Turned 19 today ಎಂದ ಬೋಲ್ಡ್ ಬ್ಯೂಟಿ ಚೈತ್ರಾ ಆಚಾರ್… ನಟಿಯ ನಿಜವಾದ ವಯಸ್ಸೆಷ್ಟು ಗೊತ್ತ?

Published : Mar 05, 2025, 03:51 PM ISTUpdated : Mar 05, 2025, 04:18 PM IST

ಚಂದನವನದ ಬೋಲ್ಡ್ ಮತ್ತು ಬ್ಯೂಟಿಫುಲ್ ನಟಿ ಚೈತ್ರಾ ಆಚಾರ್ ಇತ್ತೀಚಿಗೆ ತಮ್ಮ 30ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ನನಗೀಗ ಜಸ್ಟ್ 19 ಎಂದು ಹೇಳಿದ್ದಾರೆ.   

PREV
17
Turned 19 today ಎಂದ ಬೋಲ್ಡ್ ಬ್ಯೂಟಿ ಚೈತ್ರಾ ಆಚಾರ್… ನಟಿಯ ನಿಜವಾದ ವಯಸ್ಸೆಷ್ಟು ಗೊತ್ತ?

ಸ್ಯಾಂಡಲ್ ವುಡ್ ನ ಬೋಲ್ಡ್ ಬ್ಯೂಟಿ ಚೈತ್ರಾ ಆಚಾರ್ (Chaithra Achar), ಮಾರ್ಚ್ 4 ರಂದು ತಮ್ಮ 30ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಜೊತೆಗೆ ಹುಟ್ಟು ಹಬ್ಬದ ಫೋಟೋಗಳನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ತಮಗೀಗ ಕೇವಲ 19 ವರ್ಷ ಎಂದಿದ್ದಾರೆ. ಅವರು ಯಾಕೆ ಹೀಗೆ ಹೇಳಿದ್ರು ಅನ್ನೋದನ್ನು ಕೂಡ ಅವರೇ ತಿಳಿಸಿದ್ದಾರೆ. 
 

27

ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳ ಜೊತೆಗೆ ಕ್ಯಾಪ್ಶನ್ ಬರೆದಿರುವ ನಟಿ ಚೈತ್ರಾ ಆಚಾರ್ ಇವತ್ತಿಗೆ 19 ತುಂಬಿದೆ. ನಾನು 30 ವರ್ಷದವಳಂತೆ ಕಾಣುವವರೆಗೂ ನನ್ನ ವಯಸ್ಸು 19 ಎಂದು ಬರೆದುಕೊಂಡಿದ್ದಾರೆ. (Turned 19 today. Until I look #30 , #19 is my age! Period.) ಜೊತೆಗೆ ಕೇಕ್ ಹಾಗೂ ತಮ್ಮ ಫೋಟೊಗಳನ್ನು ಶೇರ್ ಮಾಡಿದ್ದಾರೆ. 
 

37

ಜೊತೆಗೆ ಇಂದು ಶುಭಾಶಯಗಳು ಮತ್ತು ಪ್ರೀತಿಯನ್ನು ತೋರಿದ ನನ್ನ ಎಲ್ಲಾ ನೆಚ್ಚಿನ ಜನರು, ಸ್ನೇಹಿತರು, ಹಿತೈಷಿಗಳಿಗೆ ಧನ್ಯವಾದಗಳು. ನನ್ನ ಹೃದಯ ತುಂಬಿದೆ! ಮತ್ತು ನಾನು ಚಿಕ್ಕವಳೆಂದು  ಭಾವಿಸುತ್ತೇನೆ. ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ! ಮತ್ತು ದಯವಿಟ್ಟು ನನ್ನನ್ನು ಹೆಚ್ಚು ಪ್ರೀತಿಸುವುದನ್ನು ಮುಂದುವರಿಸಿ, ಏಕೆಂದರೆ ನಾನು ಮುಂದೆ ನಿಮ್ಮ ಹುಡುಗಿ ಎಂದು ಬರೆಯುವ ಮೂಲಕ ಶುಭ ಕೋರಿದವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. 
 

