ಕತ್ತಲಲ್ಲಿ ಕಾಣಲ್ಲ, ಬೆಳಕಲ್ಲಿ ಹೊಳೆಯಲ್ಲ ಈ ಪ್ರದೀಪ್ ಈಶ್ವರ್, ಕರ್ನಾಟಕದ ಏಕೈಕ ಕಾಮಿಡಿ ಪೀಸ್ - ಪ್ರತಾಪ ಸಿಂಹ

Published : Oct 24, 2025, 01:44 PM IST

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವೈಯಕ್ತಿಕ ಟೀಕೆ ಹಾಗೂ ಅವಾಚ್ಯ ಪದಗಳನ್ನು ಬಳಸಿದ ಸಿಂಹ, ತಮ್ಮ ತಾಯಿಯ ಬಗ್ಗೆ ಅವಹೇಳನ ಮಾಡಿದ್ದಕ್ಕೆ ಈ ರೀತಿ ಉತ್ತರಿಸಬೇಕಾಯಿತು ಎಂದು ಹೇಳಿದ್ದಾರೆ.

PREV
16
ಅವಾಚ್ಯ ಪದಗಳನ್ನು ಬಳಸಿ ವಾಗ್ದಾಳಿ

ಮೈಸೂರು: ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರತಾಪ್ ಸಿಂಹ ಅವರು, ಪ್ರದೀಪ್ ಈಶ್ವರ್ ವಿರುದ್ಧ ಅತ್ಯಂತ ಕಟು ಮತ್ತು ಅವಾಚ್ಯ ಪದಗಳನ್ನು ಬಳಸಿ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.

26
ಮಾತನಾಡುವಾಗ ಎಚ್ಚರಿಕೆ ಇರಲಿ

ಶಾಸಕ ಪ್ರದೀಪ್ ಈಶ್ವರ್ ತಮ್ಮ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿದ ಪ್ರತಾಪ್ ಸಿಂಹ, ಇನ್ನೊಂದು ಬಾರಿ ತಮ್ಮ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ ಎಂದು ಪ್ರದೀಪ್ ಈಶ್ವರ್‌ಗೆ ಎಚ್ಚರಿಕೆ ನೀಡಿದರು.

36
ಪ್ರದೀಪ್ ಈಶ್ವರ್ ಕತ್ತಲಲ್ಲಿ ಕಾಣಲ್ಲ

ಪ್ರದೀಪ್ ಈಶ್ವರ್ ಅವರ ಬಾಹ್ಯ ರೂಪದ ಬಗ್ಗೆಯೂ ಪ್ರತಾಪ್ ಸಿಂಹ ವೈಯಕ್ತಿಕ ಟೀಕೆಗಳನ್ನು ಮಾಡಿದರು. 'ಪ್ರದೀಪ್ ಈಶ್ವರ್ ಕತ್ತಲಲ್ಲಿ ಕಾಣಲ್ಲ, ಬೆಳಕಲ್ಲಿ ಹೊಳೆಯಲ್ಲ. ಮುಳ್ಳಂದಿ ಮುಖದ ಕರ್ನಾಟಕದ ಏಕೈಕ ಕಾಮಿಡಿ ಪೀಸ್ ಪ್ರದೀಪ್ ಈಶ್ವರ್' ಎಂದು ಹರಿಹಾಯ್ದರು.

46
ಮುಳ್ಳಂದಿ ಮುಖದ ಕಾಮಿಡಿ ಪೀಸ್:

ಮುಳ್ಳು ಹಂದಿ ಮುಖದ ಕಾಮಿಡಿ ಪೀಸ್ ಹುಟ್ಟೋದು ನಿಮ್ಮ ಅಪ್ಪನಿಗೆ ಮಾತ್ರ. ನನ್ನ ತಂದೆ ವಯಸ್ಸಿನಲ್ಲಿದ್ದಾಗ ಚಿಕ್ಕಬಳ್ಳಾಪುರ ಕಡೆ ಬಂದಿದ್ದರೆ ನೀನು ಸುಂದರವಾಗಿಯೇ ಹುಟ್ಟುತ್ತಿದ್ದೆ. ಎಚ್ಚರಿಕೆ ಇರಬೇಕು ಮಗನೇ ನನ್ನ ಬಗ್ಗೆ ಮಾತಾಡುವಾಗ" ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

56
ಭಾಷೆ ಬಳಕೆ ಬಗ್ಗೆ ಕ್ಷಮೆಯಾಚನೆ:

ಪ್ರದೀಪ್ ಈಶ್ವರ್‌ಗೆ ಅವರದೇ ಭಾಷೆಯಲ್ಲಿ ಉತ್ತರ ನೀಡಬೇಕಾದ ಅನಿವಾರ್ಯತೆ ಬಂದಿದೆ ಎಂದು ಹೇಳಿದ ಪ್ರತಾಪ್ ಸಿಂಹ, ಈ ರೀತಿ ಕಠಿಣ ಪದಗಳನ್ನು ಬಳಸಿದ್ದಕ್ಕಾಗಿ ಕರ್ನಾಟಕದ ಜನರ ಬಳಿ ಕ್ಷಮೆ ಕೇಳುತ್ತೇನೆ ಎಂದರು.

66
ನನ್ನ ತಾಯಿ ಬಗ್ಗೆ ಅವಹೇಳನ:

ನನ್ನ ತಾಯಿ ಬಗ್ಗೆ ಪ್ರದೀಪ್ ಈಶ್ವರ್ ಅವಹೇಳನವಾಗಿ ಮಾತಾಡಿದ್ದಾನೆ. ಇನ್ನೊಂದು ಬಾರಿ ಎಚ್ಚರಿಕೆ ಇರಲಿ. ರಾಜಕೀಯವಾಗಿ, ಚಿಕ್ಕಬಳ್ಳಾಪುರದ ಗೌಡರ ಸಣ್ಣ ಮುನಿಸಿನ ಕಾರಣದಿಂದಾಗಿ ಪ್ರದೀಪ್ ಈಶ್ವರ್ ಗೆದ್ದಿದ್ದಾರೆ ಅಷ್ಟೇ ಎಂದು ಗೆಲುವಿನ ಬಗ್ಗೆಯೂ ಟೀಕಿಸಿದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories