ಪುನೀತ್ ರಾಜಕುಮಾರ್ ನನಗೆ ಸ್ಪೂರ್ತಿ… ಅವರಂತೆ ಆಗುವ ಬಯಕೆ ಎಂದ ರಣವಿಕ್ರಮ ಬೆಡಗಿ ಅದಾ ಶರ್ಮಾ

Published : Apr 16, 2025, 03:06 PM ISTUpdated : Apr 16, 2025, 03:18 PM IST

ರಣವಿಕ್ರಮ ಸಿನಿಮಾದಲ್ಲಿ ಪುನೀತ್ ರಾಜಕುಮಾರ್ ಗೆ ನಾಯಕಿಯಾಗಿದ್ದ ಬೆಡಗಿ ಅದಾ ಶರ್ಮಾ, ಇದೀಗ ಪುನೀತ್ ರಾಜಕುಮಾರ್ ಅವರನ್ನು ನೆನೆದು ಅವರೇ ನನಗೆ ಸ್ಪೂರ್ತಿ ಎಂದಿದ್ದಾರೆ.   

PREV
17
ಪುನೀತ್ ರಾಜಕುಮಾರ್ ನನಗೆ ಸ್ಪೂರ್ತಿ… ಅವರಂತೆ ಆಗುವ ಬಯಕೆ ಎಂದ ರಣವಿಕ್ರಮ ಬೆಡಗಿ ಅದಾ ಶರ್ಮಾ

ರಣವಿಕ್ರಮ ಸಿನಿಮಾ  (Ranavikrama Film) ಮೂಲಕ ಪುನೀತ್ ರಾಜಕುಮಾರ್ ಗೆ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಬೆಡಗಿ ಅದಾ ಶರ್ಮಾ, ಕೇರಳ ಸ್ಟೋರಿ ಮೂಲಕ ದೇಶದೆಲ್ಲೆಡೆ ಮನೆಮಾತಾದರು. ಇದೀಗ ರಣವಿಕ್ರಮ ಸಿನಿಮಾಗೆ 9 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಟ ಪುನೀತ್ ರಾಜಕುಮಾರ್ ಕುರಿತು ಮನದಾಳದ ಮಾತುಗಳನ್ನು ಹೇಳಿದ್ದಾರೆ. 
 

27

ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ರಣವಿಕ್ರಮ ಸಿನಿಮಾದ ಹಾಡನ್ನು ಹಂಚಿಕೊಂಡಿರುವ ಅದಾ ಶರ್ಮಾ (Adah Sharma), ಅದರ ಜೊತೆಗೆ ದೊಡ್ಡ ಪ್ಯಾರಾಗ್ರಾಫ್ ನಲ್ಲಿ ಪುನೀತ್ ರಾಜಕುಮಾರ್ ತಮಗೆ ಸ್ಪೂರ್ತಿಯಾಗಿದ್ದು ಹೇಗೆ? ಎನ್ನುತ್ತಾ, ಅಪ್ಪು ಜೊತೆ ನಟಿಸಿದ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. 

37

9 ವರ್ಷಗಳ ಹಿಂದೆ ನಾನು ಕನ್ನಡದಲ್ಲಿ ಅತಿದೊಡ್ಡ ಸೂಪರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ (Superstar Puneeth Rajkumar) ಅವರ ಎದುರು ಡೆಬ್ಯೂ ಮಾಡಿದೆ! ಬೆಂಗಳೂರು ವಿಮಾನ ನಿಲ್ದಾಣದಿಂದ ಹೋಟೆಲ್‌ವರೆಗೆ ದೊಡ್ಡ ಬ್ರಾಂಡ್‌ಗಳ 50 ಕ್ಕೂ ಹೆಚ್ಚು ಹೋರ್ಡಿಂಗ್‌ಗಳ ಮೇಲೆ ಪುನೀತ್ ರಾಜಕುಮಾರ್ ಇದ್ದರು. ಸೆಟ್ ಹೊರಗೆ ಹಿಂದಿನ ರಾತ್ರಿಯಿಂದಲೇ ಅವರನ್ನು ನೋಡಲು ನಿಂತಿದ್ದ ಜನರ ದಂಡೇ ಇತ್ತು. 
 

