ನಿಧಿ ಸುಬ್ಬಯ್ಯ ಹಾಟ್‌ ಲುಕ್‌; ಬಟ್ಟೆ ತಗೋಳಕ್ಕೆ ದುಡ್ಡಿಲ್ವಾ ತಾಯಿ ಎಂದು ಕಾಲೆಳೆದ ನೆಟ್ಟಿಗರು

First Published | Mar 2, 2023, 10:45 AM IST

ಹಾಟ್ ಅವತಾರದಲ್ಲಿ ಕಾಣಿಸಿಕೊಂಡ ನಿಧಿ ಸುಬ್ಬಯ್ಯ. ಇನ್‌ಸ್ಟಾಗ್ರಾಂ ಫೋಟೊ ನೋಡಿ ಶಾಕ್ ಆಗಿರುವ ನೆಟ್ಟಿಗರು.....

ಕನ್ನಡ ಚಿತ್ರರಂಗದ ಸಿಂಪಲ್ ನಟಿ, ಬಿಗ್ ಬಾಸ್ 8ರ ಸ್ಪರ್ಧಿ ನಿಧಿ ಸುಬ್ಬಯ್ಯ ಹಾಟ್‌ ಫೋಟೋಶೂಟ್ ಮಾಡಿಸಿದ್ದಾರೆ. ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸೀರಿಸ್‌ ರೂಪದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. 

ಎರಡು ಔಟ್‌ಫಿಟ್‌ಗಳಲ್ಲಿ ನಿಧಿ ಫೋಟೋಶೂಟ್ ಮಾಡಿಸಿದ್ದಾರೆ. ಅದರಲ್ಲೂ ಕ್ರೀಮ್‌ ಬಣ್ಣದ ಸ್ಯಾಟಿನ್ ಬಟ್ಟೆಯಲ್ಲಿ ನಿಧಿ ಮಿಂಚಿದ್ದಾರೆ. ಸಿಕ್ಕಾಪಟ್ಟೆ ಕಾಮೆಂಟ್ ಮತ್ತು ರಿಯಾಕ್ಷನ್ ಬಂದಿದೆ. 

Tap to resize

ತಕ್ಷಣ ನೋಡಿದಾಗ ಯಾವುದೋ ಬೆರಳು ತೋರಿಸುತ್ತಿರುವ ಹಾಗಿದೆ, ನಿಮ್ಮ ಬಳಿ ಹಣ ಇಲ್ಲ ಅಂದ್ರೆ ಹೇಳಿ ನಾನು ಕೊಡುವೆ ಆಗ ಮೈ ತುಂಬ ಮುಚ್ಚಿಕೊಳ್ಳುವಂತೆ ಹೊಸ ಬಟ್ಟೆ ಕೊಡಿಸುವೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

2019ರಲ್ಲಿ ಆಯುಷ್ಮಾನ್ ಭವ ಸಿನಿಮಾದಲ್ಲಿ ಅಭಿನಯಿಸಿದ ನಂತರ ನಿಧಿ ಎರಡು ಚಿತ್ರಕ್ಕೆ ಸಹಿ ಮಾಡಿದ್ದಾರೆ. ಒಂದು ಚಿತ್ರದ ಹೆಸರು ಘೋಷಣೆ ಮಾಡಿಲ್ಲ ಮತ್ತೊಂದು ಚಿತ್ರಕ್ಕೆ ಎಡಗೈಯೇ ಆಪತ್ಘಟಕ್ಕೆ ಕಾರಣ ಚಿತ್ರೀಕರಣ ಮಾಡುತ್ತಿದ್ದಾರೆ. 

ಸ್ವೀಟ್ ಹಾರ್ಟ್‌ ಎನ್ನುವ ತೆಲುಗು ಸಿನಿಮಾದಲ್ಲಿ ಅಭಿನಯಿಸಿದ್ದಾರೆ ಹಾಗೂ ಹಿಂದಿಯಲ್ಲಿ  ಓ ಮೈ ಗಾಡ್,ಅಜಬ್ ಗಜಾಬ್ ಪ್ರೀತಿ,ನೇರ ಇಷ್ಕ್ ಮತ್ತು ಶಗುನ್ ಅನ್ನು ಪ್ರೀತಿಸಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

2017ರಲ್ಲಿ ಬಹುಕಾಲದ ಗೆಳೆಯ ಲವೇಶ್ ಖೈರಾಜನಿ ಜೊತೆ ಕೂರ್ಗ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ವೈಯಕ್ತಿಕ ಕಾರಣಗಳಿಂದ 2018ರಲ್ಲಿ ವಿಚ್ಛೇದನ ಪಡೆದುಕೊಂಡರು. 

ನಿಧಿ ಮೈಸೂರಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಾಗಲೇ ಸೈಲಿಂಗ್‌ನಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಕ್ರೀಡೆಯಲ್ಲಿ ತನ್ನ ಛಾಪು ಮೂಡಿಸಿದ್ದಳು.

Latest Videos

click me!