ಫ್ಯಾಮಿಲಿ ಜೊತೆ ಔಟಿಂಗ್ ಮಾಡಿದ Kanasina Rani Malashri… ಮಗ ಆರ್ಯನ್ ಮೇಲೆ ನೆಟ್ಟಿಗರ ಕಣ್ಣು

Published : Oct 31, 2025, 03:09 PM IST

ಚಂದನವನದ ಕನಸಿನ ರಾಣಿ ಮಾಲಾಶ್ರೀ, ತಮ್ಮ ತಾಯಿ , ಮಗಳು ಆರಾಧನಾ ಮತ್ತು ಮಗ ಆರ್ಯನ್ ಜೊತೆ ಔಟಿಂಗ್ ಮಾಡಿದ್ದು, ರೆಸ್ಟೋರೆಂಟಲ್ಲಿ ಡಿನ್ನರ್ ಮಾಡುತ್ತಿರುವ ಫೋಟೊ ಶೇರ್ ಮಾಡಿದ್ದು, ಎಲ್ಲರ ಕಣ್ಣು ಆರ್ಯನ್ ಮೇಲೆ ಬಿದ್ದಿದೆ. ಸ್ಯಾಂಡಲ್’ವುಡ್ ಗೆ ಹ್ಯಾಂಡ್ಸಮ್ ನಟ ಫಿಕ್ಸ್ ಎನ್ನುತ್ತಿದ್ದಾರೆ. 

PREV
16
ಕನಸಿನ ರಾಣಿ ಮಾಲಾಶ್ರೀ

ಕನ್ನಡಿಗರ ಕನಸಿನ ರಾಣಿ ಮಾಲಾಶ್ರೀ ಸಿನಿಮಾದಿಂದ ದೂರ ಇದ್ದರೂ ಅವರ ಸ್ಟೈಲ್, ಅವರ ಕ್ರೇಜ್ ಏನೂ ಕಡಿಮೆಯಾಗಿಲ್ಲ. ಈವಾಗ್ಲೂ ಜನ ನಟಿಯನ್ನು ಇಷ್ಟಪಡುತ್ತಾರೆ. ನಟಿ ತಮ್ಮ ಜೀವನದ ಬಗ್ಗೆ ಕೊಡುವ ಅಪ್’ಡೇಟ್ಸ್ ಗಳನ್ನು ಮೆಚ್ಚಿಕೊಂಡಿದ್ದಾರೆ

26
ಫ್ಯಾಮಿಲಿ ಜೊತೆ ಔಟಿಂಗ್

ಇದೀಗ ಮಾಲಾಶ್ರೀಯವರು ತಮ್ಮ ತಮ್ಮ ತಾಯಿ , ಮಗಳು ಆರಾಧನಾ ಮತ್ತು ಮಗ ಆರ್ಯನ್ ಜೊತೆ ಔಟಿಂಗ್ ಗೆ ತೆರಳಿದ್ದು, ಫ್ಯಾಮಿಲಿ ಟೈಮಿಂಗ್ ನ ಮುದ್ದಾದ ಫೋಟೊಗಳನ್ನು ಕೂಡ ಶೇರ್ ಮಾಡಿದ್ದಾರೆ. ಈ ಫೋಟೋಗಳಲ್ಲಿ ಆರ್ಯನ್ ಮೇಲೆ ನೆಟ್ಟಿಗರ ಕಣ್ಣು ಬಿದ್ದೆ.

36
ಪುತ್ರಿ ಆರಾಧನಾ ಎಂಟ್ರಿ

ಮಾಲಾಶ್ರೀ ಪುತ್ರಿ ಆರಾಧನಾ ಕನ್ನಡ ಚಿತ್ರರಂಗಕ್ಕೆ ಈಗಾಗಲೇ ಗ್ರ್ಯಾಂಡ್ ಎಂಟ್ರಿ ಕೊಟ್ಟಾಗಿದೆ. ಅಮ್ಮನಂತೆ ಆರಾಧನಾ ರಾಮ್‌ಗೂ ಮೊದಲ ಚಿತ್ರದಲ್ಲೇ ಸಕ್ಸಸ್ ಸಿಕ್ಕಿತ್ತು. ಮೊದಲ ಸಿನಿಮಾದಲ್ಲಿಯೇ ದರ್ಶನ್ ಜೊತೆ ನಟಿಸುವ ಅವಕಾಶ ಸಿಕ್ಕಿತ್ತು. ಈ ಸಿನಿಮಾ ಮೂಲಕ ಆರಾಧನಾ ಕನ್ನಡಿಗರ ಮನ ಗೆದ್ದಿದ್ದರು.

