ಜನ್ಮದಿನಕ್ಕೂ ಮುನ್ನ ಕುಟುಂಬ ಸಮೇತರಾಗಿ ಮೋದಿಯನ್ನು ಭೇಟಿಯಾದ ನಟ ಜಗ್ಗೇಶ್!

Published : Mar 14, 2023, 03:58 PM IST

ಬೆಂಗಳೂರು (ಮಾ.14): ರಾಜ್ಯಸಭಾ ಸದಸ್ಯ,  ನವರಸ ನಾಯಕ ಜಗ್ಗೇಶ್ ಅವರು ಕುಟುಂಬ ಸಮೇತರಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಪತ್ನಿ ಪರಿಮಳಾ ಜಗ್ಗೇಶ್, ಎರಡನೇ ಪುತ್ರ ಯತಿರಾಜ್‌ ಅವರೊಂದಿಗೆ ಪ್ರಧಾನಿ ಜೊತೆಗಿರುವ ಫೋಟೋವನ್ನು ನಟ ಜಗ್ಗೇಶ್ ಸಾಮಾಜಿ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

PREV
14
ಜನ್ಮದಿನಕ್ಕೂ ಮುನ್ನ ಕುಟುಂಬ ಸಮೇತರಾಗಿ ಮೋದಿಯನ್ನು ಭೇಟಿಯಾದ ನಟ ಜಗ್ಗೇಶ್!

ಕುಟುಂಬ ಸಮೇತರಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ನಟ ಜಗ್ಗೇಶ್, ಪತ್ನಿ ಪರಿಮಳಾ ಜಗ್ಗೇಶ್, ಎರಡನೇ ಪುತ್ರ ಯತಿರಾಜ್‌ ಅವರೊಂದಿಗೆ ಪ್ರಧಾನಿ ಮೋದಿ. ಮೋದಿಗೆ ರಾಘವೇಂದ್ರ ಸ್ವಾಮಿಗಳ ವಿಗ್ರಹ ಸಮರ್ಪಣೆ

24

ನನ್ನ ಜನ್ಮದಿನದ ಆಶೀರ್ವಾದವನ್ನು ಮುಂಚಿತವಾಗಿ ಸ್ವೀಕರಿಸಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು ನರೇಂದ್ರ ಮೋದಿ ಸರ್ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿರುವ ನಟ ಜಗ್ಗೇಶ್.

34

ನನ್ನ ಬದುಕಿನ ಶ್ರೇಷ್ಠದಿನ ಇಂದು, ಮಾರ್ಚ್ 17 ನನ್ನ ಹುಟ್ಟು ದಿನ ,ಈ ವರ್ಷ ನನಗೆ 60ನೇ ವಸಂತ, ನನ್ನ ನೆಚ್ಚಿನ ಪ್ರಧಾನಿಗಳು ನನ್ನ ಹಾಗೂ ಹೆಂಡತಿ ಮಗನನ್ನು ಮನ ತುಂಬಿ ಹರಸಿದರು ಎಂದು ಜಗ್ಗೇಶ್ ಟ್ವೀಟ್.

44

ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಆಗಿ ನನ್ನ ಗುರುಗಳು ರಾಯರ ವಿಗ್ರಹ ಸಮರ್ಪಿಸಿದೆ ಎಂದು ಬರೆದುಕೊಂಡ ನವರಸ ನಾಯಕ ಜಗ್ಗೇಶ್.

Read more Photos on
click me!

Recommended Stories