ಕಾಂತಾರ ಸಿನಿಮಾ ಮೂಲಕ ಡಿವೈನ್ ಸ್ಟಾರ್ (Divine Star) ಎಂದು ಜನಪ್ರಿಯತೆ ಪಡೆದಿರುವ ಸ್ಯಾಂಡಲ್ ವುಡ್ ನಟ ರಿಷಭ್ ಶೆಟ್ಟಿ ಸದ್ಯದ ಬ್ಯುಸಿಯೆಸ್ಟ್ ನಟ ಅಂತಾನೆ ಹೇಳಬಹುದು. ಯಾಕಂದ್ರೆ ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳು ರಿಷಭ್ ಶೆಟ್ಟಿ ಕೈಯಲ್ಲಿದೆ.
ಸದ್ಯಕ್ಕಂತೂ ಶೆಟ್ರು ಕಾಂತಾರ ಚಾಪ್ಟರ್ 1ರ (Kantara Chapter 1) ಶೂಟಿಂಗ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ತಮ್ಮ ಹುಟ್ಟೂರಾದ ಕೆರಾಡಿಯಲ್ಲಿ ಕಾಂತಾರದ ಮುಂದುವರೆದ ಭಾಗದ ಶೂಟಿಂಗ್ ನಡೆಯುತ್ತಿದ್ದು, ನಟ ಅದರಲ್ಲೇ ನಿರತರಾಗಿದ್ದಾರೆ. ಜೊತೆಗೆ ಇತರ ಖಾಸಗಿ ಕಾರ್ಯಕ್ರಮಗಳಲ್ಲೂ ನಟ ಕಾಣಿಸಿಕೊಳ್ಳುತ್ತಿದ್ದಾರೆ.
ಇದೀಗ ರಿಷಭ್ ಶೆಟ್ಟಿ (Rishab Shetty) ಪತ್ನಿ ಪ್ರಗತಿ ಶೆಟ್ಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫ್ಯಾಮಿಲಿ ಜೊತೆಗಿನ ಮುದ್ದಾದ ಫೋಟೊಗಳನ್ನು ಶೇರ್ ಮಾಡಿದ್ದು, ಹಾಗಿದ್ರೆ ಶೆಟ್ರು ತಮ್ಮ ಬ್ಯುಸಿ ಶೆಡ್ಯೂಲ್ ಗೆ ಬ್ರೇಕ್ ನೀಡಿ ಹೆಂಡ್ತಿ ಮಕ್ಕಳ ಜೊತೆ ಜಾಲಿ ಮೂಡಲಿದ್ದಾರ ಎನ್ನುವ ಪ್ರಶ್ನೆ ಕಾಡುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಪ್ರಗತಿ ಶೆಟ್ಟಿ (Pragathi Shetty) ಹೆಚ್ಚಾಗಿ ತಮ್ಮ ಫ್ಯಾಮಿಲಿ ಫೋಟೊಗಳನ್ನು, ಗಂಡ ಮಕ್ಕಳ ಜೊತೆಗಿನ ಸ್ಪೆಷಲ್ ಮೂಮೆಂಟ್ ಗಳನ್ನು ಶೇರ್ ಮಾಡುತ್ತಿರುತ್ತಾರೆ. ಹಾಗೇಯೇ ಪ್ರಗತಿ ಈ ಫೋಟೊಗಳನ್ನು ಸಹ ಶೇರ್ ಮಾಡಿದ್ದಾರೆ.
ಇದು ಇತ್ತೀಚೆಗೆ ತೆಗೆಸಿಕೊಂಡಂತಹ ಫೋಟೊ ಅಲ್ಲ, ಬದಲಾಗಿ ಹಳೆಯ ಫೋಟೊಗಳನ್ನು ಪ್ರಗತಿ ಶೆಟ್ಟಿ ನನ್ನ ಹೃದಯ, ನನ್ನ ಪ್ರಪಂಚ, ನನ್ನ ಎಲ್ಲವೂ ಎಂದು ಕ್ಯಾಪ್ಶನ್ ಹಾಕಿ, ಫ್ಯಾಮಿಲಿ ಟೈಮ್ ಎಂದು ಬರೆದು, ಅದರ ಜೊತೆಗೆ ಥ್ರೋ ಬ್ಯಾಕ್ ಪಿಕ್ಚರ್ ಎಂದು ಬರೆದುಕೊಂಡಿದ್ದಾರೆ.
ರಿಷಭ್ ಶೆಟ್ಟಿ ಸದ್ಯ ಬ್ಯುಸಿಯಾಗಿರೋದರಿಂದ ತಮ್ಮ ಪತಿ ಹಾಗೂ ಮಕ್ಕಳ ಜೊತೆ ಹಿಂದೆ ಜೊತೆಯಾಗಿ ಕಳೆದ ಕ್ಷಣಗಳನ್ನು ನೆನಪು ಮಾಡಿಕೊಂಡು ಪ್ರಗತಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫ್ಯಾಮಿಲಿ ಫೋಟೊ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.
ರಿಷಭ್ ಶೆಟ್ಟಿ ಬಗ್ಗೆ ಹೇಳೊದಾದರೆ ಸದ್ಯ ಕಾಂತಾರಾ ಚಾಪ್ಟರ್ 1 ಶೂಟಿಂಗ್ ನಡೆಯುತ್ತಿದೆ. ಇದಾದ ನಂತ್ರ ತೆಲುಗಿನ ಹನುಮಾನ್ ಸಿನಿಮಾದಲ್ಲಿ ಹನುಮಂತನಾಗಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ ಹಿಂದಿ ಸಿನಿಮಾದಲ್ಲೂ ನಟಿಸುತ್ತಿದ್ದು, ದ ಪ್ರೈಡ್ ಆಫ್ ಭಾರತ್ ಛತ್ರಪತಿ ಶಿವಾಜಿ ಯಲ್ಲಿ ಶಿವಾಜಿ ಮಹಾರಾಜರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನು ಇತ್ತೀಚೆಗಷ್ಟೇ ತೆಲುಗು ನಟ ರಾಣಾ ದಗ್ಗುಭಾಟಿ (Rana Daggubati) ತಮ್ಮ ‘ದ ರಾಣಾ ದಗ್ಗುಬಾಟಿ ಶೋ’ ಕಾರ್ಯಕ್ರಮದ ಸಂದರ್ಶನಕ್ಕಾಗಿ ರಿಷಭ್ ಶೆಟ್ಟಿ ಊರಾದ ಕೆರಾಡಿಗೆ ಭೇಟಿ ನೀಡಿದ್ದು, ಸದ್ಯ ರಾಣಾ ಅವರಿಗೆ ರಿಷಭ್ ತಮ್ಮ ಊರಿನ ಪರಿಚಯ ಹಾಗೂ ತಮ್ಮ ಭಾಷೆಯ ಪರಿಚಯ ಮಾಡಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಈ ವಿಡಿಯೋ ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿದೆ.