Rukmini Vasanth Birthday: ನಟಿ ರುಕ್ಮಿಣಿ ವಸಂತ್ ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ರುಕ್ಕು ಬೆಸ್ಟ್ ಫ್ರೆಂಡ್ ಆಗಿರುವ ಹಾಗೂ ಸಪ್ತಸಾಗರದಾಚೆ ಎಲ್ಲೋ ಕೋ ಸ್ಟಾರ್ ಆಗಿರುವ ಚೈತ್ರಾ ಆಚಾರ್, ವಿಶೇಷವಾದ ಮೆಸೇಜ್ ಜೊತೆಗೆ ಅನ್ ಸೀನ್ ಫೋಟೊಸ್ ಜೊತೆ ಶುಭ ಕೋರಿದ್ದಾರೆ.
ರುಕ್ಮಿಣಿ ವಸಂತ್ ಹೆಸರಿಗೆ ಪರಿಚಯವೇ ಬೇಕಾಗಿಲ್ಲ. ಬೆರಳೆಣಿಕೆಯಷ್ಟು ಸಿನಿಮಾ ಮಾಡಿದ್ರೂ ದೇಶದ ಮೂಲೆ ಮೂಲೆಯಲ್ಲು ಸದ್ದು ಮಾಡುತ್ತಿರುವ ರುಕ್ಮಿಣಿ ವಸಂತ್ ಇದೀಗ ತಮ್ಮ 29ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
28
ಚೈತ್ರಾ ಆಚಾರ್
ಬೆಸ್ಟ್ ಫ್ರೆಂಡ್ ಆಗಿರುವ ರುಕ್ಮಿಣಿ ವಸಂತ್ ಅವರ ಹುಟ್ಟುಹಬ್ಬಕ್ಕೆ ನಟಿ ಹಾಗೂ ಗಾಯಕಿ ಚೈತ್ರಾ ಆಚಾರ್ ವಿಶೇಷ ಫೋಟೊಗಳು ಹಾಗೂ ಮೆಸೇಜ್ ಮೂಲಕ ಗೆಳತಿಗೆ ಶುಭ ಕೋರಿದ್ದಾರೆ.
38
It’s a world My Rukkamma day
ನಾನು ಎಲ್ಲಿಂದ ಪ್ರಾರಂಭಿಸಲಿ? ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತೇನೆಂದು ನಿನಗೆ ತಿಳಿದಿದೆ, ಮತ್ತು ಅದು ಇನ್ನೂ ಹೆಚ್ಚಾಗಿ ಬೆಳೆಯುತ್ತದೆ. ನೀವು ಎಲ್ಲೇ ಇದ್ದರೂ ಅಥವಾ ಏನು ಮಾಡಿದರೂ, ನಾನು ನಿಮ್ಮ ಅತ್ಯಂತ ದೊಡ್ಡ ಚಿಯರ್‌ಲೀಡರ್ ಮತ್ತು ನಿಮ್ಮಂತ ಕಲಾವಿದೆಯ ಅಭಿಮಾನಿಯಾಗದೇ ಇರಲು ಸಾಧ್ಯವಿಲ್ಲ. ಎಲ್ಲಾದಕ್ಕಿಂತ ಹೆಚ್ಚಾಗಿ ನಿಮ್ಮ ವ್ಯಕ್ತಿತ್ವ ನನಗೆ ಇಷ್ಟ..
ನೀವು ಹುಟ್ಟಿದ್ದಕ್ಕೆ ನನಗೆ ಸಂತೋಷವಾಗಿದೆ, ಮತ್ತು ನಾವು ಭೇಟಿಯಾದದ್ದಕ್ಕೆ ನನಗೆ ಸಂತೋಷವಾಗಿದೆ ಮತ್ತು ನಾವು ಪರಸ್ಪರ ಒಂದೇ ರೀತಿಯ ಎನರ್ಜಿಯನ್ನು ಹಂಚಿಕೊಳ್ಳುತ್ತೇವೆ ಎಂದು ನನಗೆ ಸಂತೋಷವಾಗಿದೆ! ಎಂದು ಚೈತ್ರಾ ಆಚಾರ್ ಹೇಳಿದ್ದಾರೆ.
