ಪತ್ನಿ ಸಾರಾಗೆ ವಿಚ್ಛೇದನ ನೀಡಿರುವ ಸಚಿನ್‌ ಪೈಲಟ್‌, ನಾಮಪತ್ರದಿಂದ ಬಯಲಾಯ್ತು ರಹಸ್ಯ!

First Published | Oct 31, 2023, 6:46 PM IST

Sachin Pilot Divorce From His Wife Sara Abdullah ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಟೋಂಕ್‌ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿರುವ ಮಾಜಿ ಉಪಮುಖ್ಯಮಂತ್ರಿ ಸಚಿನ್‌ ಪೈಲಟ್‌ ಮಂಗಳವಾರ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಅವರು ತಮ್ಮ ಪತ್ನಿ ಹಾಗೂ ಫಾರುಖ್‌ ಅಬ್ದುಲ್ಲಾ ಅವರ ಪುತ್ರ ಸಾರಾ ಅಬ್ದುಲ್ಲಾಗೆ ವಿಚ್ಛೇದನ ನೀಡಿರುವ ವಿಚಾರ ಬಹಿರಂಗವಾಗಿದೆ.

ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯ ಸದಸ್ಯ ಸಚಿನ್‌ ಪೈಲಟ್‌ ತಮ್ಮ ಪತ್ನಿಯಿಂದ ದೂರವಾಗಿದ್ದಾರೆ ಎನ್ನುವ ವರದಿಯಾಗಿದೆ.

ಸಚಿನ್‌ ಪೈಲಟ್‌ ತಮ್ಮ ಪತ್ನಿ ಸಾರಾ ಅಬ್ದುಲ್ಲಾ ಪೈಲಟ್‌ಗೆ ವಿಚ್ಛೇದನ ನೀಡಿದ್ದಾರೆ. ಮಂಗಳವಾರ ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಸಲ್ಲಿಸಿರುವ ನಾಮಪತ್ರದಲ್ಲಿ ತಿಳಿಸಿದ್ದಾರೆ.

Tap to resize

ತಮ್ಮ ನಾಮಪತ್ರದ ಅಫಡವಿಟ್‌ನಲ್ಲಿ ಸಚಿನ್‌ ಪೈಲಟ್‌ ಈ ಮಾಹಿತಿ ನೀಡಿದ್ದಾರೆ. ಪತ್ನಿ ಎಂದು ಇರುವ ಕಾಲಂನ ಪಕ್ಕದಲ್ಲಿ ವಿಚ್ಛೇದಿತ ಎಂದು ಅವರು ಬರೆದುಕೊಂಡಿದ್ದಾರೆ.

ರಾಜಸ್ಥಾನ ವಿಧಾನಸಭೆಯ ಚುನಾವಣೆಯಲ್ಲಿ ಸಚಿನ್‌ ಪೈಲಟ್‌ ಟೋಂಕ್‌ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಈ ಬಾರಿಯ ಅಫಡವಿಟ್‌ನಲ್ಲಿ ಅವರು ತಾವು ವಿಚ್ಛೇದನ ಪಡೆದುಕೊಂಡಿರುವ ಮಾಹಿತಿ ನೀಡಿದ್ದಾರೆ.

ಸಾರಾ ಅಬ್ದುಲ್ಲಾ 2004ರ ಜನವರಿಯಲ್ಲಿ ಸಚಿನ್‌ ಪೈಲಟ್‌ ಜೊತೆ  ವಿವಾಹವಾಗಿದ್ದರು. ಸಚಿನ್‌ ಪೈಲಟ್‌ ಅವರು ವಿಚ್ಛೇದನ ಪಡೆದುಕೊಂಡಿರುವ ಬಗ್ಗೆ ತಮಗೆ ಮಾಹಿತಿಯೇ ಇಲ್ಲ ಎಂದು ಪೈಲಟ್‌ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿಯಾದ ಫಾರೂಕ್‌ ಅಬ್ದುಲ್ಲಾ ಅವರ ಪುತ್ರಿ ಹಾಗೂ ಓಮರ್‌ ಅಬ್ದುಲ್ಲಾ ಅವರ ಸಹೋದರಿ ಸಾರಾ ಅಬ್ದುಲ್ಲಾ.

ಪ್ರೀತಿಸಿ ವಿವಾಹವಾಗಿದ್ದ ದಂಪತಿಗಳಿಗೆ ಇಬ್ಬರು ಪುತ್ರರಿದ್ದಾರೆ. ಸಚಿನ್‌ ಪೈಲಟ್‌ ಜೊತೆ ವಿಚ್ಛೇದನವಾಗಿದ್ದರೂ ಸಾರಾ ಪೈಲಟ್‌ ತಮ್ಮ ಇನ್ಸ್‌ಟಾಗ್ರಾಮ್‌ ಪೇಜ್‌ನಲ್ಲಿ ಸಚಿನ್‌ ಪೈಲಟ್‌ ಕುರಿತಾದ ಪೋಸ್ಟ್‌ಗಳನ್ನು ಹಾಕುತ್ತಲೇ ಇದ್ದಾರೆ.

