ಮೈಸೂರು (ಮಾ.28): ಅಧಿಕಾರಿಗಳ ಸಹಕಾರದಿಂದ ಕೋಟಿ ಕೋಟಿ ಹಣ ಸಾಗಿಸುತ್ತಿದ್ದರೂ ಚುನಾವಣಾ ಆಯೋಗ ಏನು ಮಾಡುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದರು. ನಗರ ಕಾಂಗ್ರೆಸ್ ಸಮಿತಿಯು ವಿದ್ಯಾರಣ್ಯಪುರಂನ ಭೂತಾಳೆ ಮೈದಾನದಲ್ಲಿ ಆಯೋಜಿಸಿದ್ದ ಎಂಡಿಎ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಮತ್ತು ಅವರ ಬೆಂಬಲಿಗರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸೋಲಿನ ಭೀತಿಯಿಂದ ಐಟಿ, ಇಡಿ, ಸಿಬಿಐ ಮುಂತಾದ ಸಂಸ್ಥೆಯನ್ನು ಕೇಂದ್ರ ಸರ್ಕಾರ ಬಳಸಿಕೊಳ್ಳುತ್ತಿದೆ. ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ರೇಡ್ ಮಾಡಲಾಗುತ್ತಿದೆ. ಐಟಿ ರೇಡ್ ಮಾಡಿದ ಬಳಿಕ ಚುನಾವಣಾ ಬಾಂಡ್ ಗೆ ಕೋಟಿಗಟ್ಟಲೆ ದೇಣಿಗೆ ಪಡೆಯಲಾಗುತ್ತಿದೆ. ಮಾಧ್ಯಮವನ್ನೂ ನಿಯಂತ್ರಿಸುತ್ತಿರುವುದರಿಂದ ಸತ್ಯ ಹೇಳಲು ಭಯಪಡುತ್ತಿದ್ದಾರೆ ಎಂದರು.
dinesh Gundu rao
ಸ್ವಾತಂತ್ರ್ಯ ಬಂದ ಮೇಲೆ ಅತ್ಯಂತ ಮುಖ್ಯ ಚುನಾವಣೆ ಇದಾಗಿದೆ. ಪ್ರಜಾಪ್ರಭುತ್ವ ಅಳಿವು ಉಳಿವಿನ ಪ್ರಶ್ನೆಯಾದ ಕಾರಣ ಜನರು ಎಚ್ಚೆತ್ತುಕೊಳ್ಳಬೇಕು. ಬೆಂಕಿ ಹಚ್ಚುವ ರಾಜಕಾರಣ ಬೇಡ. ಬದುಕನ್ನು ಉಳಿಸುವ ರಾಜಕಾರಣ ಬೇಕಿದೆ. ಮೋದಿಯನ್ನು ಎದುರಿಸುವ ನಾಯಕ ದೇಶದಲ್ಲಿ ಇದ್ದರೆ ಅದು ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತ್ರ.
ರಾಜ್ಯದಿಂದ 28 ಸ್ಥಾನಗಳನ್ನು ಗೆದ್ದು ಕಳುಹಿಸಿದರೆ ಭಾರತಕ್ಕೆ ಹೊಸ ಸಂದೇಶ ಕೊಡಲು ಸಾಧ್ಯವಾಗುತ್ತದೆ ಎಂದರು. ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್ ಮಾತನಾಡಿ, ಕಾಂಗ್ರೆಸ್ ರಾಷ್ಟ್ರಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿತು. ಅದಕ್ಕಾಗಿ ಅನೇಕ ಮಹನೀಯರು ತಮ್ಮ ತ್ಯಾಗ ಬಲಿದಾನ ಮಾಡಿದರು. ಎಪ್ಪತ್ತ್ತ್ಯೈದು ವರ್ಷಗಳಲ್ಲಿ ಕಾಂಗ್ರೆಸ್ ಏನು ವಾಡಿದೆ ಅಂತ ಕೇಳುವವರಿಗೆ ಉತ್ತರ ಕೊಡಲಾಗಿದೆ.
Dinesh resigns
ದೇಶದಲ್ಲಿ ಬದಲಾವಣೆ ತಂದು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡುವ ಭರವಸೆ ಹುಸಿಯಾಗಿದೆ ಎಂದರು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆಯೇ ಹೊರತು, ದಿವಾಳಿ ಆಗಿಲ್ಲ. ದುಷ್ಟ ಶಕ್ತಿಯನ್ನು ಧಮನ ಮಾಡಲು ಒಟ್ಟಿಗೆ ಕೆಲಸ ಮಾಡೋಣ ಎಂದು ಅವರು ಹೇಳಿದರು.