ಲಿ ಚೆಲುವೆ

ಇದೀಗ ಹೊಸದಾದ ಫೋಟೊ ಶೂಟ್ ಶೇರ್ ಮಾಡಿದ್ದಾರೆ ನಟಿ. ಬೋಲ್ಡ್ ಅವತಾರ ಬಿಟ್ಟು ಚೈತ್ರಾ ಕಪ್ಪು ಬಣ್ಣದ ಸೀರೆಯಲ್ಲಿ ಮುದ್ದಾಗಿ ಕಾಣಿಸಿಕೊಂಡು ಪೋಸ್ ಕೊಟ್ಟಿದ್ದಾರೆ.

69
ನೀ..ನಗುತಿರೆ..ಹೂವು ಅರಳುವುದು

ಕಪ್ಪು ಮತ್ತು ಹಳದಿ ಬಣ್ಣದ ಕಾಟನ್ ಸೀರೆಯುಟ್ಟು ನೀ..ನಗುತಿರೆ..ಹೂವು ಅರಳುವುದು ಎಂದು ಡಾ. ರಾಜಕುಮಾರ್ ಅವರ ಹಾಡನ್ನು ಕ್ಯಾಪ್ಶನ್ ಕೊಟ್ಟಿದ್ದಾರೆ. ಸಿಂಪಲ್ ಲುಕ್ ನಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

79
ಎಕ್ಸ್ ಪ್ರೆಶನ್ ಕ್ವೀನ್

ಕಾಟನ್ ಸೀರೆ ಜೊತೆ ಮೆಟಲ್ ಬಳೆ, ಅದಕ್ಕೆ ಮ್ಯಾಚ್ ಆಗುವ ಸರ, ಕಾಲ್ಗೆಜ್ಜೆ, ಧರಿಸಿರುವ ಚೈತ್ರಾ ಒಂದೊಂದು ಫೋಟೊದಲ್ಲಿ ಬೇರೆ ಬೇರೆ ಪೋಸ್ ಕೊಟ್ಟು, ಕಟ್ಟಲ್ಲೇ ನೂರೆಂಟ್ ಎಕ್ಸ್ ಪ್ರೆಶನ್ ಕೊಡುವ ಮೂಲಕ ಎಕ್ಸ್ ಪ್ರೆಶನ್ ಕ್ವೀನ್ ಎನಿಸಿಕೊಂಡಿದ್ದಾರೆ.

89
3 ಬಿಎಚ್‌ಕೆ ಸಿನಿಮಾ ಯಶಸ್ಸು

ಸದ್ಯ ಚೈತ್ರಾ ಆಚಾರ್‌ ತಮಿಳಿನಲ್ಲಿ ನಟ ಸಿದ್ಧಾರ್ಥ್‌, ಶರತ್‌ ಕುಮಾರ್‌ ಅವರೊಂದಿಗೆ '3 ಬಿಎಚ್‌ಕೆ' ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾ ಸಿನಿರಸಿಕರ ಮನಸ್ಸು ಗೆದ್ದಿದ್ದು, ಸಿಕ್ಕಾಪಟ್ಟೆ ಯಶಸ್ಸು ಗಳಿಸಿದೆ.

99
ಕನ್ನಡ ಸಿನಿಮಾಗಳು

ಕನ್ನಡದಲ್ಲಿ ಚೈತ್ರಾ ಆಚಾರ್ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ‘ಉತ್ತರಕಾಂಡ’, 'ಮಾರ್ನಮಿ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

Read more Photos on
click me!

Recommended Stories