Special skills : ಈ ಗುಣಗಳನ್ನು ಬೆಳೆಸಿಕೊಂಡ್ರೆ ಎಂಥಾ ಪರಿಸ್ಥಿತಿಯನ್ನೂ ಯಶಸ್ವಿಯಾಗಿ ಗೆಲ್ತೀರಿ

First Published | Sep 29, 2022, 5:54 PM IST

ಯಾರು ಯಶಸ್ವಿಯಾಗಲು ಬಯಸುವುದಿಲ್ಲ ಹೇಳಿ? ಪ್ರತಿಯೊಬ್ಬರೂ ತಾವು ಜೀವನದಲ್ಲಿ ಯಶಸ್ವಿಯಾಗಬೇಕೆಂದು ಬಯಸುತ್ತಾರೆ ಮತ್ತು ಇದಕ್ಕಾಗಿ ತುಂಬಾನೆ ಶ್ರಮಿಸುತ್ತಾರೆ. ಆದರೆ ಅವರೆಲ್ಲರೂ ಯಶಸ್ವಿಯಾಗುತ್ತಾರೆಯೇ? ಇದಕ್ಕೆ ಪ್ರತಿಕ್ರಿಯೆಯಾಗಿ, ನೀವು ಇಲ್ಲ, ಎಲ್ಲರೂ ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದು ಸಹ ಹೇಳುತ್ತೀರಿ. ಆದರೆ ಜೀವನದಲ್ಲಿ, ಕೆಲವರು ಮುಂದೆ ಸಾಗುತ್ತಾರೆ ಮತ್ತು ಕೆಲವರು ಹಿಂದೆ ಉಳಿಯುತ್ತಾರೆ. ಯಾಕೆ ಈ ಕೆಲವರು ಜೀವನದಲ್ಲಿ ಹಿಂದೆ ಉಳಿಯುತ್ತಾರೆ ಗೊತ್ತಾ? ಅವರು ಜೀವನದಲ್ಲಿ ಕೆಲವು  ಕೌಶಲ್ಯಗಳನ್ನು ಅಳವಡಿಸಿರೋದಿಲ್ಲ.
 

ಜೀವನದಲ್ಲಿ ಯಶಸ್ಸನ್ನು ತಂದುಕೊಡುವಂತಹ ಕೆಲವು ಕೌಶಲ್ಯಗಳಿವೆ. ಈ ಕೌಶಲ್ಯಗಳನ್ನು ಗುರುತಿಸುವುದು ಮತ್ತು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ನಿಮ್ಮನ್ನು ಯಶಸ್ವಿಯಾಗುವಂತೆ ಮಾಡುತ್ತದೆ, ಅವುಗಳ ಬಗ್ಗೆ ನೀವು ತಿಳಿದುಕೊಂಡು, ಅಳವಡಿಸಿಕೊಂಡ್ರೆ ನಿಮ್ಮ ಜೀವನದಲ್ಲಿ ಯಶಸ್ಸು ಖಚಿತಾ. ಯಶಸ್ಸನ್ನು ಸಾಧಿಸುವ ಬಯಕೆ ನಿಮಗಿದ್ದರೆ, ಕಷ್ಟಪಟ್ಟು ಕೆಲಸ ಮಾಡುವುದರ ಜೊತೆಗೆ, ಜೀವನದಲ್ಲಿ ಕೆಲವು ವಿಶೇಷ ಸ್ಕಿಲ್ ಗಳನ್ನು ಸಹ ಸೇರಿಸಬೇಕಾಗುತ್ತದೆ. ಅವುಗಳ ಬಗ್ಗೆ ತಿಳಿಯೋಣ. 

ನಾನು ಹೇಳಿದ್ದು ಸರಿ
ನಾನು ಹೇಳಿದ್ದು ಸರಿ ಎಂದು ಹೇಳಲು ಧೈರ್ಯ (courage) ಬೇಕು. ಆದರೆ ಅನೇಕ ಜನರು ಕಷ್ಟಪಟ್ಟು ಕೆಲಸ ಮಾಡಿದ ನಂತರವೂ ತಮ್ಮ ಕೆಲಸದ ಬಗ್ಗೆ ಮಾತನಾಡೋದಿಲ್ಲ. ಕಾರಣವೆಂದರೆ ಅವರು ತಮ್ಮನ್ನು ತಾವು ಅನುಮಾನಿಸುತ್ತಾರೆ. ತಾನು ಮಾಡಿರುವ ಕೆಲಸ ತಪ್ಪಿದ್ದರೆ ಅನ್ನೋ ಅನುಮಾನ ಅವರಿಗೆ ಇರುತ್ತೆ. ಆದರೆ ನಿಮ್ಮ ಕೆಲಸದಲ್ಲಿ ನಿಮಗೆ ವಿಶ್ವಾಸವಿದ್ದಾಗ, ನೀವು ನಿಮಗಾಗಿ ಮಾತನಾಡಲು ಸಾಧ್ಯವಾಗುತ್ತದೆ. 

