Fake Employment: ಲೇಆಫ್‌ ಆದ್ರೂ ಕೆಲಸವಿದೆ ಎಂದವನಿಗೆ ಅತಿ ಹೆಚ್ಚು ಸಂಬಳ, ದೊಡ್ಡ ಹುದ್ದೆ, ವರ್ಕ್‌ ಫ್ರಂ ಹೋಮ್‌ ಆಪ್ಶನ್!

Published : Jul 01, 2025, 04:22 PM ISTUpdated : Jul 01, 2025, 04:28 PM IST

ಇತ್ತೀಚೆಗೆ ಓರ್ವ ವ್ಯಕ್ತಿಯು ಲೇಆಫ್‌ ಆಗಿ ಉದ್ಯೋಗ ಕಳೆದುಕೊಂಡಿದ್ದಾರೆ. ಆಮೇಲೆ ಉದ್ಯೋಗಿ ಎನ್ನುವ ರೀತಿ ನಟಿಸಿ ಹೆಚ್ಚಿನ ಸಂಬಳ, ಉತ್ತಮ ಹುದ್ದೆಯ ಜೊತೆಗೆ ವರ್ಕ್‌ಫ್ರಂ ಹೋಮ್‌ ಕೆಲಸ ಮಾಡುವ ಅವಕಾಶ ಪಡೆದುಕೊಂಡಿದಾನೆ. ಸೋಶಿಯಲ್‌ ಮೀಡಿಯಾ ಬಳಕೆದಾರರೊಬ್ಬರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. 

PREV
15
3 ನಿಮಿಷದಲ್ಲಿ ಜಾಬ್‌ ಅಂತ್ಯ!

“ಆಗಸ್ಟ್‌ನಲ್ಲಿ, ನಾನು ಅನಿರೀಕ್ಷಿತವಾಗಿ ಜಾಬ್ ಕಳೆದುಕೊಂಡೆ. ಯಾವುದೇ ಮುನ್ನಚ್ಚೆರಿಕೆ ಕೊಟ್ಟಿರಲಿಲ್ಲ, ಯಾವುದೇ ಭದ್ರತೆಯೂ ಇರಲಿಲ್ಲ, ನಾವು ಹೊಸದಾಗಿ ಟೀಂ ಕಟ್ಟುತ್ತಿದ್ದೇವೆ ಎಂದು ಹೇಳಿ 3 ನಿಮಿಷಗಳ ಕಾಲ ಝೂಮ್‌ ಕಾಲ್‌ ಮಾಡಿ ಮುಗಿಸಿದ್ದರು” ಎಂದು ಆ ವ್ಯಕ್ತಿ ಹೇಳಿಕೊಂಡಿದ್ದಾರೆ.

25
ಕೆಲಸವಿದೆ ಎಂದು ನಾಟಕ ಮಾಡ್ತಿದ್ದೆ!

ಜಾಬ್‌ ಇಲ್ಲ ಅಂದ್ರೂ ಕೂಡ ಯಾರಿಗೂ ಈ ವಿಷಯವನ್ನು ತಿಳಿಸಿರಲಿಲ್ಲ. ಅಷ್ಟೇ ಅಲ್ಲದೆ ಜಾಬ್‌ ಇದೆ ಅಂತ ನಾಟಕ ಮಾಡಿದ್ದರು. ಸ್ನೇಹಿತರಿಗೂ, ಸಹದ್ಯೋಗಿಗಳಿಗೂ ಕೂಡ ಜಾಬ್‌ ಇಲ್ಲ ಅಂತ ತಿಳಿಸಿರಲಿಲ್ಲ. ಈ ಬಗ್ಗೆ ಮಾತನಾಡಿದ ಅವರು, “ನಾನು ನಿತ್ಯವೈ ‘ಲಾಗ್ ಇನ್’ ಆಗ್ತಿದ್ದೆ, ನನ್ನ ಲ್ಯಾಪ್‌ಟಾಪ್ ತೆಗೆದು ಕೆಲಸ ಮಾಡ್ತಿದ್ದೀನಿ ಎಂಬಂತೆ ಕುಳಿತಿದ್ದೆನು. ನಾನು ಮೀಟಿಂಗ್‌ನಲ್ಲಿದ್ದೇನೆ ಅಂತ ಎಲ್ಲರಿಗೂ ಹೇಳುತ್ತಿದ್ದೆ. ಫೋನ್‌ನಲ್ಲಿದ್ದೀನಿ ಅಂತ ಏರ್‌ಪಾಡ್ಸ್ ಧರಿಸಿ ಸುತ್ತಾಡುತ್ತಿದ್ದೆನು” ಎಂದು ಅವರು ಹೇಳಿದ್ದರು.