ಸಚಿನ್‌ ಪೈಲಟ್‌ ಹಾಗೂ ಸಾರಾ ಅಬ್ದುಲ್ಲಾ ಅವರ ವಿಚ್ಛೇದನ ಕುರಿತಾದ ಅಧಿಕೃತ ಸುದ್ದಿ ಇದೇ ಮೊದಲ ಬಾರಿಗೆ ಮಾಧ್ಯಮಗಳಲ್ಲಿ ವರದಿಯಾಗಿದೆ.

ನಾಮಪತ್ರ ಸಲ್ಲಿಕೆಯ ಅಫಡವಿಟ್‌ನ ವೇಳೆ ಡಿಪೆಂಡೆಂಟ್‌ಗಳ ಕಾಲಂನಲ್ಲಿ ತಮ್ಮ ಪುತ್ರರಾದ ಅರನ್‌ ಪೈಲಟ್‌ ಹಾಗೂ ವಿಹಾನ್‌ ಪೈಟಲ್‌ ಹೆಸರನ್ನು ನಮೂದಿಸಿದ್ದಾರೆ.

ಸಚಿನ್‌ ಪೈಲಟ್‌ ಹಾಗೂ ಸಾರಾ ಪೈಲಟ್‌ ವಿಚ್ಛೇದನದ ಗುಸುಗುಸು 2014ರಲ್ಲಿಯೂ ಬಂದಿತ್ತು. ಆದರೆ, ಅದು ಹೆಚ್ಚಾಗಿ ಸುದ್ದಿಯಾಗಿರಲಿಲ್ಲ.

2014ರ ಲೋಕಸಭೆ ಚುನಾವಣೆಯ ವೇಳೆ ಸಚಿನ್‌ ಪೈಲಟ್‌ ಹಾಗೂ ಸಾರಾ ಪೈಲಟ್‌ ನಡುವೆ ಸಮಸ್ಯೆ ಇದೆ ಎನ್ನುವ ಸುದ್ದಿಗಳಿದ್ದವು. ಆದರೆ, ರಾಜಕೀಯದ ನಡುವೆ ಈ ಸುದ್ದಿ ಅಷ್ಟಾಗಿ ವರದಿಯಾಗಿರಲಿಲ್ಲ.

2018ರಲ್ಲಿ ಸಚಿನ್‌ ಪೈಲಟ್‌ ರಾಜಸ್ಥಾನದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ವೇಳೆ ಸಾರಾ ಪೈಲಟ್‌ ಹಾಗೂ ಅವರ ಇಬ್ಬರು ಪುತ್ರರು ಕಾರ್ಯಕ್ರಮಕ್ಕೆ ಹಾಜರಾಗಿದ್ದರು.

ಅದಲ್ಲದೆ, ಮಾವ ಫಾರೂಕ್‌ ಅಬ್ದುಲ್ಲಾ ಕೂಡ ಪ್ರಮಾಣ ವಚನ ಸಮಾರಂಭದಲ್ಲಿದ್ದರು. ಆದರೆ, ಈಗ ಇಬ್ಬರ ನಡುವೆ ವಿಚ್ಛೇದನವಾಗಿದೆ ಎನ್ನುವ ಮಾಹಿತಿ ಅಧಿಕೃತವಾಗಿದೆ.

ಇನ್ನು ಸಚಿನ್‌ ಪೈಲಟ್‌ ಅವರ ನಾಮಪತ್ರವನ್ನು ಗಮನಿಸುವುದಾದರೆ, ಅವರ ಆಸ್ತಿ ಐದೇ ವರ್ಷಗಳಲ್ಲಿ ದ್ವಿಗುಣವಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ.

2018r ತಮ್ಮ ಅಫಡವಿಟ್‌ನಲ್ಲಿ 3.8 ಕೋಟಿ ಆಸ್ತಿ ಹೊಂದಿರುವುದಾಗಿ ಸಚಿನ್‌ ಪೈಲಟ್‌ ತಿಳಿಸಿದ್ದರು, ಅದೇ 2023ರಲ್ಲಿ 7.5 ಕೋಟಿ ಆಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ.

ಲಂಡನ್‌ನಲ್ಲಿ ಶುರುವಾಗಿತ್ತು ಸಚಿನ್‌-ಸಾರಾ ಲವ್‌ ಸ್ಟೋರಿ, ಕುಟುಂಬವನ್ನೇ ಧಿಕ್ಕರಿಸಿ ಮದುವೆಯಾಗಿತ್ತು ಈ ಜೋಡಿ!

Latest Videos

click me!