ಬರೋಬ್ಬರಿ 32 ವರ್ಷಗಳ ಬಳಿಕ ಒಂದಾಗ್ತಿದ್ದಾರೆ ಹೃದಯ ಹಾಡಿತು ಸಿನಿಮಾ ಮೂಲಕ ಹೃದಯ ಗೆದ್ದ ಮಾಲಾಶ್ರೀ-ಭವ್ಯ

Published : Sep 17, 2024, 05:23 PM ISTUpdated : Sep 17, 2024, 05:37 PM IST

ಕನಸಿನ ರಾಣಿ ಮಾಲಾಶ್ರೀ ಮತ್ತು ನಟಿ ಭವ್ಯ ಮುಖ್ಯ ಪಾತ್ರದಲ್ಲಿ ಅಭಿನಯಿಸಲಿರುವ ಹೊಸ ಚಿತ್ರ ತಾಯಿಯೇ ದೇವರ? ಮುಹೂರ್ತ ನಡೆದಿದ್ದು. 32 ವರ್ಷಗಳ ಬಳಿಕ ಈ ಜೋಡಿ ಜೊತೆಯಾಗ್ತಿದೆ.   

PREV
17
ಬರೋಬ್ಬರಿ 32 ವರ್ಷಗಳ ಬಳಿಕ ಒಂದಾಗ್ತಿದ್ದಾರೆ ಹೃದಯ ಹಾಡಿತು ಸಿನಿಮಾ ಮೂಲಕ ಹೃದಯ ಗೆದ್ದ ಮಾಲಾಶ್ರೀ-ಭವ್ಯ

ಅಂಬರೀಶ್ (Ambareesh) ಜೊತೆ ನಾಯಕಿಯರಾಗಿ ಮಾಲಾಶ್ರೀ ಮತ್ತು ಭವ್ಯ ಅಭಿನಯಿಸಿದ ಹೃದಯ ಹಾಡಿತು ಮತ್ತು ಸೋಲಿಲ್ಲದ ಸರದಾರ ಸಿನಿಮಾ ನಿಮಗೆ ನೆನಪಿದ್ಯಾ? ಖಂಡಿತಾ ನೆನಪಿರುತ್ತೆ ಅಲ್ವಾ? ಸುಂದರವಾದ ಹಾಡುಗಳನ್ನು ನೀಡಿದ ಮಧುರ ಪ್ರೇಮಕಾವ್ಯಗಳ ಮೂಲಕ ಮನ ಗೆದ್ದ ಸಿನಿಮಾಗಳಿವು. 
 

27

ಈ ಎರಡು ಸಿನಿಮಾಗಳ ಹಾಡುಗಳು ಅಂದು ಸೂಪರ್ ಹಿಟ್ ಆಗಿತ್ತು. ಇಂದಿಗೂ ಜನ ಹಾಡುಗಳನ್ನು ಗುನುಗುತ್ತಲೇ ಇರುತ್ತಾರೆ. ಅಷ್ಟೊಂದು ಸುಂದರವಾಗಿತ್ತು ಹಾಡುಗಳು. ಈ ಸಿನಿಮಾ ಮೂಲಕ ಮಾಲಶ್ರೀ (Malashree) ಮತ್ತು ಭವ್ಯ ಜೋಡಿ ಕೂಡ ಜನಪ್ರಿಯತೆ ಪಡೆದಿದ್ದರು. 
 

37

ಹೃದಯ ಹಾಡಿತು (Hrudaya Haditu)ಸಿನಿಮಾದಲ್ಲಿ ಭವ್ಯ ಮತ್ತು ಅಂಬರೀಶ್ ಒಂದಾದರೆ, ಸೋಲಿಲ್ಲದ ಸರದಾರ ಸಿನಿಮಾದಲ್ಲಿ ಭವ್ಯ ಮತ್ತು ಮಾಲಾಶ್ರೀ ಇಬ್ಬರನ್ನೂ ಅಂಬರೀಶ್ ಮದುವೆಯಾಗುವ ಮೂಲಕ ಸಿನಿಮಾ ಸುಖಾಂತ ಕಂಡಿತ್ತು. 
 

47

ಇವೆರಡು ಸಿನಿಮಾಗಳ ಮೂಲಕ ಭವ್ಯ ಮತ್ತು ಮಾಲಾಶ್ರೀ ಆ ಕಾಲದಲ್ಲಿ ಸಿನಿಮಾ ರಸಿಕರ ಮೆಚ್ಚಿನ ನಾಯಕಿಯರೂ ಆಗಿದ್ದರು, ಇಬ್ಬರ ಅಭಿನಯಕ್ಕೆ ಮನಸೋತಿದ್ದರು. ಇದೀಗ ಮತ್ತೆ ಭವ್ಯ (Bhavya) ಮತ್ತು ಮಾಲಾಶ್ರೀ ಒಂದಾಗಿದ್ದಾರೆ. 
 

57

ಹೌದು, ತಾಯಿಯೇ ದೇವರ? (Tayiye Devara) ಎನ್ನುವ ಹೊಸ ಸಿನಿಮಾದಲ್ಲಿ ಬರೋಬ್ಬರಿ 32 ವರ್ಷಗಳ ಬಳಿಕ ಮಾಲಾಶ್ರೀ ಮತ್ತು ಭವ್ಯ ಜೊತೆಯಾಗಿ ನಟಿಸುತ್ತಿದ್ದಾರೆ. ಡಾ. ಸತೀಶ್ ತೋಟಯ್ಯ ಸಿನಿಮಾಗೆ ಚಿತ್ರಕಥೆ ಬರೆದು ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾ ಸೆಟ್ಟೇರಿದೆ. 
 

67

ಇದು ಹೆಸರೇ ಹೇಳುವಂತೆ ಅಮ್ಮ -ಮಕ್ಕಳ ಸೆಂಟಿಮೆಂಟ್ ಕಥೆಯಾಗಿದೆ. ಮೂವರು ತಾಯಂದಿರ ಮಧ್ಯೆ ಕಥೆ ಸುತ್ತುತ್ತದೆ. ಅದರಲ್ಲಿ ನಟಿ ಭವ್ಯ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮಾಲಾಶ್ರೀ ಖಡಕ್ ಪೊಲೀಸ್ ಆಫೀಸರ್ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. 
 

77

ಈ ಸಿನಿಮಾದ ಬಗ್ಗೆ ಮಾತನಾಡಿದ ನಟಿ ಮಾಲಾಶ್ರೀ ಸೋಲಿಲ್ಲದ ಸರದಾರ ಮತ್ತು ಹೃದಯ ಹಾಡಿತು ಬಳಿಕ ಭವ್ಯಾ ಜೊತೆ ತೆರೆ ಹಂಚಿಕೊಳ್ಳುತ್ತಿರುವುದು ಖುಷಿ ತಂದಿದೆ. ಇಲ್ಲಿವರೆಗೆ ಫೈಟ್ ಮಾಡುವಂತಹ ಪೊಲೀಸ್ ಆಫೀಸರ್ ಆಗಿ ನಟಿಸಿದ್ದೇನೆ. ಇದೊಂಥರ ವಿಭಿನ್ನ ಕಥೆ ಎಂದಿದ್ದಾರೆ. ಒಟ್ಟಲ್ಲಿ ಭವ್ಯಾ ಮತ್ತು ಮಾಲಾಶ್ರೀ ಅಭಿಮಾನಿಗಳು ಇವರನ್ನು ಮತ್ತೆ ಜೊತೆಯಾಗಿ ನೋಡಿ ಸಂಭ್ರಮಿಸಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories