ನಟ ದಳಪತಿ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ನಡುವೆ, ಅವರ ಗೆಳತಿ ಎನ್ನಲಾದ ನಟಿ ತ್ರಿಷಾ ಕೃಷ್ಣನ್, ವಿಜಯ್ ಅವರ ರಾಜಕೀಯ ವಿರೋಧಿ ಸ್ಟಾಲಿನ್ ಕುಟುಂಬ ನಿರ್ಮಿಸುತ್ತಿರುವ ಸಿನಿಮಾದಲ್ಲಿ ನಟಿಸಲು ಮುಂದಾಗಿದ್ದು, ಇದು ಹೊಸ ಚರ್ಚೆಗೆ ಕಾರಣವಾಗಿದೆ.
ತಮಿಳುನಾಡಿನಲ್ಲಿ, ಇತಿಹಾಸ ಸೃಷ್ಟಿಸಿದ ನಟ ದಳಪತಿ (ಜೋಸೆಫ್) ವಿಜಯ್ ಕೊನೆಗೂ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿ ಆಯ್ತು. ವಿಜಯ್ ಅವರು ಮುಖ್ಯಮಂತ್ರಿ ರೇಸ್ನಲ್ಲಿ ಇದ್ದಾಗಿನಿಂದಲೂ ಹೈಲೈಟ್ ಆಗಿದ್ದು, ಅವರ ಸ್ನೇಹಿತೆ ತ್ರಿಷಾ ಕೃಷ್ಣನ್ (Trisha Krishan). ಅದು ಎಷ್ಟರ ಮಟ್ಟಿಗೆ ಎಂದರೆ ಅವರ ಪ್ರಮಾಣ ವಚನ ಸ್ವೀಕಾರದ ಸಮಯದಲ್ಲಿಯೂ, ಕ್ಯಾಮೆರಾಗಳ ಕಣ್ಣು ವಿಜಯ್ಗಿಂತ ಹೆಚ್ಚಾಗಿ ತ್ರಿಷಾ ಮೇಲೆ ನೆಟ್ಟಿತ್ತು!
26
ದಾಂಪತ್ಯ ಕೊನೆಯಾಗಿಲ್ಲ
ಸಂಗೀತಾ ಅವರ ಜೊತೆಗಿನ ದಾಂಪತ್ಯ ಜೀವನವನ್ನು ಅಧಿಕೃತವಾಗಿ ಇನ್ನೂ ವಿಜಯ್ ಕೊನೆಗೊಳಿಸಿಲ್ಲ. ಆದರೆ ಬಹಿರಂಗವಾಗಿಯೇ ತ್ರಿಷಾ ಮತ್ತು ವಿಜಯ್ ನಡುವಿನ ಸಂಬಂಧ ಎಲ್ಲರಿಗೂ ತಿಳಿದೇ ಹೋಗಿದೆ. ಅತ್ತ ಡಿವೋರ್ಸ್ ಆಗುತ್ತಿದ್ದಂತೆಯೇ ಇತ್ತ ಮದುವೆಯಾಗುತ್ತಾರೆ ಎಂದು ಹೇಳಲಾಗುತ್ತಿದೆ.
36
ರಜನಿಕಾಂತ್ ಜೊತೆ
ಆದರೆ, ಇದರ ನಡುವೆಯೇ ತ್ರಿಷಾ ತಮ್ಮ ಅಭಿಮಾನಿಗಳಿಗೆ ಭರ್ಜರಿ ಗುಡ್ನ್ಯೂಸ್ ಕೊಟ್ಟಿದ್ದಾರೆ. ಅದೇನೆಂದರೆ, ಸ್ಟಾರ್ ರಜನಿಕಾಂತ್ ಮತ್ತು ಉಳಗನಾಯಗನ್ ಕಮಲ್ ಹಾಸನ್ ಅವರಿಗೆ ನಾಯಕಿಯಾಗಲಿದ್ದಾರೆ ತ್ರಿಷಾ. ಈ ಜೋಡಿ ಹಲವು ವರ್ಷಗಳ ಬಳಿಕ ಒಟ್ಟಿಗೇ ನಟಿಸುತ್ತಿದ್ದು, ಚಿತ್ರಕ್ಕೆ ತ್ರಿಷಾ ನಾಯಕಿ ಎನ್ನುವುದು ಅಭಿಮಾನಿಗಳಲ್ಲಿ ಸಾಕಷ್ಟು ಸಂತಸ ಮೂಡಿಸಿದೆ.
