ಮೈಸೂರು (ಮಾ.28): ಮುಖ್ಯಮಂತ್ರಿ ಪದವಿ ಯಾರಿಗೂ ಶಾಶ್ವತ ಅಲ್ಲ. ಎರಡನೇ ಬಾರಿ ಸಿಎಂ ಆಗಿದ್ದೀರಿ. ನಿಮ್ಮ ದುರಂಕಾರದ ಮಾತು ಪಕ್ಕಕ್ಕಿಟ್ಟು, ರಾಜಕೀಯ ಜೀವನ ಕಡೆಘಟ್ಟದಲ್ಲಿರುವ ನೀವು ನಾಡಿನ ಜನರಿಗೆ ಏನಾದು ಕೊಡುಗೆ ನೀಡಿ ಹೋಗಲು ಪ್ರಯತ್ನಿಸಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಬುಧವಾರ ನಡೆದ ಬಿಜೆಪಿ- ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.