ಶೀಘ್ರವೇ ಕೆಜಿಎಫ್ 3, ಹಿಂಟ್ ಕೊಟ್ಟ ಹೊಂಬಾಳೆ ಫಿಲ್ಮ್ಸ್
ಕೆಜಿಎಫ್ 2 ಬಿಡುಗಡೆಯಾಗಿ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹೊಂಬಾಳೆ ಫಿಲ್ಮ್ಸ್ ಕೆಜಿಎಫ್ 3ರ ಬಗ್ಗೆ ಹಿಂಟ್ ನೀಡಿದೆ. ಈ ವಿಡಿಯೋ ಸಿನಿ ಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದ್ದು, ರಾಕಿ ಭಾಯ್ ಮತ್ತೆ ಬರ್ತಾರಾ ಎಂಬ ಪ್ರಶ್ನೆ ಮೂಡಿದೆ.
ಕೆಜಿಎಫ್ 2 ಬಿಡುಗಡೆಯಾಗಿ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹೊಂಬಾಳೆ ಫಿಲ್ಮ್ಸ್ ಕೆಜಿಎಫ್ 3ರ ಬಗ್ಗೆ ಹಿಂಟ್ ನೀಡಿದೆ. ಈ ವಿಡಿಯೋ ಸಿನಿ ಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದ್ದು, ರಾಕಿ ಭಾಯ್ ಮತ್ತೆ ಬರ್ತಾರಾ ಎಂಬ ಪ್ರಶ್ನೆ ಮೂಡಿದೆ.
ಕೆಜಿಎಫ್ ಸಿನೆಮಾ ಮೂಲಕ ಫ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರ ಟಾಕ್ಸಿಕ್ ಬಿಡುಗಡೆ ಯಾವಾಗಪ್ಪ ಅಂತ ಜನ ತಲೆ ಕಡೆಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಅಪ್ಡೇಟ್ ಬಂದಿದೆ. 'ಕೆಜಿಎಫ್ 2' ಮೂರು ವರ್ಷಗಳನ್ನು ಪೂರೈಸಿದ ಸಂತಸದಲ್ಲಿದೆ.
ರಾಕಿಂಗ್ ಸ್ಟಾರ್ ಯಶ್ ಒಟ್ಟೂ ಆಸ್ತಿ ಎಷ್ಟು? ಇಷ್ಟು ಬೇಗ ಅಷ್ಟೊಂದು ಕೋಟಿ ಸಂಪಾದಿಸಿದ್ದು ಹೇಗೆ?
ಬ್ಲಾಕ್‌ಬಸ್ಟರ್ ಚಿತ್ರ 'ಕೆಜಿಎಫ್ ಅಧ್ಯಾಯ 2' ಈ ದಿನ ಅಂದರೆ ಏಪ್ರಿಲ್ 14, 2022 ರಂದು ಬಿಡುಗಡೆಯಾಯಿತು. ಇದೀಗ ಮೂರು ವರ್ಷಗಳನ್ನು ಪೂರೈಸಿದೆ. ಈ ಕ್ಷಣವನ್ನು ಸ್ಮರಣೀಯವಾಗಿಸಲು ಚಿತ್ರದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಮುಂದಾಗಿದೆ. ಚಿತ್ರದ ಸ್ಮರಣೀಯ ಕ್ಷಣಗಳು ಮತ್ತು ಯಶ್ ಅವರ ಶೈಲಿ ಸೇರಿದಂತೆ ಹಲವಾರು ತುಣುಕುಗಳನ್ನು ಶೇರ್ ಮಾಡಿಕೊಂಡಿದ್ದು, ಕೆಜಿಎಫ್ ಚಾಪ್ಟರ್ 3 ಬರುತ್ತದೆ ಎಂಬ ಹಿಂಟ್ ಕೊಟ್ಟಿದೆ ಹೊಂಬಾಳೆ ಫಿಲ್ಮ್ಸ್.
ಕೆಜಿಎಫ್-2 ದಾಖಲೆ ಮೇಲೆ ಕಣ್ಣಿಟ್ಟಿದ್ದ L2:ಎಂಪುರಾನ್ ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್! ಮೋಹನ್‌ಲಾಲ್‌ಗೆ ಶಾಕ್!
ಈ ಮೂಲಕ ಕೆಜಿಎಫ್ ಕೊನೆಯ ಅಧ್ಯಾಯದ ಬಗ್ಗೆ ವಿಡಿಯೋದಲ್ಲಿ ಸೂಚನೆ ಕೊಟ್ಟಿದ್ದು, ಅವನು ಬಂದನು... ಅವನು ನೋಡಿದನು... ಅವನು ವಶಪಡಿಸಿಕೊಂಡನು! (He came… He saw… He conquered!) ಎಂದು ಅಡಿಬರಹ ಬರೆಯಲಾಗಿದೆ. 2.15 ನಿಮಿಗಳ ಈ ವಿಡಿಯೋದಲ್ಲಿ ಹಿರೋ ಮ್ಯಾಸಿವ್ ಎಂಟ್ರಿ, ರೊಚ್ಚಿಗೆಬ್ಬಿಸೋ ಸಂಭಾಷಣೆಗಳು ಮತ್ತು ಅದ್ಭುತ ಸಾಹಸ ದೃಶ್ಯಗಳ ಜೊತೆಗೆ, ಚಿತ್ರದ ಭಾವನಾತ್ಮಕ, ತಾಯಿ ಪ್ರೀತಿಯ ಅಂಶಗಳನ್ನು ಸಹ ಸುಂದರವಾಗಿ ತೋರಿಸಿ ಸಿನೆಮಾವನ್ನು ಗೆಲ್ಲಿಸಿದ ಜನತೆಗೆ ಧನ್ಯವಾದ ರೂಪದಲ್ಲಿ ತೋರಿಸಲಾಗಿದೆ.
ಈ ವಿಡಿಯೋದ ಕೊನೆಯಲ್ಲಿ ಕೆಜಿಎಫ್ ಅಧ್ಯಾಯ 3 ಬರಲಿದೆ ಎಂಬ ಬಗ್ಗೆ ಸುಳಿವು ಕೊಡಲಾಗಿದ್ದು, ಇದು ಸಿನಿ ಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದೆ. ಜೊತೆಗೆ ಇದು ಕೆಜಿಎಫ್ ನ ಕೊನೆಯ ಅಧ್ಯಾಯವಾಗಿದ್ದು, ಯಶ್ ನಟಿಸೋದು ಪಕ್ಕಾ ಎನ್ನಲಾಗಿದೆ. ಬೆಳಗ್ಗೆ 10.4ರ ಸಮಯಲ್ಲಿ ಟ್ವಿಟ್ವರ್ ನಲ್ಲಿ ಹಾಕಿದ ವಿಡಿಯೋವನ್ನು 6 ಗಂಟೆಯಲ್ಲಿ 1ಲಕ್ಷಕ್ಕೂ (112.9K
) ಹೆಚ್ಚು ಜನ ವೀಕ್ಷಿಸಿದ್ದಾರೆ. ಯೂಟ್ಯೂಬ್ ನಲ್ಲಿ ಕೇವಲ 6 ಗಂಟೆಯಲ್ಲಿ 163K ಗೂ ಹೆಚ್ಚು ವೀಕ್ಷಣೆ ಪಡೆದಿದೆ.
ಕೆಜಿಎಫ್ ಅಧ್ಯಾಯ 3 ರ ಬಗ್ಗೆ ಹಲವು ದಿನಗಳಿಂದ ಪ್ರಶ್ನೆಗಳು ಇದ್ದೇ ಇದೆ. ಕೆಜಿಎಫ್-3 ಬರುತ್ತಾ? ಅಂತ ಅನೇಕ ಬಾರಿ ಚಿತ್ರತಂಡವನ್ನು ಪ್ರಶ್ನಿಸಿದ್ದು ಕೂಡ ಇದೆ. ಚಿತ್ರದ ಮೂರನೇ ಭಾಗಕ್ಕಾಗಿ ಪ್ರಪಂಚದಾದ್ಯಂತ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಈವರೆಗೆ ತಯಾರಕರು ಚಿತ್ರದ ಬಗ್ಗೆ ಸಸ್ಪೆನ್ಸ್ ಉಳಿಸಿಕೊಂಡಿದ್ದಾರೆ. ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ ಈಗ ಹಿಂಟ್ ಕೊಟ್ಟು ಕುತೂಹಲ ಹೆಚ್ಚಿಸಿರುವುದಂತೂ ಸುಳ್ಳಲ್ಲ.
ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಈ ವರ್ಷದ ಅಂತ್ಯದ ವೇಳೆಗೆ ಮೂರನೇ ಅಧ್ಯಾಯವನ್ನು ಘೋಷಿಸಬಹುದು ಎಂದು ಹೇಳಲಾಗುತ್ತಿದೆ.
ಇಲ್ಲಿಯವರೆಗೆ ಕೆಜಿಎಫ್, ಕೆಜಿಎಫ್ 2 (ಕೆಜಿಎಫ್ ಅಧ್ಯಾಯ 2) ಅಭಿಮಾನಿಗಳಿಂದ ಹೆಚ್ಚು ಮೆಚ್ಚುಗೆ ಮತ್ತು ಪ್ರೀತಿಯನ್ನು ಗಳಿಸಿದೆ. ಹೀಗಾಗಿ ರಾಕಿಂಗ್ ಸ್ಟಾರ್ ಯಶ್ 'ರಾಕಿ ಭಾಯ್' ಪಾತ್ರದಲ್ಲಿ ಮತ್ತೊಮ್ಮೆ ದೊಡ್ಡ ಪರದೆಯ ಮೇಲೆ ನೋಡಲು ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಕೆಜಿಎಫ್ 2018ರ ಅಂತ್ಯದಲ್ಲಿ ರಿಲೀಸ್ ಆಗಿ ಬಾಕ್ಸ್ ಆಫಿಸ್‌ನಲ್ಲಿ ನೂರಾರು ಕೋಟಿ ರೂಪಾಯಿ ಕೊಳ್ಳೆ ಹೊಡೆದಿತ್ತು. ಆ ನಂತರ 'ಕೆಜಿಎಫ್-2' 4 ವರ್ಷಗಳ ನಂತರ ರಿಲೀಸ್ ಆಗಿ ಅಬ್ಬರಿಸಿತ್ತು. ಇದರ ಜೊತೆಗೆ ಕೆಜಿಎಫ್-2 ಕ್ಲೈಮ್ಯಾಕ್ಸ್ ಸೀನ್‌ನಲ್ಲಿ 'ಕೆಜಿಎಫ್-3' ಬಗ್ಗೆ ಹಿಂಟ್ ಕೊಡಲಾಗಿತ್ತು. ಇದೀಗ ಅದು ನಿಜವಾಗುವ ಕಾಲ ಹತ್ತಿರ ಬಂದಿದೆ. ಶೀಘ್ರವೇ ಈ ಬಗ್ಗೆ ಅಧಿಕೃತವಾಗಿ ಘೋಷಣೆಯಾಗಲಿದೆ ಎಂಬ ಬಗ್ಗೆ ಇಂದು ಹಂಚಿಕೊಂಡಿರುವ ವಿಡಿಯೋದಲ್ಲಿ ಸ್ಪಷ್ಟನೆ ಸಿಕ್ಕಿದೆ.