Tap to resize

ಕೇಳುವ ಅಭ್ಯಾಸ
ನೀವು ನಿಮ್ಮ ಮಾತನ್ನು ಉಳಿಸಿಕೊಳ್ಳಬೇಕು, ನಿಮಗೆ ನೀವೇ ಸರಿಯಾಗಿ ಹೇಳಬೇಕು, ಆದರೆ ಈ ಕಾರಣದಿಂದಾಗಿ, ಇತರರು ಹೇಳಿರೋದನ್ನು ಇಗ್ನೋರ್ ಮಾಡೋದು ಸರಿಯಲ್ಲ. ನೀವು ಇತರರ ಮಾತುಗಳನ್ನು ಕೇಳುವ ಅಭ್ಯಾಸ ಸಹ ರೂಢಿಸಿಕೊಳ್ಳಬೇಕು. ನೆನಪಿಡಿ, ನೀವು ಇತರರ ಮಾತುಗಳನ್ನು ಕೇಳುವುದನ್ನು ಹೆಚ್ಚು ಅಭ್ಯಾಸ ಮಾಡಿಕೊಂಡಷ್ಟೂ, ಅದರಿಂದ ನೀವು ಹೆಚ್ಚು ಪ್ರಯೋಜನ ಪಡೆಯುತ್ತೀರಿ. ಕೇಳೋದ್ರಿಂದ ನಿಮಗೆ ಅನೇಕ ಬಾರಿ ಕಲಿಯುವ ಅವಕಾಶ ಕೂಡ ಸಿಗುತ್ತೆ.

ಜೀವನದಲ್ಲಿ ಯಾವುದು ಮುಖ್ಯವೋ ಅದನ್ನು ಮಾಡಿ
ಹೆಚ್ಚಿನ ಜನರಿಗೆ ತಮ್ಮ ಜೀವನದ ಪ್ರಮುಖ ವಿಷಯಗಳನ್ನು ಪಡೆದುಕೊಳ್ಳಲು ಏನು ಮಾಡಬೇಕು ಅನ್ನೋದು ತಿಳಿದಿರೋದಿಲ್ಲ. ಅನೇಕ ಜನರು ತಮ್ಮ ಕೆಲಸವನ್ನು ಮಾಡುವಾಗ ಆಗಾಗ್ಗೆ ದಾರಿ ತಪ್ಪುತ್ತಾರೆ. ಆ ವಿಷ್ಯಗಳು ತಮಗೆ ಪ್ರಯೋಜನವನ್ನು ನೀಡುವುದಿಲ್ಲ ಎಂದು ಅವರು ಅರ್ಥಮಾಡಿಕೊಳ್ಳುವುದಿಲ್ಲ, ಇದರಿಂದ ಸಮಯ ವ್ಯರ್ಥ ಆಗುತ್ತೆ. ನಿಷ್ಪ್ರಯೋಜಕ ವಿಷಯಗಳ ಮೇಲೆ ಸಮಯ ವ್ಯರ್ಥ ಮಾಡೋದು ತಪ್ಪು. ನೀವು ಯಾವಾಗಲೂ ಪ್ರಮುಖ ಕೆಲಸದ ಮೇಲೆ ಗಮನ ಹರಿಸಬೇಕು.

ಹೊಸದನ್ನು ಕಲಿಯಿರಿ
ಅವಕಾಶ ಸಿಕ್ಕಾಗ ಏನನ್ನಾದರೂ ಕಲಿಯುವ ಕಲೆಯನ್ನು (learn new thing) ನೀವು ತಿಳಿದಿದ್ದರೆ, ಇಂದು ಅಲ್ಲದಿದ್ದರೂ ನಾಳೆ ನೀವು ಖಂಡಿತವಾಗಿಯೂ ಯಶಸ್ವಿಯಾಗುತ್ತೀರಿ. ಕರಿಯರ್ ನಲ್ಲಿ, ನೀವು ಹೊಸದನ್ನು ಕಲಿಯಬೇಕಾದ ಸಂದರ್ಭ ಬರುತ್ತೆ. ಆವಾಗ ಅದನ್ನು ಕಡೆಗಡಿಸುವ ಬದಲು ಕಲಿಯಿರಿ. ಹೊಸದನ್ನು ಕಲಿತಂತೆ ನೀವು ಜೀವನದಲ್ಲಿ ಯಶಸ್ವಿಯಾಗುತ್ತೀರಿ. 