58
ಐ ಲವ್ ಯೂ ರುಕ್ಕು
ನನ್ನ ಜೋಕ್‌ಗಳಿಗೆ ನಗುವುದರಿಂದ ಹಿಡಿದು (ಇದಕ್ಕಿಂತ ತಮಾಷೆ ಇನ್ನೊಂದಿಲ್ಲ ಎಂಬಂತೆ) ನನ್ನ ಕೂಗಾಟಗಳನ್ನು ಕೇಳುವವರೆಗೆ; ಎಲ್ಲವನ್ನೂ ನೀವು ಮಾಡಿದ್ದೀರಿ. ನನ್ನ ಸೇಫ್ ಪ್ಲೇಸ್ ಆಗಿರುವುದಕ್ಕೆ ಮತ್ತು ನೀನು ನೀನಾಗಿರುವುದಕ್ಕೆ ಧನ್ಯವಾದಗಳು! ನಾನು ಕೊನೆಯದಾಗಿ ಹೇಳೊದು ಏನಂದ್ರೆ ಕಷ್ಟದಲ್ಲೂ-ಸುಖದಲ್ಲೂ ನಾನು ನಿನ್ನೊಂದಿಗೆ ಇರುವೆ. ಐ ಲವ್ ಯೂ ರುಕ್ಕು ಎಂದು ಪ್ರೀತಿಯ ಸಂದೇಶ ನೀಡಿದ್ದಾರೆ.
68
ಮುದ್ದಾದ ಫೋಟೊಸ್
ಮುದ್ದಾದ ಮೆಸೇಜ್ ಜೊತೆಗೆ ಚೈತ್ರಾ ಆಚಾರ್ ತಮ್ಮ ಗೆಳತಿ ಜೊತೆಗಿನ ಮುದ್ದಾದ ಫೋಟೊಗಳನ್ನು ಸಹ ಹಂಚಿಕೊಂಡಿದ್ದಾರೆ. ಇದರಲ್ಲಿ ಇಬ್ಬರ ಸೆಲ್ಫಿ ಫೋಟೊಗಳು ಹಾಗೂ ಚೈತ್ರಾ ಕ್ಲಿಕ್ ಮಾಡಿದಂತಹ ರುಕ್ಮಿಣಿಯ ಫೋಟೊಗಳು ಹಾಗೂ ವಿಡಿಯೋ ಕಾಲ್ ಫೋಟೊಗಳು ಸೇರಿವೆ.
78
ಸಪ್ತಸಾಗರದಾಚೆ ಎಲ್ಲೋ ಚೆಲುವೆಯರು
ಚೈತ್ರಾ ಆಚಾರ್ ಮತ್ತು ರುಕ್ಮಿಣಿ ವಸಂತ್ ಜೊತೆಯಾಗಿ ಸಪ್ತಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ನಟಿಸಿದ್ದರು. ಇವರಿಬ್ಬರ ಪಾತ್ರಗಳು ಜೊತೆಯಾಗಿರಲಿಲ್ಲ. ಆದರೆ ತೆರೆಯ ಹೊರಗೆ ಇವರಿಬ್ಬರ ಬಾಂದವ್ಯ ಮಾತ್ರ ತುಂಬಾನೆ ಚೆನ್ನಾಗಿತ್ತು.
88
ಸಿನಿಮಾಗಳು
ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಇಬ್ಬರೂ ನಟಿಯರಿಗೆ ಜನಪ್ರಿಯತೆ ತಂದುಕೊಟ್ಟಿತು. ಸದ್ಯ ರುಕ್ಮಿಣಿ ಮತ್ತು ಚೈತ್ರಾ ಇಬ್ಬರೂ ಕೂಡ ಕನ್ನಡದ ಜೊತೆ ಜೊತೆಗೆ ಬೇರೆ ಭಾಷೆಗಳಲ್ಲೂ ಮಿಂಚುತ್ತಿದ್ದಾರೆ.