ಉದ್ಯೋಗಿಗಳ ಲೆಕ್ಕಾಚಾರದಲ್ಲಿ ವಿಶ್ವದ 10 ಬೃಹತ್‌ ಕಂಪನಿಗಳಿವು, ಭಾರತದಿಂದ ಒಂದೇ ಕಂಪನಿ!

First Published | Aug 17, 2023, 7:44 PM IST

ಉದ್ಯೋಗಿಗಳ ಲೆಕ್ಕಾಚಾರದಲ್ಲಿ ವಿಶ್ವದ ಬೃಹತ್‌ ಕಂಪನಿಗಳನ್ನು ಲೆಕ್ಕಹಾಕುವುದಾದರೆ, ಅದರಲ್ಲಿ ಅಮೆರಿಕವೇ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಅಮೆರಿಕ ಮೂಲದ ನಾಲ್ಕು ಕಂಪನಿಗಳು ಈ ಪಟ್ಟಿಯಲ್ಲಿದೆ. ವರ್ಲ್ಡ್‌ ಆಫ್‌ ಸ್ಟ್ಯಾಟಸ್ಟಿಕ್ಸ್‌ ಪ್ರಕಾರ ಈ ಖಾಸಗಿ ಕಂಪನಿಗಳನ್ನು ಲಿಸ್ಟಿಂಗ್‌ ಮಾಡಲಾಗಿದೆ.

ವಾಲ್‌ಮಾರ್ಟ್‌ ಅಮೆರಿಕದ ಮಲ್ಟಿನ್ಯಾಷನಲ್‌ ರಿಟೇಲ್‌ ಕಾರ್ಪೋರೇಷನ್‌ ಕಂಪನಿ. ಬುಶಃ ಈ ಕಂಪನಿ ಇಲ್ಲದ ದೇಶವೇ ಇರಲಿಕ್ಕಿಲ್ಲ. ವಿಶ್ವದಾದ್ಯಂತ 21 ಲಕ್ಷ ಉದ್ಯೋಗಿಗಳನ್ನು ಇದು ಹೊಂದಿದೆ.

ಅಮೆರಿಕದ ಮಲ್ಟಿನ್ಯಾಷನಲ್‌ ಟೆಕ್ನಾಲಜಿ ಕಂಪನಿ. ಇ-ಕಾಮರ್ಸ್‌, ಕ್ಲೌಡ್‌ ಕಂಪ್ಯೂಟಿಂಗ್‌, ಡಿಜಿಟಲ್‌ ಸ್ಟ್ರೀಮಿಂಗ್‌ ಕ್ಷೇತ್ರದಲ್ಲಿ ಈ ಕಂಪನಿ ವಿಶ್ವದಾದ್ಯಂತ ಒಟ್ಟು 15.41 ಲಕ್ಷ ನೌಕರರನ್ನು ಹೊಂದಿದೆ.

Latest Videos


ತೈವಾನ್‌ನ ಅತಿದೊಡ್ಡ ಕಂಪನಿ. ಎಲೆಕ್ಟ್ರಾನಿಕ್ಸ್‌ ಕಾಂಟ್ರ್ಯಾಕ್ಟ್‌ ಉತ್ಪಾದಕರಾಗಿರುವ ಈ ಕಂಪನಿ ವಿಶ್ವದಲ್ಲಿ 826608 ಮಂದಿ ಉದ್ಯೋಗಿಗಳನ್ನು ಹೊಂದಿದೆ.

ಐರ್ಲೆಂಡ್‌ನ ಡುಬ್ಲಿನ್‌ ಮೂಲದ ಅಕ್ಸೆಂಚರ್‌ ಕಂಪನಿ, ಐಟಿ ಸರ್ವೀಸ್‌ ಹಾಗೂ ಕನ್ಸಲ್ಟಿಂಗ್‌ಗೆ ಹೆಸರುವಾಸಿ. ಜಗತ್ತಿನಲ್ಲಿ 7.32 ಲಕ್ಷ ಉದ್ಯೋಗಿಗಳನ್ನು ಹೊಂದಿದೆ.

ವೋಕ್‌ವಾಗನ್‌ ಜರ್ಮನಿಯ ಕಂಪನಿ. 1937ರಲ್ಲಿ ಆರಂಭವಾಗಿರುವ ಜರ್ಮನ್‌ ಆಟೋಮೊಬೈಲ್‌ ಕಂಪನಿ, 6,76,915 ಮಂದಿ ಉದ್ಯೋಗಿಗಳನ್ನು ಹೊಂದಿದೆ.

ಈ ಲಿಸ್ಟ್‌ನಲ್ಲಿರುವ ಭಾರತದ ಏಕೈಕ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌. ಮಲ್ಟಿನ್ಯಾಷನಲ್‌ ಐಟಿ ಕಂಪನಿ ಆಗಿರುವ ಟಿಸಿಎಸ್‌ 614,795 ಉದ್ಯೋಗಿಗಳನ್ನು ಹೊಂದಿದೆ.

ಜರ್ಮನಿ ಮೂಲದ ದೇಶೀಯ ಮೇಲ್‌ ಸರ್ವೀಸ್‌ ಕಂಪನಿ, ಡಿಎಚ್‌ಎಲ್‌ನ ಬ್ರ್ಯಾಂಡ್‌. ಡಾಯ್ಚ ಪೋಸ್ಟ್ 583,816 ಉದ್ಯೋಗಿಗಳನ್ನು ಹೊಂದಿದೆ.

ಬಿವೈಡಿ ಚೀನಾ ಮೂಲದ ಮಲ್ಟಿನ್ಯಾಷನಲ್‌ ಕಂಪನಿ. ಎಲೆಕ್ಟ್ರಿಕ್‌ ಕಾರ್‌ಗಳು, ಎಲೆಕ್ಟ್ರಿಕ್‌ ಬೈಸಿಕಲ್‌ಗಳ ನಿರ್ಮಾಣದೊಂದಿಗೆ ಹಲವು ಕ್ಷೇತ್ರಗಳಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದೆ. ಇದು 570,100 ಉದ್ಯೋಗಿಗಳನ್ನು ಹೊಂದಿದೆ.

ಟ್ರಾನ್ಸ್‌ಪೋರ್ಟೇಷನ್‌, ಇ-ಕಾಮರ್ಸ್‌, ಬ್ಯುಸಿನೆಸ್‌ ಸರ್ವೀಸ್‌ ಕ್ಷೇತ್ರಗಳಲ್ಲಿರುವ ಅಮೆರಿಕದ ಫೆಡೆಕ್ಸ್‌ ಕಂಪನಿ 5.30 ಲಕ್ಷ ಉದ್ಯೋಗಿಗಳನ್ನು ವಿಶ್ವದಾದ್ಯಂತ ಹೊಂದಿದೆ.

ಯುಪಿಎಸ್‌ ಹೆಸರಿನಿಂದಲೇ ಜನಪ್ರಿಯವಾಗಿರುವ ಯುನೈಟೆಡ್‌ ಪಾರ್ಸಲ್‌ ಸರ್ವೀಸ್‌, ಅಮೆರಿಕದ ಶಿಪ್ಪಿಂಗ್‌-ಪಾರ್ಸಲ್‌, ಸಪ್ಲೈ ಚೈನ್‌ ಮ್ಯಾನೇಜ್‌ಮೆಂಟ್‌ ಕಂಪನಿ. ವಿಶ್ವದಲ್ಲಿ 5 ಲಕ್ಷ ಉದ್ಯೋಗಿಗಳನ್ನು ಹೊಂದಿದೆ.

click me!