47

ನಾನು ತುಂಬಾ ನರ್ವಸ್ ಆಗಿದ್ದೆ ಮತ್ತು ಎಲ್ಲರೂ ನನಗೆ ಈ ಅವಕಾಶ ಸಿಕ್ಕಿದ್ದು ಎಷ್ಟು ಅದೃಷ್ಟ ಎಂದು ಪದೇ ಪದೇ ಹೇಳುತ್ತಿದ್ದರು. ಆದರೆ ನನಗೆ ಸಿಕ್ಕ ಅದೃಷ್ಟ ಎಲ್ಲಾ ನಿರೀಕ್ಷೆಗಳನ್ನು ಮೀರಿತ್ತು. ತುಂಬಾ ದಯಾಳು, ತನ್ನ ತಾರಾಪಟ್ಟವನ್ನು ಬಳಸಿಕೊಂಡು ತುಂಬಾ ಜನರ ಮುಖದಲ್ಲಿ ನಗು ತರಿಸುವ, ತನ್ನ ಎಲ್ಲಾ ಅಭಿಮಾನಿಗಳನ್ನು ವೈಯಕ್ತಿಕವಾಗಿ ಭೇಟಿಯಾಗುವ, ಸಮಯಪ್ರಜ್ಞೆ ಹೊಂದಿರುವ, ಕನಸಿನಂತೆ ನೃತ್ಯ ಮಾಡುವ ಮತ್ತು ಆದರೂ ರಿಹರ್ಸಲ್ ಮಾಡಲು ಮರೆಯದ, ತನ್ನ ಮತ್ತು ನನ್ನ ಸಂಭಾಷಣೆಗಳನ್ನು ನೆನಪಿಟ್ಟುಕೊಳ್ಳುವ ಮತ್ತು ನಾನು ಸುತ್ತಲೂ ಇರುವಾಗಲೆಲ್ಲಾ ನನ್ನನ್ನು ಸೇರಿಸಿಕೊಂಡು ಮಾತನಾಡುತ್ತಿದ್ದ ವ್ಯಕ್ತಿ ಪುನೀತ್ ರಾಜ್ ಕುಮಾರ್. 
 

57

ನಾನು ಕನ್ನಡ ಮಾತನಾಡದ ಕಾರಣ ಅವರು ನನಗಾಗಿ ವಿಷಯಗಳನ್ನು ಅನುವಾದಿಸಿದರು! ಅವರು ತಮ್ಮ ಹೆಂಡತಿ ಮತ್ತು ಕುಟುಂಬದ ಬಗ್ಗೆ ತುಂಬಾ ಪ್ರೀತಿಯಿಂದ ಮಾತನಾಡಿದರು ಮತ್ತು 45 ಡಿಗ್ರಿ ಶಾಖದಲ್ಲೂ ಅವರು ಸೆಟ್‌ನಲ್ಲಿ ವಾತಾವರಣವನ್ನು ಖುಷಿಯಾಗಿಡುವಲ್ಲಿ ಯಶಸ್ವಿಯಾಗಿದ್ದರು.
 

67

ಒಂದು ದಿನ ನಾನು ಅವರಂತೆ ಈ ಸ್ಟಾರ್‌ಡಮ್ ಮಟ್ಟವನ್ನು ತಲುಪಿದರೆ, ನಾನು ಅವರ ಈ ಗುಣಗಳನ್ನೇ ಗುರಿಯಾಗಿಸಿಕೊಳ್ಳಬೇಕು ಮತ್ತು ಪರದೆಯ ಮೇಲೆ, ಪರದೆಯ ಹೊರಗೆ ನನ್ನ ಪಾತ್ರವನ್ನು ಚೆನ್ನಾಗಿ ಮಾಡಬೇಕೆಂಬ ಬಯಕೆಯೊಂದಿಗೆ ನಾನು ಅವರಂತೆ ಇರಬೇಕು ಎಂದು ನಾನು ಭಾವಿಸಿದ್ದೇನೆ ಎಂದು ಅಪ್ಪು ಕುರಿತು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ಅದಾ ಶರ್ಮಾ. 
 

77

ನಿಮ್ಮ ಬಗ್ಗೆ ಹೇಳಿದಷ್ಟು ಮುಗಿಯೋದೆ ಇಲ್ಲ. ಪುನೀತ್ ರಾಜ್‌ಕುಮಾರ್, ನೀವು ಎಲ್ಲೇ ಇದ್ದರೂ ನಿಮಗೆ ಥ್ಯಾಂಕ್ಯೂ ಮತ್ತು ರಣ ವಿಕ್ರಮದಲ್ಲಿ ಕನ್ನಡದ ಅತ್ಯುತ್ತಮ ಚೊಚ್ಚಲ ಚಿತ್ರಕ್ಕಾಗಿ ನಿರ್ದೇಶಕ ಪವನ್ ಒಡೆಯರ್ (Pavana Wadeyar) ಅವರಿಗೆ ಧನ್ಯವಾದಗಳು ಎನ್ನುತ್ತಾ ತಮ್ಮ ಪೋಸ್ಟ್ ಮುಗಿಸಿದ್ದಾರೆ ಅದ್ದಾ ಶರ್ಮಾ.  

Read more Photos on
click me!

Recommended Stories