ಐಶ್ವರ್ಯ-ಆಯುಷ್; ವಿವಾದದ ಬೆನ್ನಲೆ ಉಪೇಂದ್ರ ಮಕ್ಕಳ ಫೋಟೋ ವೈರಲ್

First Published | Aug 17, 2023, 1:15 PM IST

 ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ನಟ ಉಪೇಂದ್ರ ಫ್ಯಾಮಿಲಿ ಫೋಟೋ. ಮಕ್ಕಳ ಕಾಲೇಜ್‌ಗೆ ಕಾಲಿಟ್ಟ ಸಂಭ್ರಮದಲ್ಲಿ ಪ್ರಿಯಾಂಕಾ. 

ಕನ್ನಡ ಚಿತ್ರರಂಗ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರಿಯಾಂಕಾ ಮುದ್ದಾದ ಮಕ್ಕಳು ಐಶ್ವರ್ಯ ಮತ್ತು ಆಯುಷ್ ಕಾಲೇಜ್‌ಗೆ ಕಾಲಿಟ್ಟಿದ್ದಾರೆ. 

ಮಕ್ಕಳನ್ನು ಕಾಲೇಜ್ ಮೊದಲ ದಿನ ಡ್ರಾಪ್ ಮಾಡಲು ಆಗಮಿಸಿದ ಪ್ರಿಯಾಂಕಾ ಫೋಟೋ ಕ್ಲಿಕ್ ಮಾಡಿಕೊಂಡಿದ್ದಾರೆ. ಮಣಿಪಾಲ್‌ ಯುನಿವರ್ಸಿಟಿ ಫೋಟೋ ಕಾಣಿಸುತ್ತದೆ.

Tap to resize

'ನನ್ನ ಇಬ್ಬರು ಮಕ್ಕಳು ಈ ವರ್ಷ ಕಾಲೇಜ್‌ಗೆ ಕಾಲಿಟ್ಟಿದ್ದಾರೆ. ಇನ್ನೂ ಸ್ಕೂಲಿಗೆ ಡ್ರಾಪ್ ಮಾಡಿ ಬರುವ ಭಾವನೆಯಲ್ಲಿರುವೆ. ಸಮಯ ಎಷ್ಟು ಬೇಗ ಓಡುತ್ತದೆ.' 

ಪ್ರತಿ ಕ್ಷಣ ಎಂಜಾಯ್ ಮಾಡುತ್ತಿರುವೆ ಎಂದು ಪ್ರಿಯಾಂಕಾ ಬರೆದುಕೊಂಡಿದ್ದಾರೆ.ಫೋಟೋದಲ್ಲಿ ಮಕ್ಕಳಿಬ್ಬರು ಬ್ಲ್ಯಾಕ್ ಔಟ್‌ಫಿಟ್ ಧರಿಸಿದ್ದಾರೆ, ಪ್ರಿಯಾಂಕಾ ಪಿಂಕ್ ಸೆಲ್ವಾರ್ ಧರಿಸಿದ್ದಾರೆ.

 ಆಯುಷ್ ಉಪೇಂದ್ರ ಸಿನಿಮಾ ಮಾಡಲಿದ್ದಾರೆ ಅನ್ನೋ ಸುದ್ದಿ ಇತ್ತು. ಆದರೆ ಉಪ್ಪಿ ಫ್ಯಾಮಿಲಿ ವಿದ್ಯಾಭ್ಯಾಸಕ್ಕೆ ಮೊದಲ ಪ್ರಾಮುಖ್ಯತೆ ನೀಡಲಿದ್ದಾರೆ. 

ಇನ್ನು ಕೆಲವು ದಿನಗಳ ಹಿಂದೆ ಉಪ್ಪಿ ಫ್ಯಾಮಿಲಿ ಜೊತೆ ನಡೆದ ಖಾಸಗಿ ಸಂದರ್ಶನ ವೈರಲ್ ಆಗಿತ್ತು. ಆಗ ಮಕ್ಕಳು ಕನ್ನಡ ಮಾತನಾಡುವ ಶೈಲಿ ಟ್ರೋಲ್ ಆಗಿತ್ತು. 

ಐಶ್ವರ್ಯ ಉಪೇಂದ್ರ ತುಂಬಾನೇ ಸ್ಟೈಲಿಷ್‌. ಇನ್‌ಸ್ಟಾಗ್ರಾಂ ಖಾತೆ ಪ್ರೈವೇಟ್ ಅಗಿಟ್ಟಿದ್ದು 10 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ನ ಹೊಂದಿದ್ದಾರೆ. 

ಇನ್ನು ಪುತ್ರ ಆಯುಷ್‌ ಕೂಡ ಸೋಷಿಯಲ್ ಮೀಡಿಯಾ ಸ್ಟಾರ್. ಸಖತ್ ಬೈಕ್ ಕ್ರೇಜ್ ಹೊಂದಿದ್ದು ಇನ್‌ಸ್ಟಾಗ್ರಾಂ ತುಂಬಾ ಐಷಾರಾಮಿ ಬೈಕ್‌ಗಳ ಫೋಟೋ ನೋಡಬಹುದು. 

Latest Videos

click me!