47

ಇನ್ನು ಚೈತ್ರಾ ಆಚಾರ್ ಸದ್ಯ ತಮಿಳು ಸಿನಿಮಾ 3BHK ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಈ ಸಿನಿಮಾದಲ್ಲಿ ನಟರಾದ ಶರತ್ ಕುಮಾರ್, ದೇವಯಾನಿ, ಸಿದ್ಧಾರ್ಥ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಸೆಟ್ ನಲ್ಲೂ ಕೂಡ ಪೂರ್ತಿ ಸಿನಿಮಾ ತಂಡ ಅಡ್ವಾನ್ಸ್ ಆಗಿ ಚೈತ್ರಾ ಆಚಾರ್ ಹುಟ್ಟುಹಬ್ಬವನ್ನು ಸಂಭ್ರಮದಿಂದ ಸೆಲೆಬ್ರೇಟ್ ಮಾಡಿದ್ದಾರೆ. 
 

57

ಈ ಕಲಾವಿದರು ಮತ್ತು ತಂತ್ರಜ್ಞರೊಂದಿಗೆ ನಂಬಲಾಗದ ಪ್ರಯಾಣ! ಮತ್ತು ನಮ್ಮ ಚಿತ್ರ #3BHK ಚಿತ್ರೀಕರಣವನ್ನು ಮುಗಿಸುವ ಸಮಯದಲ್ಲಿ, ಸೆಟ್ನಲ್ಲಿ ಅಡ್ವಾನ್ಸ್ ಆಗಿ ನನ್ನ ಹುಟ್ಟುಹಬ್ಬವನ್ನು ಆಚರಿಸಿದ್ದು, ನನಗೆ ತುಂಬಾನೆ ವಿಶೇಷ ಫೀಲ್ ಕೊಟ್ಟಿತು. ಶರತ್ ಸರ್ ಹೇಳಿದಂತೆ, ನನಗೆ ಈ ವರ್ಷ 19 ವರ್ಷ ತುಂಬಿದೆ ಎಂದು ಬರೆದುಕೊಂಡಿದ್ದಾರೆ. 
 

67

ಚೈತ್ರಾ ಆಚಾರ್ ಕನ್ನಡದ ಒಬ್ಬ ಪ್ರತಿಭಾನ್ವಿತ ನಟಿ. ಎಂಥದ್ದೇ ಪಾತ್ರಗಳನ್ನು ಕೊಟ್ಟರೂ ಸಹ ಸಲೀಸಾಗಿ ಮಾಡಿ ಮುಗಿಸುವ ಸುಂದರಿ. ಟೋಬಿ ಸಿನಿಮಾದ ಪಾತ್ರ ಹಾಗೂ ಸಪ್ತಸಾಗರದಾಚೆ ಸಿನಿಮಾದ ಸುರಭಿ ಪಾತ್ರ ನೋಡಿದ್ರೆನೆ ಈಕೆಯೊಬ್ಬ ಅಭಿನಯ ಚತುರೆ ಅನ್ನೋದು ಗೊತ್ತಾಗುತ್ತೆ. ಸದ್ಯ ನಟಿ ಕನ್ನಡದ ಜೊತೆ ಜೊತೆಗೆ ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 
 

77

ಚೈತ್ರಾ ಶರತ್ ಕುಮಾರ್, ದೇವಯಾನಿ, ಸಿದ್ಧಾರ್ಥ್ ಜೊತೆಗೆ 3BHK ಸಿನಿಮಾದಲ್ಲಿ ಹಾಗೂ ಶಶಿ ಕುಮಾರ್ ಜೊತೆಗೆ ಮೈ ಲಾರ್ಡ್ ಎನ್ನುವ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಕೆಯೊಬ್ಬ ಅದ್ಭುತ ಗಾಯಕಿ ಕೂಡ ಹೌದು. ಸೋಜುಗಾದ ಸೂಜು ಮಲ್ಲಿಗೆ ಹಾಡಿಗೆ ಇವರಿಗೆ ಫಿಲಂ ಫೇರ್ ಪ್ರಶಸ್ತಿ ಕೂಡ ಬಂದಿತ್ತು. 
 

click me!

Recommended Stories