35
ಬೇರೆ ಜಾಬ್‌ ಸಿಗ್ತು!

ಹೀಗಿರುವಾಗಲೇ ನಾನು ಬೇರೆ ಬೇರೆ ಜಾಬ್‌ಗೆ ಅಪ್ಲೈ ಮಾಡ್ತಿದ್ದೆ. ಲಿಂಕ್ಡ್‌ಇನ್‌ನಲ್ಲಿಯೂ ಕೂಡ ಜಾಬ್‌ನಲ್ಲಿದ್ದೇನೆ, ಬೇರೆ ಬೇರೆ ಕೆಲಸ ಮಾಡ್ತಿದ್ದೀನಿ ಎಂದು ನಟಿಸಿ, ಭ್ರಮೆಯನ್ನು ಸೃಷ್ಟಿಸಿದ್ದೆ ಎಂದು ಅವರು ಹೇಳಿದ್ದಾರೆ. ಇದು ಹೀಗೆ ಮುಂದುವರೆದಿತ್ತು. ಓರ್ವರು ಫೋನ್‌ ಮಾಡಿ ಜಾಬ್‌ ಇದೆ ಎಂದರು. “ನಾನು ಇಂಟರ್‌ವ್ಯೂ ಕೊಟ್ಟೆ, ಒಳ್ಳೆಯ ಸಂಬಳ, ಒಳ್ಳೆಯ ಹುದ್ದೆ ಜೊತೆಗೆ ಕೆಲಸ ಸಿಕ್ಕಿತು. ವರ್ಕ್‌ ಫ್ರಂ ಹೋಮ್‌ ಕೂಡ ಸಿಕ್ಕಿತು. ಈಗ ಜೀವನ ಚೆನ್ನಾಗಿದೆ” ಎಂದು ಅವರು ಹೇಳಿದ್ದಾರೆ. ಈ ಪೋಸ್ಟ್‌ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

45
ಯಾರು ಏನಂದ್ರು?

“ರೂಲ್ಸ್‌ ಗೊತ್ತಾದ ಬಳಿಕ, ಆಟವನ್ನು ಆಡುವುದು ಹೇಗೆ ಎಂದು ಗೊತ್ತಾದರೆ, ನೀವು ಗೆಲ್ಲಲೇಬೇಕು. ನೀವು ರೂಲ್ಸ್‌ ಫಾಲೋ ಮಾಡಿದ್ರಿ ಅಂತ ಹೇಳುವ ಅಗತ್ಯವಿಲ್ಲ” ಎಂದು ಇನ್ನೋರ್ವರು ಹೇಳಿದ್ದಾರೆ.

ಇನ್ನೋರ್ವರು “ಬ್ಯಾಕ್‌ಗ್ರೌಂಡ್‌ ಚೆಕ್‌ ಮಾಡಿದ್ರಾ? ಕೆಲಸ ಶುರು ಮಾಡಿದ್ದು, ಕೆಲಸ ಎಂಡ್‌ ಮಾಡಿದ್ದ ಡೇಟ್‌ ಬಗ್ಗೆ ಕೇಳಿಲ್ವಾ? ನೀವು ಆಟ ಆಡಿದಿರಿ, ನೀವು ಅದನ್ನು ಸರಿಯಾಗಿ ಆಡಿದಿರಿ” ಎಂದಿದ್ದಾರೆ.

55
ಇದು ನಾಟಕವೇ?

ಇನ್ನೋರ್ವರು “ಬಹುಶಃ ನೀವು ಇನ್ನೂ ನಿರುದ್ಯೋಗಿಯಾಗಿದ್ದು ಈ ಪೋಸ್ಟ್‌ನಲ್ಲಿ ಸುಳ್ಳು ಹೇಳುತ್ತಿರಬಹುದು” ಎಂದಿದ್ದಾರೆ. ವೆರಿಫಿಕೇಶನ್‌ ಜಾಸ್ತಿ ಮಾಡುವಾಗ ಈ ರೀತಿ ಆಗಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಎದ್ದಿದೆ. 

Read more Photos on
click me!

Recommended Stories