ಕನ್ನಡ ಚಿತ್ರರಂಗದ ಅದ್ಭುತ ನಟಿ, ಪಟಪಟ ಮಾತಿನಮಲ್ಲಿ ಚೈತ್ರಾ ಆಚಾರ್ ಸಿಕ್ಕಾಪಟ್ಟೆ ಕೂಲ್ ಆಗಿ ಟ್ರೋಲ್ ಮಾಡುವವರು ಹಾಗೂ ಟ್ರೋಲ್ ಆಗುವವರ ಬಗ್ಗೆ ಮಾತನಾಡಿದ್ದಾರೆ. ಈ ಹಿಂದೆ ಹಾಟ್ ಫೋಟೋ ಒಂದಕ್ಕೆ ಚೈತ್ರಾ ಕೂಡ ಟ್ರೋಲ್ ಆಗಿದ್ದರು.
26
'ಟ್ರೋಲ್ ಮಾಡುವವರು ಯಾವತ್ತೂ ಫೇಮಸ್ ಆಗಲ್ಲ ಟ್ರೋಲ್ ಆಗುವವರು ಬೇಗ ಫೇಮಸ್ ಆಗುತ್ತಾರೆ. ನೀನು ಎಲ್ಲೋ 5 ಸಾವಿರ-20 ಸಾವಿರ ರೂಪಾಯಿ ಸಂಬಳ ತೆಗೆದುಕೊಂಡು ಬೇರೆ ಅವರ ಪೋಸ್ಟ್‌ಗೆ ಕಾಮೆಂಟ್ ಮಾಡ್ಕೊಂಡು ನೀವು ಎಷ್ಟು ಫೇಮಸ್ ಮಾಡ್ತಿದ್ದೀರಾ ಗೊತ್ತಾ?' ಎಂದು ಖಾಸಗಿ ಸಂದರ್ಶನದಲ್ಲಿ ಚೈತ್ರಾ ಮಾತನಾಡಿದ್ದಾರೆ.
36
'ಇಲ್ಲಿ ಯೋಚನೆ ಮಾಡಿ ಫ್ರೀ ಪ್ರಚಾರ ಪಡೆದುಕೊಂಡು ಲಕ್ಷಗಟ್ಟಲೆ ದುಡಿಯುತ್ತಿದ್ದಾರೆ. ಯಾರೋ ಕಾಮೆಂಟ್ ಮಾಡಿರುವುದಕ್ಕೆ ನಾನು ಪ್ರತಿಕ್ರಿಯೆ ಕೊಟ್ಟುಬಿಟ್ಟರೆ ಅವನಿಗೆ ಫ್ರೀ ಪಬ್ಲಿಸಿಟಿ ಸಿಗುತ್ತದೆ' ಎಂದು ಚೈತ್ರಾ ಹೇಳಿದ್ದಾರೆ.
46
'ನನ್ನ ಫೋಟೋ ಬಂದು ಕಾಮೆಂಟ್ ಮಾಡುವವರು ಏನೋ ಶಾಸ್ತ್ರ ಸಂಪ್ರದಾಯ ಸಂಸ್ಕೃತಿ ಅಂತ ಮಾತನಾಡುತ್ತಿದ್ದಾರೆ ಅವರು ಮಾತು ಕೇಳೋಣ ಅಂತ ಪ್ರೊಪೈಲ್ ನೋಡಿಬಿಟ್ಟರೆ ಅಷ್ಟೇ. ಜನರು ಬಂದು ಕಾಮೆಂಟ್ ಮಾಡುವುದು ಒಂದು ಟ್ರೋಲ್ ಮಾಡುವ ರೀತಿ ಒಂದು'
56
'ಫೋಟೋ ಇನ್‌ಸೈಟ್ ನೋಡಿದರೆ ಅವರು ಮಾಡಿರುವ ಕೆಲಸ ಗಮನಕ್ಕೆ ಬರುತ್ತದೆ. ನಾನು ಆ ಫೋಟೋ ಹಾಕಿದಾಗ ಕೇವಲ 12 ಸಾವಿರ ಫಾಲೋವರ್ಸ್ ಇದ್ರು ಆದರೆ 3 ಮಿಲಿಯನ್ ಜನರು ಅಕೌಂಟ್ ಹುಡುಗಿ ಆ ಫೋಟೋ ನೋಡಿದ್ದಾರೆ'
66
'ಅಷ್ಟೇ ಅಲ್ಲ ಎದೆ ಕಾಣಿಸುವಂತೆ ಹಾಕಿದ್ದ ಫೋಟೋವನ್ನು ಸುಮಾರು 8 ಸಾವಿರ ಜನರು ಸೇವ್ ಮಾಡುಕೊಂಡಿದ್ದಾರೆ. ಯಾಕೆ ನೀವು ಒಳ್ಳೆಯವರು ಸೇವ್ ಮಾಡಿಕೊಳ್ಳಬಾರದು ಅಲ್ವಾ? ಇಂತಹ ಜನರು ಫೋಟೋ ಸೇವ್ ಮಾಡಿಕೊಂಡು ಫಾಲೋ ಮಾಡುತ್ತಿಲ್ಲ ಅಂದ್ರೆ ಅವರ ಉದ್ದೇಶ ಸಂಪೂರ್ಣವಾಗಿ ಅರ್ಥವಾಗುತ್ತದೆ ಎಂದಿದ್ದಾರೆ ಚೈತ್ರಾ.