ಕರ್ನಾಟಕ ರಾಜಕಾರಣ ಟಾಪ್‌ 10 ತಿರುಗುಬಾಣ: ಐಟಿ ದಾಳಿಯ ನಂತರ ಸರ್ಕಾರದ ಮೇಲೆ ಮುಗಿಬಿದ್ದ ಬಿಜೆಪಿ

Published : Oct 18, 2023, 05:34 PM ISTUpdated : Oct 18, 2023, 05:52 PM IST

ಬೆಂಗಳೂರು (ಅ.18): ರಾಜ್ಯದಲ್ಲಿ ಕಳೆದ 15 ದಿನಗಳಿಂದ ನಡೆಯುತ್ತಿರುವ ಐಟಿ ದಾಳಿಯಲ್ಲಿ 100 ಕೋಟಿ ರೂ.ಗಿಂತ ಅಧಿಕ ಹಣ ಲಭ್ಯವಾಗಿದ್ದು, ಇದನ್ನು ಕಾಂಗ್ರೆಸ್‌ ಸರ್ಕಾರದ ಕಮೀಷನ್‌ ಎಂದು ಬಿಜೆಪಿ ಆರೋಪ ಮಾಡುತ್ತಿದೆ. ರಾಜ್ಯ ಸರ್ಕಾರವನ್ನು ಕಾಂಗ್ರೆಸ್‌ ಎಟಿಎಂ ಎಂದು ಆರೋಪಿಸುತ್ತಿದೆ. ಅದಕ್ಕೆ ಸಂಬಂಧಪಟ್ಟಂತೆ ವಿವಿಧ ಪೋಸ್ಟರ್‌ಗಳನ್ನು ಹರಿಬಿಟ್ಟಿದೆ. 

PREV
19
ಕರ್ನಾಟಕ ರಾಜಕಾರಣ ಟಾಪ್‌ 10 ತಿರುಗುಬಾಣ: ಐಟಿ ದಾಳಿಯ ನಂತರ ಸರ್ಕಾರದ ಮೇಲೆ ಮುಗಿಬಿದ್ದ ಬಿಜೆಪಿ

ಕಾಂಗ್ರೆಸ್‌ನ ಪಾಲಿಗೆ ಕರ್ನಾಟಕ ಎಂದಿಗೂ ಮುಚ್ಚದ ATM. ರಾಜ್ಯದಲ್ಲಾಗುವ ಕಲೆಕ್ಷನ್‌ನಲ್ಲಿ ಸೋರಿಕೆಯಾಗಿ ದೆಹಲಿಗೆ ಕಳಿಸುವುದರಲ್ಲಿ ಯಾವುದೇ ಕೊರತೆಯಾಗಬಾರದು ಎಂಬ ದೃಷ್ಟಿಯಿಂದ ಸಿದ್ದರಾಮಯ್ಯ ಸರ್ಕಾರ ಪ್ರತಿ ಸಚಿವಾಲಯಕ್ಕೂ ತಿಂಗಳ ಕಲೆಕ್ಷನ್‌ ಟಾರ್ಗೆಟ್‌ ನಿಗದಿ ಮಾಡಿದೆ.

29

ಕರ್ನಾಟಕ ಸಿಎಂ ಎಂದರೆ (Karnataka CM) ಕರ್ನಾಟಕ ಕಲೆಕ್ಷನ್‌ ಮಾಸ್ಟರ್‌ (Karnataka Collection Master) ಎಂದು ಆರೋಪವನ್ನು ಮಾಡಿದೆ. 

39

ಸಮಗ್ರ ಭ್ರಷ್ಟಾಚಾರಕ್ಕಾಗಿ ವಿಧಾನಸೌಧವನ್ನು ಭ್ರಷ್ಟಾಚಾರದ ಹೆಡ್ ಆಫೀಸ್ ಮಾಡಿಕೊಂಡು ಪಂಚರಾಜ್ಯ ಚುನಾವಣೆಗೆ ಭರಪೂರ ಫಂಡಿಂಗ್ ಮಾಡುವ ಹೊಣೆ ಹೊತ್ತಿರುವ ಕರ್ನಾಟಕದ ಕಲೆಕ್ಷನ್ ಮಾಸ್ಟರ್ಸ್ ಇವರೇ…

49

ಸ್ವಾಭಿಮಾನಿ ಕನ್ನಡಿಗರ ಸ್ವಾವಲಂಬನೆಯ ದುಡಿಮೆಯ ತೆರಿಗೆ ಹಣವನ್ನು ಪಂಚ ರಾಜ್ಯಗಳ ಚುನಾವಣೆಗೆ ಹಂಚುತ್ತಿರುವ ನಾಡದ್ರೋಹಿ ಲೂಟಿಕೋರರು.

