ದೆಹಲಿ ವಿಶ್ವವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿನಿಯೊಬ್ಬಳು, ಕಾಲೇಜಿನಲ್ಲಿ ಟಾಪರ್ ಆಗಿದ್ದರೂ ಸೂಕ್ತವಾದ ಇಂಟರ್ನ್‌ಶಿಪ್ ಸಿಗಲಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಳು. ಬಿಸ್ಮಾ ಫರೀದ್ ಎಂಬ ವಿದ್ಯಾರ್ಥಿನಿ, 50ಕ್ಕೂ ಹೆಚ್ಚು ಸೆರ್ಟಿಫಿಕೇಟ್, 10ಕ್ಕೂ ಹೆಚ್ಚು ಪದಕಗಳು, 10ಕ್ಕೂ ಹೆಚ್ಚು ಟ್ರೋಫಿಗಳನ್ನು ಪಡೆದಿದ್ದೆ. ಆದರೆ ಇಂಟರ್ನ್‌ಶಿಪ್ ಮಾಡಲು ತುಂಬ ಕಷ್ಟಪಟ್ಟೆ” ಎಂದು ಹೇಳಿಕೊಂಡಿದ್ದಾರೆ. ಪ್ರಸ್ತುತ ದೆಹಲಿಯ ಹನ್ಸ್‌ರಾಜ್ ಕಾಲೇಜಿನಲ್ಲಿ ಇಂಗ್ಲಿಷ್ ಆನರ್ಸ್‌ನಲ್ಲಿ ಬಿಎ ಪದವಿ ಪಡೆಯುತ್ತಿರುವ ಅವರು, “ನಾನು ಟಾಪರ್ ಆಗಿದ್ದೇನೆ, ಆದರೂ ನನಗೆ ಇಂಟರ್ನ್‌ಶಿಪ್ ಸಿಗುತ್ತಿಲ್ಲ. ಕೌಶಲ್ಯಗಳು ಅಂಕಗಳಿಗಿಂತ ಮುಖ್ಯ ಎಂಬುದನ್ನು ಒಪ್ಪಿಕೊಳ್ಳಲು ತನಗೆ ಸ್ವಲ್ಪ ಸಮಯ ಬೇಕಾಯಿತು” ಎಂದು ಒಪ್ಪಿಕೊಂಡಿದ್ದಾಳೆ.