ತಮಿಳುನಾಡು ರಾಜಕೀಯದಲ್ಲಿ ನಟ ದಳಪತಿ ವಿಜಯ್ ಅವರ 'ತಮಿಳು ವೆಟ್ರಿ ಕಳಗಂ' ಪಕ್ಷವು ಐತಿಹಾಸಿಕ ಗೆಲುವು ಸಾಧಿಸಿದೆ. ಈ ಗೆಲುವಿನ ಬೆನ್ನಲ್ಲೇ, ಈ ಹಿಂದೆ ತಾನು ಮುಖ್ಯಮಂತ್ರಿಯಾಗುವ ಆಸೆ ವ್ಯಕ್ತಪಡಿಸಿದ್ದ ತ್ರಿಷಾ ಕೃಷ್ಣನ್ ಅವರ ಹಳೆಯ ವಿಡಿಯೋ ವೈರಲ್ ಆಗಿದ್ದು, ಅವರು ವಿಜಯ್ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ತಮಿಳುನಾಡು ರಾಜಕೀಯವು ಹೊಸ ಇತಿಹಾಸವನ್ನೇ ಬರೆದಿದೆ. ದಶಕಗಳವರೆಗೆ ಚುಕ್ಕಾಣಿ ಹಿಡಿದಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳನ್ನು ಹಿಂದಿಕ್ಕಿ ನಟ ದಳಪತಿ ವಿಜಯ್ ಅವರ ‘ತಮಿಳು ವೆಟ್ರಿ ಕಳಗಂ'(ಟಿವಿಕೆ) ಭರ್ಜರಿ ಫಲಿತಾಂಶ ತಂದಿದೆ. ಸದ್ಯದ ಮಟ್ಟಿಗೆ ಬಹುಮತವಿಲ್ಲದಿದ್ದರೂ, ಇತರ ಪಕ್ಷಗಳ ಜೊತೆ ಸೇರಿ ಮೈತ್ರಿ ಮಾಡಿಕೊಂಡು ವಿಜಯ್ ಅವರು ಮುಖ್ಯಮಂತ್ರಿ ಆಗುವ ಎಲ್ಲ ಸಾಧ್ಯತೆಗಳೂ ನಿಚ್ಚಳವಾಗುವೆ.
26
ದಳಪತಿ ವಿಜಯ್ ಡಿವೋರ್ಸ್ಸ್
ವಿಜಯ್ ಮತ್ತು ಅವರ ಪತ್ನಿ ಸಂಗೀತಾ ನಡುವಿನ ಡಿವೋರ್ಸ್ ವಿವಾದ, ಅದರ ಬೆನ್ನಲ್ಲೇ ವಿಜಯ್ ಜೊತೆ ತ್ರಿಷಾ ಕೃಷ್ಣನ್ಹೆಸರು ಇವೆಲ್ಲ ವಿವಾದಗಳ ನಡುವೆ ವಿಜಯ್ ಅವರು ಗೆಲುವಿನ ನಗೆ ಬೀರುತ್ತಿದ್ದಾರೆ. ಇವರ ಪಾಲಿಗೆ ನಟಿ ತ್ರಿಷಾ (Trisha krishnan) ಅವರೇ ಲಕ್ಕಿ ಚಾರ್ಮ್ ಆಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಕಾರಣ, ಫಲಿತಾಂಶದ ಬೆನ್ನಲ್ಲೇ ತ್ರಿಷಾ ವಿಜಯ್ ಮನೆಗೆ ಓಡಿ ಹೋಗಿರುವುದು.
36
ತ್ರಿಷಾ ಕೃಷ್ಣನ್ ಹಳೆಯ ವಿಡಿಯೋ
ಈ ಮಧ್ಯೆ, ತ್ರಿಷಾ ಕೃಷ್ಣನ್ ಅವರ ಹಳೆಯ ವಿಡಿಯೋ ಒಂದು ಇದೀಗ ವೈರಲ್ ಆಗುತ್ತಿದೆ. 2004 ರ ಸಂದರ್ಶನದ ವಿಡಿಯೋ ಇದಾಗಿದ್ದು, ಇವತ್ತಿನ ರಾಜಕೀಯ ಫಲಿತಾಂಶದಿಂದಾಗಿ ಮತ್ತೆ ವೈರಲ್ ಆಗುತ್ತಿದೆ.
