ಬರಗೂರು ‘ತಾಯಿ ಕಸ್ತೂರ್‌ ಗಾಂಧಿ’ ಚಿತ್ರಕ್ಕೆ ಡಲ್ಲಾಸ್‌ ಚಿತ್ರೋತ್ಸವ ಪ್ರಶಸ್ತಿ!

Published : Jun 02, 2022, 10:55 AM IST

ಹರಿಪ್ರಿಯಾ ಮತ್ತು ದುನಿಯಾ ಕಿಶೋರ್ ಕಾಂಬಿನೇಷನ್‌ನ ಸಿನಿಮಾ ತಾಯಿ ಕಸ್ತೂರ್ ಗಾಂಧಿ ಸಿನಿಮಾ ಡಲ್ಲಾಸ್‌ ಚಿತ್ರೋತ್ಸವ ಪ್ರಶಸ್ತಿ ಪಡೆದಿದೆ. 

PREV
16
ಬರಗೂರು ‘ತಾಯಿ ಕಸ್ತೂರ್‌ ಗಾಂಧಿ’ ಚಿತ್ರಕ್ಕೆ ಡಲ್ಲಾಸ್‌ ಚಿತ್ರೋತ್ಸವ ಪ್ರಶಸ್ತಿ!

ಬರಗೂರು ರಾಮಚಂದ್ರಪ್ಪ (Baraguru Ramachandrappa) ನಿರ್ದೇಶನದ, ಹರಿಪ್ರಿಯಾ (Hari priya) ಹಾಗೂ ಕಿಶೋರ್‌ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ‘ತಾಯಿ ಕಸ್ತೂರ್‌ ಗಾಂಧಿ’ ಚಿತ್ರ.

26

‘ತಾಯಿ ಕಸ್ತೂರ್‌ ಗಾಂಧಿ’ ಚಿತ್ರ ಅಮೆರಿಕಾದಲ್ಲಿ ನಡೆದ ಡಲ್ಲಾಸ್‌ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಸಂಕಲನ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. 

36

ಸಂಕಲನಕಾರ ಸುರೇಶ್‌ ಅರಸು ಅವರಿಗೆ ಈ ಪ್ರಶಸ್ತಿ ಸಂದಿದೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಂದ ಶುಭಾಶಯಗಳು ಹರಿದು ಬರುತ್ತಿದೆ.

46

‘ಸುರೇಶ್‌ ತಮ್ಮ ವೃತ್ತಿ ಪಯಣದಲ್ಲಿ ಈಗಾಗಲೇ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಡಲ್ಲಾಸ್‌ ಚಿತ್ರೋತ್ಸವದಲ್ಲಿ ನಮ್ಮ ಚಿತ್ರಕ್ಕಾಗಿ ಅವರಿಗೆ ಅತ್ಯುತ್ತಮ ಸಂಕಲನ ಪ್ರಶಸ್ತಿ ಸಿಕ್ಕಿದ್ದರಿಂದ ಖುಷಿ ಆಗುತ್ತಿದೆ’ ಎಂದು ನಿರ್ದೇಶಕ ಬರಗೂರು ರಾಮಚಂದ್ರಪ್ಪ ಹೇಳುತ್ತಾರೆ. 

56

ಬಿ ಜಿ ಗೀತಾ ಚಿತ್ರದ ನಿರ್ಮಾಪಕರು. ಶ್ರೀನಾಥ್‌, ಸುಂದರ್‌ ರಾಜ್‌, ಪ್ರಮೀಳಾ ಜೋಷಾಯ್‌, ರೇಖಾ, ವತ್ಸಲಾ ಮೋಹನ್‌ ಚಿತ್ರದಲ್ಲಿ ನಟಿಸಿದ್ದಾರೆ. ಶಮಿತಾ ಮಲ್ನಾಡ್‌ ಸಂಗೀತ, ನಾಗರಾಜ ಅದವಾನಿ ಕ್ಯಾಮೆರಾ ಚಿತ್ರಕ್ಕಿದೆ.

66

ಗಾಂಧೀಜಿ ಬದುಕಿನಲ್ಲಿ ಮಾತ್ರವಲ್ಲ, ಸ್ವಾತಂತ್ರ್ಯ ಚಳುವಳಿಯಲ್ಲೂ ಕಸ್ತೂರ್ ಬಾ ವಹಿಸಿದ ಪಾತ್ರ ಬಹಳ ಮಹತ್ವದ್ದು. ಹೀಗಾಗಿ ಚಿತ್ರದಲ್ಲಿ ಕಸ್ತೂರ್ ಬಾ ಅವರ ಜತೆಗೆ ಗಾಂಧೀಜಿ ಅವರ ಜೀವನ ಕೂಡ ಕಟ್ಟಿಕೊಡಲಿದೆ. 

Read more Photos on
click me!

Recommended Stories