ಇತ್ತೀಚೆಗಷ್ಟೇ ಪೋಷಕರಾಗಿ ಅದೇ ಸಂಭ್ರಮದಲ್ಲಿರುವ ಅಭಿಷೇಕ್ ಅಂಬರೀಶ್ (Abhishek Ambareesh) ಮತ್ತು ಅವಿವ ಬಿದ್ದಪ್ಪ, ಇದೀಗ ತಮ್ಮ ಹೊಸದೊಂದು ಫೋಟೋಶೂಟ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದ್ದಾರೆ.
ಅಭಿಷೇಕ್ ಪತ್ನಿ ಅವಿವಾ (Aviva Biddappa) ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದು, ಇವರು ತಮ್ಮ ಇನ್’ಸ್ಟಾಗ್ರಾಂನಲ್ಲಿ ಮಾಮ್ ಆಂಡ್ ಡ್ಯಾಡ್ ಎಂದು ಕ್ಯಾಪ್ಶನ್ ಕೊಟ್ಟು ಹ್ಯಾಪಿ ಹಾಲಿಡೇ, ಮೆರಿ ಕ್ರಿಸ್ಮಸ್, ಹ್ಯಾಪಿ ನ್ಯೂ ಇಯರ್ ಎಂದು ವಿಶ್ ಮಾಡಿದ್ದಾರೆ.
ಅಭಿಷೇಕ್ ಅಂಬರೀಷ್ ಕ್ರೀಮ್ ಕಲರ್ ಕುರ್ತಾ ಜೊತೆಗೆ ಕಪ್ಪು ಬಣ್ಣದ ದುಪಟ್ಟಾ ಧರಿಸಿದ್ದು, ಅವಿವಾ ಪೂರ್ತಿಯಾಗಿ ಬಿಳಿ ಬಣ್ಣವಿರುವ ಡಿಸೈನರ್ ಸೀರೆ ಉಟ್ಟಿದ್ದಾರೆ. ಇದರ ಜೊತೆಗೆ ತಲೆಗೆ ಮಲ್ಲಿಗೆ ಕನಕಾಂಬರವನ್ನು ಮುಡಿದಿದ್ದು, ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ.
ಫೊಟೋ ಶೂಟ್ನಲ್ಲಿ ಅಭಿಷೇಕ್ ಪತ್ನಿಯನ್ನೇ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದು, ತುಂಬಾನೆ ಕ್ಯೂಟ್ ಆಗಿ ಜೊತೆಗೆ ರೊಮ್ಯಾಂಟಿಕ್ ಆಗಿಯೂ ಕಾಣಿಸುತ್ತಿದ್ದಾರೆ ಈ ಜೋಡಿ. ಇಬ್ಬರ ಫೋಟೊ ಸದ್ಯ ಅಭಿಮಾನಿಗಳ ಮನ ಗೆದ್ದಿದೆ.
ಅಂದಹಾಗೆ, ಅವಿವಾ ಅವರ ಬೆಸ್ಟ್ ಫ್ರೆಂಡ್ ಮದುವೆಯಲ್ಲಿ ಭಾಗಿಯಾಗಲು ಅವಿವ ಮತ್ತು ಅಭಿಷೇಕ್ ಈ ರೀತಿಯಾಗಿ ಸಖತ್ ಆಗಿ ರೆಡಿಯಾಗಿದ್ದರು. ಜೂ. ರೆಬಲ್ ಸ್ಟಾರ್ ಜೋಡಿಗಳ ಫೋಟೊಗೆ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ಸ್ ವ್ಯಕ್ತವಾಗಿವೆ.
ಕಳೆದ ವರ್ಷ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಅಭಿಷೇಕ್ ಮತ್ತು ಅವಿವಾ ಇದೇ ವರ್ಷ ನ.12ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಅಂಬರೀಷ್ ಅವರೇ ಮತ್ತೆ ಹುಟ್ಟಿ ಬಂದಿದ್ದಾರೆ ಎಂದು ಮನೆಯವರು ಹಾಗೂ ಅಭಿಮಾನಿಗಳು ಸಂಭ್ರಮಿಸಿದ್ದರು.
ಇನ್ನೂ ಅಭಿಷೇಕ್ ಬಗ್ಗೆ ಹೇಳೋದಾದರೆ ‘ಬ್ಯಾಡ್ ಮ್ಯಾನರ್ಸ್’ (Bad manners) ಸಿನಿಮಾ ಬಳಿಕ ಅಭಿಷೇಕ್ ಅವರು ಅಯೋಗ್ಯ ಡೈರೆಕ್ಟರ್ ಮಹೇಶ್ ಕುಮಾರ್ ಜೊತೆ ಸಿನಿಮಾ ಮಾಡಲು ತಯಾರಿ ನಡೆಸಿದ್ದಾರೆ. ಈ ಸಿನಿಮಾ ಯಾವಾಗ ಶುರುವಾಗಲಿದೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಿಲ್ಲ.