46
ಆರ್ಯನ್ ಎಂಟ್ರಿ ಕೊಡ್ತಾರ?

ಮಾಲಾಶ್ರೀ ಹಾಗೂ ನಿರ್ಮಾಪಕ ರಾಮು ಪುತ್ರಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗಿದೆ. ಇದೀಗ ಪುತ್ರ ಆರ್ಯನ್ ಎಂಟ್ರಿ ಕೊಡ್ಟಾರಾ? ಹೌದಾದ್ರೆ ಎಂಟ್ರಿ ಯಾವಾಗಎನ್ನುವ ಪ್ರಶ್ನೆಗಳನ್ನು ಜನರು ಕೇಳುತ್ತಿದ್ದು, ಇದೀಗ ಆರ್ಯನ್ ಫೊಟೊ ನೋಡಿದ ಮೇಲೆ ಮತ್ತದೇ ಪ್ರಶ್ನೆ ಕೇಳಿದ್ದಾರೆ.

56
ಹೀರೋ ಲುಕ್ ಇರುವ ಆರ್ಯನ್

ಅಮ್ಮನ ಜೊತೆ ಔಟಿಂಗ್ ಹೊರಟಿರುವ ಆರ್ಯನ್ ಫೋಟೊ ಇದೀಗ ಗಮನ ಸೆಳೆದಿದೆ. ಆರ್ಯನ್ ಟಾಲ್ ಆಂಡ್ ಹ್ಯಾಂಡ್ಸಮ್ ಲುಕ್ ಗೆ ಜನ ಫಿದಾ ಆಗಿದ್ದಾರೆ. ಹಾಗಾಗಿ ಯಾವಾಗ ಸಿನಿಮಾ ಎಂಟ್ರಿ ಎಂದು ಕೇಳುತ್ತಿದ್ದಾರೆ. ಈ ಹಿಂದೆ ಮಗ ವರ್ಕೌಟ್ ಮಾಡುತ್ತಿರುವ ವಿಡಿಯೋ ಒಂದನ್ನು ನಟಿ ಶೇರ್ ಮಾಡಿದ್ದರು. ಅದನ್ನ ನೋಡಿ ನಟನಾಗೋದಕ್ಕೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿತ್ತು.

66
ತಯಾರಿ ಜೋರಾಗಿದೆ

ಮಾಲಾಶ್ರೀ ಮತ್ತು ರಾಮು ಇಬ್ಬರೂ ಕೂಡ ಸಿನಿಮಾ ಕ್ಷೇತ್ರಕ್ಕೆ ಸಂಬಂಧ ಪಟ್ಟಿರುವವರು, ಅಕ್ಕ ಕೂಡ ಈಗಾಗಲೇ ಸಿನಿಮಾದಲ್ಲಿ ಮಿಂಚಿರುವುದರಿಂದ ಆರ್ಯನ್ ಕೂಡ ಸಿನಿಮಾಗೆ ಬಂದೆ ಬರುತ್ತಾರೆ ಎನ್ನಲಾಗುತ್ತಿದೆ. ಅದಕ್ಕಾಗಿ ಆರ್ಯನ್ ವಿಶೇಷ ತರಬೇತಿಯನ್ನು ಪಡೆಯುತ್ತಿದ್ದಾರೆ. ಜೊತೆಗೆ ಆರ್ಯನ್‌ ದೈಹಿಕವಾಗಿಯೂ ಕಸರತ್ತು ಮಾಡುತ್ತಿದ್ದಾರೆ. ಉತ್ತಮ ಅವಕಾಶ ಸಿಕ್ಕರೆ ಕನ್ನಡಕ್ಕೊಬ್ಬ ಟಾಲ್ ಆಂಡ್ ಹ್ಯಾಂಡ್ಸಮ್ ನಟ ಫಿಕ್ಸು.

Read more Photos on
click me!

Recommended Stories