Photos: ಸಕ್ಕರೆ ನಾಡಿನಲ್ಲಿ ಮೋದಿ ಮೇಲೆ ಕೇಸರಿ ಹೂವಿನ ಮಳೆ, ರೋಡ್‌ಶೋನಲ್ಲಿ ವ್ಯಕ್ತವಾದ ಮಂಡ್ಯ ಪ್ರೀತಿ!

First Published | Mar 12, 2023, 2:38 PM IST

ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಹಿಂದೆಯೂ ಸಾಕಷ್ಟು ರೋಡ್‌ ಶೋ ಮಾಡಿದ್ದರು. ಆದರೆ, ಸಕ್ಕರೆ ನಾಡಿನಲ್ಲಿ ನರೇಂದ್ರ ಮೋದಿಗೆ ಸಿಕ್ಕ ಸ್ವಾಗತ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಕೇಸರಿ ಬಣ್ಣದ ಹೂಗಳಿಂದಲೇ ನರೇಂದ್ರ ಮೋದಿ ಹಾಗೂ ಅವರು ಕಾರುಗಳು ಮುಚ್ಚಿ ಹೋಗಿದ್ದವು.

ಪ್ರಧಾನಿ ನರೇಂದ್ರ ಮೋದಿಗೆ ಭಾನುವಾರ ಮಂಡ್ಯದಲ್ಲಿ ಭರ್ಜರಿ ಸ್ವಾಗತ ನೀಡಲಾಯಿತು. ಕೇಸರಿ ಬಣ್ಣದ ಹೂವಿನ ಮಳೆಗೆರೆದು ಅವರನ್ನು ಸ್ವಾಗತ ಮಾಡಿದ್ದಾರೆ.

ಮಂಡ್ಯದ ಪಿಇಎಸ್‌ ಕಾಲೇಜಿನ ಹೆಲಿಪ್ಯಾಡ್‌ನಿಂದ 1.8 ಕಿಲೋಮೀಟರ್‌ ದೂರದವರೆಗೆ ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋ ನಡೆಸಿದರು.

Tap to resize

ಮೋದಿ ರೋಡ್‌ ಶೋ ನಡೆಸಿದ ಹಾದಿಯುದ್ದಕ್ಕೂ ನಿಂತಿದ್ದ ಬಿಜೆಪಿ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ಹೂವುಗಳನ್ನು ಅವರತ್ತ ಎಸೆದು ಸ್ವಾಗತಿಸಿದರು.

ಕೇಸರಿ ಹೂವಿನಲ್ಲಿಯೇ ಪ್ರಧಾನಿ ಮೋದಿ ಹಾಗೂ ಅವರ ಕಾರು ಮುಳುಗಿ ಹೋಗಿತ್ತು. ಮೋದಿ ಕಾರಿನ ಚಾಲಕನಿಗೆ ಸಹಾಯವಾಗುವಂತೆ ಎದುರಿನ ಗಾಜಿನ ಮೇಲಿದ್ದ ಹೂವನ್ನು ನಿರಂತರವಾಗಿ ತೆಗೆದುಹಾಕಲಾಗುತ್ತಿತ್ತು.

ಹಲವು ಸಮಯದಲ್ಲಿ ಸ್ವತಃ ಪ್ರಧಾನಿ ಮೋದಿಯೇ ಕಾರಿನ ಗಾಜಿನ ಮೇಲೆ ಬಿದ್ದ ಹೂವುಗಳನ್ನು ಜನರತ್ತ ಎಸೆಯುವ ಮೂಲಕ ಸಂಭ್ರಮಿಸಿದರು.

ಇನ್ನು ಮೋದಿ ಸ್ವಾಗತಕ್ಕೆ ಮಂಡ್ಯ ಜಿಲ್ಲೆ ಮದುವಣಗಿತ್ತಿಯಂತೆ ಸಜ್ಜಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಜನ ನಿಂತು ಮೋದಿ ರೋಡ್‌ ಶೋಅನ್ನು ವೀಕ್ಷಿಸಿದರು.

ಬಹುಶಃ ಈ ಚಿತ್ರವನ್ನು ದಿನದ ಚಿತ್ರ ಎಂದೂ ಕೂಡ ಹೇಳಬಹುದು. ರೋಡ್‌ಶೋದ ಸಂಭ್ರಮ ಇದರಲ್ಲಿ ಕಳೆಕಟ್ಟಿದೆ.

ರಸ್ತೆಯಲ್ಲಿ ನಿಂತ ಜನ ಮೋದಿ ಮೋದಿ ಎಂದು ಕೂಗುತ್ತಾ ಹರ್ಷೋದ್ಘಾರ ಮಾಡಿದರು. ಮೋದಿ ಕೂಡ ಯಾರಿಗೂ ಬೇಸರವಾಗದಂತೆ 1.8 ಕಿಲೋಮೀಟರ್‌ವರೆಗೂ ಉತ್ಸಾಹದಿಂದಲೇ ಜನರತ್ತ ಕೈಬೀಸಿದರು.

ಇಕ್ಕೆಲಗಳಲ್ಲಿ ನಿಂತ ಜನರು ತಮ್ಮ ಮೊಬೈಲ್‌ಗಳಲ್ಲಿ ಮೋದಿ ಅವರ ರೋಡ್‌ಶೋದ ವಿಡಿಯೋ, ಚಿತ್ರಗಳನ್ನು ತೆಗೆದು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿ ಸಂಭ್ರಮಿಸಿದ್ದಾರೆ.

Latest Videos

click me!