ಈ ಮೆಗಾ ಪ್ರಾಜೆಕ್ಟ್‌ನಲ್ಲಿ ತ್ರಿಷಾ ಕೃಷ್ಣನ್ ನಾಯಕಿಯಾಗಿ ಕಾಣಿಸಿಕೊಳ್ಳಲ್ಲಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ರಜಿನಿ ಕಾಂತ್ ಮತ್ತು ಕಮಲ್ ಹಾಸನ್ ಇದಾಗಲೇ ಹಲವಾರು ಸಿನಿಮಾ ಒಟ್ಟಿಗೇ ಮಾಡಿದ್ದರೂ ಹಲವು ವರ್ಷ ಒಂದೇ ಕಡೆ ಕಾಣಿಸಿಕೊಂಡಿರಲಿಲ್ಲ. 40 ವರ್ಷಗಳ ಬಳಿಕ ಇವರಿಬ್ಬರೂ ಜೊತೆಯಾಗುತ್ತಿದ್ದಾರೆ. ಆದರೆ, ಇದು ಮುಖ್ಯಮಂತ್ರಿ ಆಗಿದ್ದ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರ ಪುತ್ರ ಇನ್ಬನಿಧಿ ಸ್ಟಾಲಿನ್ ನಿರ್ಮಾಣದ ಅಡಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ಹಾಗೆ ನೋಡಿದರೆ ಸ್ಟಾಲಿನ್ ಹಾಗೂ ದಳಪತಿ ವಿಜಯ್ ರಾಜಕೀಯ ವಿರೋಧಿಗಳು! ಈ ಸಿನಿಮಾವನ್ನ ʻರೆಡ್ ಜೈಂಟ್ ಮೂವೀಸ್ʼ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ. ಆದ್ದರಿಂದ ವಿಜಯ್ ವಿರೋಧಿ ಜೊತೆ ತ್ರಿಷಾ ಕೈಜೋಡಿಸ್ಬೋದಾ ಎನ್ನುವ ಪ್ರಶ್ನೆ ಕಾಡತೊಡಗಿದೆ.
56
ವಿಡಿಯೋ ರಿಲೀಸ್
ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಅವರ ಚಿತ್ರದಲ್ಲಿ ತ್ರಿಷಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇದಾಗಲೇ ಕೆಲವು ತಿಂಗಳ ಹಿಂದೆ ವಿಡಿಯೋ ಒಂದು ರಿಲೀಸ್ ಆಗಿತ್ತು. ಅದರಲ್ಲಿ ರಜಿನಿ ಮತ್ತು ಕಮಲ್ ರೆಟ್ರೋ ಲುಕ್ನಲ್ಲಿ ಕಾಣಿಸಿಕೊಂಡಿದ್ದರು. ಯಾರು ಹೀರೋ?ʼ ಎಂಬ ಡೈಲಾಗ್ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಯ್ತು. ಇದಕ್ಕೆ ಹೀರೋಯಿನ್ ತ್ರಿಷಾ ಎನ್ನಲಾಗುತ್ತಿದೆ.
66
ಮಹಿಳಾ ಪ್ರಧಾನ
ಇದು ಮಹಿಳಾ ಪ್ರಧಾನ ಚಿತ್ರ ಎನ್ನಲಾಗುತ್ತಿದೆ. ಇದಾಗಲೇ ತ್ರಿಷಾರ ಜನಿಕಾಂತ್ ಅವರೊಂದಿಗೆ ʻಪೆಟ್ಟಾʼ ಸಿನಿಮಾದಲ್ಲಿ ನಟಿಸಿದ್ದಾರೆ, ಕಮಲ್ ಹಾಸನ್ ಅವರೊಂದಿಗೆ ʻಮನ್ಮದನ್ ಅಂಬುʼ ಮತ್ತು ʻತೂಂಗಾ ವನಮ್ʼ ನಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.