ತ್ರಿಷಾ ಅವರ ಚಲನಚಿತ್ರ ವೃತ್ತಿಜೀವನದ ಆರಂಭಿಕ ವರ್ಷಗಳಲ್ಲಿ ನಡೆದ ಸಂದರ್ಶನದಲ್ಲಿ, ತ್ರಿಷಾ ಅವರನ್ನು ಅವರ ಮಹತ್ವಾಕಾಂಕ್ಷೆಗಳು ಮತ್ತು ದೀರ್ಘಕಾಲೀನ ಗುರಿಗಳ ಬಗ್ಗೆ ಕೇಳಲಾಯಿತು. ಆ ಸಮಯದಲ್ಲಿ ಅವರು ಮುಂದಿನ ಹತ್ತು ವರ್ಷಗಳಲ್ಲಿ ನಾನು ತಮಿಳುನಾಡಿನ ಮುಖ್ಯಮಂತ್ರಿಯಾಗಲು ಬಯಸುವೆ ಎಂದಿದ್ದರು.
56
ಮುಖ್ಯಮಂತ್ರಿ ಆಗುವ ಆಸೆ
ವೀಡಿಯೊದಲ್ಲಿ, ತ್ರಿಷಾ ತಮಾಷೆಯಾಗಿ, "ನಾನು ತಮಿಳುನಾಡಿನ ಮುಖ್ಯಮಂತ್ರಿಯಾಗಲು ಬಯಸುತ್ತೇನೆ. ಪ್ರಾಮಾಣಿಕವಾಗಿ! ಕಾದು ನೋಡಿ; ಮುಂದಿನ 10 ವರ್ಷಗಳಲ್ಲಿ ನಾನು ಅದನ್ನು ಸಾಧಿಸುತ್ತೇನೆ ಎಂದಿದ್ದರು. ಮುಖ್ಯಮಂತ್ರಿಯಾದ ನಂತರ ನೀವು ಏನು ಮಾಡುತ್ತೀರಿ ಎಂದು ಅವರನ್ನು ಕೇಳಲಾಯಿತು, ಅದಕ್ಕೆ ತ್ರಿಷಾ, ಹಾಸ್ಯಮಯ ಉತ್ತರವನ್ನು ನೀಡಿ ಮೊದಲು, ನೀವೆಲ್ಲರೂ ಮತ ಚಲಾಯಿಸಿ ಮತ್ತು ನನ್ನನ್ನು ಆಯ್ಕೆ ಮಾಡಿ, ನಂತರ ನಾನು ನಿಮಗೆ ಹೇಳುತ್ತೇನೆ ಎಂದಿದ್ದರು.
66
ವಿಜಯ್ ನಿವಾಸಕ್ಕೆ ಭೇಟಿ
ಇಂದು 43 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ತ್ರಿಷಾ, ಚೆನ್ನೈನಲ್ಲಿರುವ ವಿಜಯ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಅವರ ಭೇಟಿಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ವೀಡಿಯೊದಲ್ಲಿ, ತ್ರಿಷಾ ಚೆನ್ನೈನಲ್ಲಿರುವ ವಿಜಯ್ ಅವರ ನಿವಾಸಕ್ಕೆ ಕಾರಿನಲ್ಲಿ ಆಗಮಿಸುತ್ತಿರುವುದು ಕಂಡುಬಂದಿದೆ. ಇದಾಗಲೇ, ನಟಿ ತಿರುಪತಿಯ ತಿರುಮಲ ವೆಂಕಟೇಶ್ವರ ದೇವಸ್ಥಾನದಲ್ಲಿ ಕಳೆದಿದ್ದರು. ಬೆಟ್ಟದ ದೇವಾಲಯದ ದೃಶ್ಯಗಳು ಶೀಘ್ರದಲ್ಲೇ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡವು, ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಗಮನ ಸೆಳೆದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.