ಆರ್ಥಿಕ ಸ್ಥಿರತೆ ಅತ್ಯಗತ್ಯ
ನೀವು ಉತ್ತಮವಾಗಿ ಸಂಪಾದಿಸುತ್ತಿದ್ದೀರಿ ಮತ್ತು ಉನ್ನತ ಸ್ಥಾನ ಗಳಿಸಬೇಕೆಂದು ಬಯಸಿದ್ದೀರಿ. ಆದರೆ ಈ ಸಮಯದಲ್ಲಿ ನಿಮ್ಮ ಸಂಪಾದನೆ ಹೇಗಿರುತ್ತೆ ಅನ್ನೋದನ್ನು ಯೋಚನೆ ಮಾಡಿದ್ದೀರಾ? ಹಣವನ್ನು ಸುಮ್ಮನೆ ಖರ್ಚು ಮಾಡುತ್ತಿದ್ದರೆ, ಅದು ಯಶಸ್ವಿ ಜನರ ಸಂಕೇತವೇ ಅಲ್ಲ. ನೆನಪಿಡಿ, ಆದಾಯವು ನಿಮ್ಮ ಕಠಿಣ ಪರಿಶ್ರಮದ ಫಲಿತಾಂಶವಾಗಿದೆ.  ಆದ್ದರಿಂದ ನಿಮ್ಮ ಸಂಪಾದನೆಯನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡಿ.

ನಾಯಕತ್ವ ಬರುತ್ತದೆಯೇ?
ನಾಯಕತ್ವವೆಂದರೆ (leadership)ಇಡೀ ಗುಂಪಿನ ಆಜ್ಞೆಯನ್ನು ನಿಮ್ಮ ಕೈಯಲ್ಲಿ ತೆಗೆದುಕೊಳ್ಳುವುದು.  ಆದರೆ ಯಶಸ್ವಿಯಾಗುವ ಪ್ರಕ್ರಿಯೆಯಲ್ಲಿ,  ನೀವು ನಿಮ್ಮ ತಂಡವನ್ನು ಉತ್ತಮ ರೀತಿಯಲ್ಲಿ ಹೇಗೆ ನಡೆಸಿಕೊಳ್ಳುತ್ತೀರಿ ಅನ್ನೋದು ಮುಖ್ಯ. ನೀವು ನಾಯಕತ್ವಕ್ಕೆ ಹೆದರಿದರೆ, ನೀವು ಯಶಸ್ಸನ್ನು ಪಡೆಯುವುದಿಲ್ಲ. ಆದ್ದರಿಂದ ಯಾವಾಗಲೂ ಒಬ್ಬ ನಾಯಕನಾಗಲು ನಿಮ್ಮನ್ನು ನೀವು ಸಿದ್ಧಪಡಿಸಿಕೊಳ್ಳಿ. 
 

ಸಮಸ್ಯೆಗಳಿಗೆ ಹೆದರೋದಿಲ್ಲ
ಯಶಸ್ವಿ ವ್ಯಕ್ತಿಯು ಎಂದಿಗೂ ಸಮಸ್ಯೆಗಳಿಗೆ ಹೆದರುವುದಿಲ್ಲ. ಬದಲಾಗಿ, ಅವನು ಅವುಗಳನ್ನು ಎದುರಿಸುವ ಮಾರ್ಗಗಳನ್ನು ಹುಡುಕುತ್ತಾನೆ. ಯೋಜನೆಯಲ್ಲಿ ಏನಾದರೂ ತಪ್ಪಾದಾಗ ನೀವು ಸಹ ನರ್ವಸ್ ಆಗುತ್ತೀರಾ? ನೀವು ಎರಡನೇ ಆಯ್ಕೆಯನ್ನು ಆರಿಸಿಕೊಂಡರೆ, ನೀವು ಯಶಸ್ಸಿಗೆ ಮಾತ್ರವಲ್ಲದೆ ತೊಂದರೆಗಳಿಗೂ ಸಿದ್ಧರಾಗಿರುತ್ತೀರಿ. ಸಮಸ್ಯೆಗಳನ್ನು ಎದುರಿಸುವ ಮೂಲಕ ನಾವು ಜೀವನದಲ್ಲಿ ಸಾಕಷ್ಟು ಕಲಿಯುತ್ತೇವೆ.

Latest Videos

click me!