ನಟ ಸುದೀಪ್ ತಮ್ಮ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ಮೂಲಕ ಶಿವಮೊಗ್ಗದ ಬಿ.ಹೆಚ್ ರಸ್ತೆಯಲ್ಲಿರುವ ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡಿದ್ದಾರೆ.
Kiccha Sudeep
26
ಸುದೀಪ್ ಅವರ ಈ ದತ್ತು ಕಾರ್ಯಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಧಿಕೃತವಾಗಿ ಒಪ್ಪಿಗೆ ಕೊಟ್ಟಿದ್ದಾರೆ. ಈ ಸರ್ಕಾರಿ ಶಾಲೆ 133 ವರ್ಷಗಳ ಹಳೆಯ ಕಟ್ಟಡ ಹೊಂದಿರುವ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
Kiccha Sudeep
36
‘ಶಾಲೆಗಾಗಿ ನಾವು ನೀವು’ ಯೋಜನೆಯಡಿ ಶಾಲೆಯನ್ನು ದತ್ತು ಪಡೆದಿದ್ದು, ಈ ಮೂಲಕ ಕಿಚ್ಚ ಅವರ ಶಾಲೆ ಉಳಿಸಿ ಕಾಳಜಿಗೆ ಮತ್ತೊಂದು ಸರ್ಕಾರಿ ಶಾಲೆ ಸೇರಿಕೊಂಡಂತಾಗಿದೆ.
Kiccha Sudeep
46
ಈ ಶಾಲೆಯ ಜೊತೆ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕೂಡ ತೆಗೆದುಕೊಂಡಿದ್ದಾರೆ. ಈ ಎರಡೂ ಶಾಲಾ, ಕಾಲೇಜಿನಲ್ಲಿ ಶಿವಮೊಗ್ಗದ ಅನೇಕ ಗಣ್ಯರು ಕಲಿತಿದ್ದಾರೆ.
Kiccha Sudeep
56
ಶಿಥಿಲಗೊಂಡ ಕಟ್ಟಡದ ನಿರ್ಮಾಣ ಆರಂಭವಾಗಿದೆ.
Kiccha Sudeep
66
ಶಾಲೆಗೆ ಬೇಕಾದ ಮೂಲಭೂತ ಸೌಕರ್ಯಗಳೆಲ್ಲವನ್ನೂ ಒದಗಿಸಿಕೊಡುವ ಭರವಸೆ ನೀಡಿದ್ದಾರೆ ಕಿಚ್ಚ.