59

ಕರ್ನಾಟಕವನ್ನು ಲೂಟಿ ಮಾಡುವ ರೇಸ್‌‌ನಲ್ಲಿ ಗೆಲ್ಲುವರಾರು..? ಜನತೆ ಕಾಂಗ್ರೆಸ್‌ಗೆ ಮತ ನೀಡಿ ಈಗಾಗಲೇ ಸೋತಿದ್ದಾರೆ ಎಂದು ಬಿಜೆಪಿ ಪೋಸ್ಟ್‌ ಮೂಲಕ ಟೀಕಿಸಿದೆ.

69

ರಾಜ್ಯದ ಕಾಂಗ್ರೆಸ್‌ ಸರ್ಕಾರಕ್ಕೆ ಪಂಚ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಮೊದಲನೇ ಹಂತದಲ್ಲಿ 1000 ಕೋಟಿ ರೂ. ಟಾರ್ಗೆಟ್ ನೀಡಿದೆ ಎಂದು ಬಿಜೆಪಿ ಆರೋಪಿಸಿದೆ.

79

ಪಂಚ ರಾಜ್ಯ ಚುನಾವಣೆಯಲ್ಲಿ ತೆಲಂಗಾಣ ಕಾಂಗ್ರೆಸ್‌ಗೆ 300 ಕೋಟಿ ರೂ.,  ಮಿಜೋರಾಂ ಕಾಂಗ್ರೆಸ್‌ಗೆ 100 ಕೋಟಿ ರೂ., ಛತ್ತಿಸ್‌ಗಢ‌ ಕಾಂಗ್ರೆಸ್‌ಗೆ 200 ಕೋಟಿ ರೂ., ರಾಜಸ್ಥಾನ‌ ಕಾಂಗ್ರೆಸ್‌ಗೆ 200 ಕೋಟಿ ರೂ. ಹಾಗೂ ಮಧ್ಯಪ್ರದೇಶ‌ ಕಾಂಗ್ರೆಸ್‌ಗೆ 200 ಕೋಟಿ ರೂ. ಹಂಚಿಕೆ ಮಾಡುವಂತೆ ಸೂಚಿಸಿದೆ ಎಂದು ಬಿಜೆಪಿ ಟೀಕೆ ಮಾಡಿದೆ.
 

89

ಹೈಕಮಾಂಡ್‌ ಪಾಲಿನ ಎಟಿಎಂ ಆಗಿರುವ ಕಾಂಗ್ರೆಸ್‌ ಸರ್ಕಾರ ಕರ್ನಾಟಕವನ್ನು ಬಗೆಬಗೆದು ದೋಚುತ್ತಿದೆ. ಪಂಚ ರಾಜ್ಯ ಚುನಾವಣೆಗಳಿಗೆ ಹಣ ಒದಗಿಸುವ ಗುತ್ತಿಗೆ ಪಡೆದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರಿಬ್ಬರೂ ಹೈಕಮಾಂಡ್‌ ಮೆಚ್ಚಿಸಲು ಭ್ರಷ್ಟಾಚಾರದಲ್ಲಿ ಮಿಂದೇಳುತ್ತಿದ್ದಾರೆ. 

99

ಕರ್ನಾಟಕ ರಾಜ್ಯದಲ್ಲಿ ಕಮಿಷನ್, ಕಲೆಕ್ಷನ್ ಮೂಲಕ ಸಾವಿರ ಕೋಟಿ ಟಾರ್ಗೆಟ್ ಮಾಡಿ ಸಂಗ್ರಹಿಸುತ್ತಿರುವ ಕಾಂಗ್ರೆಸ್ ಹಣ ಹಂಚುವ ಮುನ್ನವೇ ಸಿಕ್ಕಿ ಬಿದ್ದಿದೆ.

click me!

Recommended Stories