ಆಶಿಕಾ ರಂಗನಾಥ್ ಅವರು ಸಿಂಪಲ್ ಸುನಿ ನಿರ್ದೇಶನದ ‘ಗತ ವೈಭವ’ ಚಿತ್ರದಲ್ಲಿ ದೇವಕನ್ಯೆ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಇಂದು ಆಶಿಕಾ ರಂಗನಾಥ್ ಅವರ ಪಾತ್ರದ ಲುಕ್ಕು ಬಿಡುಗಡೆಯಾಗಿದೆ. ದುಶ್ಯಂತ್ ಈ ಚಿತ್ರದ ನಾಯಕ.
‘ಚಿತ್ರದ ಹೆಸರಿಗೆ ತಕ್ಕಂತೆ ಇಡೀ ಸಿನಿಮಾ ವೈಭವ ಮತ್ತು ಅದ್ದೂರಿಯಿಂದ ಕೂಡಿರುತ್ತದೆ. ಹೀಗಾಗಿ ಚಿತ್ರದಲ್ಲಿ ನಾಯಕ ಮತ್ತು ನಾಯಕಿಗೆ ಎರಡು ರೀತಿಯ ಪಾತ್ರಗಳು ಇವೆ'
'ಪೋರ್ಚುಗೀಸ್ ಹಾಗೂ ಪೈರೇಟ್ ಲುಕ್‌ಗಳಲ್ಲಿ ದುಶ್ಯಂತ್ ಹಾಗೂ ಆಶಿಕಾ ರಂಗನಾಥ್ ತುಂಬಾ ಚೆನ್ನಾಗಿ ಕಾಣಿಸುತ್ತಾರೆ’ ಎಂಬುದು ನಿರ್ದೇಶಕ ಸಿಂಪಲ್ ಸುನಿ ಮಾತುಗಳು.
ಜ್ಯೂಡಾ ಸ್ಯಾಂಡಿ ಸಂಗೀತ, ವಿಲಿಯಂ ಡೇವಿಡ್ ಕ್ಯಾಮೆರಾ ಚಿತ್ರಕ್ಕಿದೆ. ಸುನಿ ತಮ್ಮ ಸುನಿ ಸಿನಿಮಾಸ್ ಮೂಲಕ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಆಶಿಕಾ ಇತ್ತೀಚಿಗಷ್ಟೆ ಥೈಲ್ಯಾಂಡ್ ಪ್ರವಾಸಕ್ಕೆ ತೆರಳಿದ್ದರು. ಥೈಲ್ಯಾಂಡ್ ಟ್ರಿಪ್ ಎಂಜಾಯ್ ಮಾಡಿ ಬಂದಿರುವ ಆಶಿಕಾ ಇದೀಗ ಸುಂದರ ಪೋಟೋಗಳನ್ನು ಶೇರ್ ಮಾಡಿದ್ದಾರೆ. ಥೈಲ್ಯಾಂಡ್ ಕಡಲ ಕಿನಾರೆಯಲ್ಲಿ ಹಾಟ್ ಅವತಾರ ತಾಳಿರುವ ಆಶಿಕಾ ಫೋಟೋಗಳು ವೈರಲ್ ಆಗಿವೆ.
ಆಶಿಕಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಆಗಾಗಾ ಪೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆಶಿಕಾ ಮಸ್ತ್ ಹಾಟ್ ಫೋಟೋಗಳು ಅಭಿಮಾನಿಗಳ ಟೆಂಪ್ರೇಚರ್ ಹೆಚ್ಚಿಸಿದ್ದಾರೆ.