Munirathna vs DK Shivakumar RR Nagar: ಡಿಸಿಎಂ ಡಿಕೆ ಶಿವಕುಮಾರ್ ತಮಗೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಮುನಿರತ್ನ ಆರೋಪಿಸಿದ್ದಾರೆ. ಓರ್ವ ಮಹಿಳೆಯನ್ನು ಶಾಸಕಿಯನ್ನಾಗಿಸಲು ತನ್ನನ್ನು ಸಾಯಿಸಲು ಅಥವಾ ರಾಜೀನಾಮೆ ಕೊಡಿಸಲು ಡಿಕೆಶಿ ಪ್ಲಾನ್ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರು ನಡಿಗೆ ಕಾರ್ಯಕ್ರಮ ಮುಗಿಸಿ ತೆರಳಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಆರ್‌ಆರ್ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ, ನನಗೆ ಡ್ರಾಮ ಗೊತ್ತಿಲ್ಲ. ನಾನು RSS ಕಾರ್ಯಕ್ರಮ ಮುಗಿಸಿ ಗಣವೇಶದಲ್ಲಿ ಬಂದಿದ್ದೀನಿ. ಇವರು ಹಲ್ಲುಜ್ಜದೇ ಸ್ನಾನ ಮಾಡದೇ ಬಂದಿದ್ದಾರೆ ಎಂದು ವ್ಯಂಗ್ಯ ಮಾಡಿದರು.
25
ಚನ್ನಪಟ್ಟಣ, ರಾಮನಗರದ ರೌಡಿ
ಚನ್ನಪಟ್ಟಣ, ರಾಮನಗರದಿಂದ ರೌಡಿಗಳನ್ನ ಬಿಡಿಸಿಕೊಂಡು ಬಂದಿದ್ದಾರೆ. ಕರಿಟೋಪಿ ಬಾ ಅಂತಾ ಕರೆದು ಇಡೀ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಜನರಿಗೆ ಅವಮಾನ ಮಾಡಿದ್ದಾರೆ. ಸ್ಥಳೀಯ ಶಾಸಕರಾಗಿರುವ ನನಗೆ ಮತ್ತು ಸಂಸದ ಸಿಎನ್ ಮಂಜುನಾಥ್ ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ಕೊಟ್ಟಿಲ್ಲ. ವೇದಿಕೆ ಮೇಲೆ ನಮ್ಮ ಒಂದು ಫೋಟೋ ಸಹ ಹಾಕಿಲ್ಲ. ಇಲ್ಲಿಗೆ ನಾನು ಬಂದ್ಮೇಲೆ ವೇದಿಕೆ ಮೇಲೆ ಕರೆಯುತ್ತಾರೆ ಎಂದು ಕಿಡಿಕಾರಿದರು.
35
ಒಂದು ಹೆಣ್ಣು ಕಾರಣ.
ಮಹಾಭಾರತ ಮತ್ತು ರಾಮಾಯಣ ನಡೆಯಲು ಒಂದು ಹೆಣ್ಣು ಕಾರಣ. ಈಗ ಆರ್ ಆರ್ ನಗರದಲ್ಲಿ ಕುರುಕ್ಷೇತ್ರ ಮಾಡ್ತಿರೋದು ಒಂದು ಹೆಣ್ಣು. ಒಂದು ಹೆಣ್ಣಿಗೋಸ್ಕರ ಇಷ್ಟೆಲ್ಲ ಮಾಡ್ತಿದ್ದಾರೆ. ಹೆಣ್ಣನ್ನ ಇಟ್ಟುಕೊಂಡು ಏನೇನೋ ಪ್ಲಾನ್ ಮಾಡ್ತಿದ್ದಾರೆ. ಒಂದು ಹೆಣ್ಣನ್ನು MLA ಮಾಡೋಕೆ ಹೀಗೆಲ್ಲ ಮಾಡಬೇಕಾ ಎಂದು ಮುನಿರತ್ನ ಪ್ರಶ್ನೆ ಮಾಡಿದರು.
ನನ್ನ ಸಾಯಿಸಬೇಕು, ಇಲ್ಲ ರಾಜೀನಾಮೆ ಕೊಡಿಸಬೇಕು. ನನ್ನಿಂದ ರಾಜೀನಾಮೆ ಕೊಡಿಸಿ ಆ ಹೆಣ್ಣನ್ನು ಶಾಸಕಿ ಮಾಡಿ ಸಚಿವೆಯನ್ನಾಗಿಸೋದು ಇವರ ಪ್ಲಾನ್ ಆಗಿದೆ. ನನ್ನ ಸಾಯಿಸೋಕೆ ಪ್ಲಾನ್ ಮಾಡಿದ್ದಾರೆ ಎಂದು ಗಂಭೀರವಾದ ಆರೋಪವನ್ನು ಮುನಿರತ್ನ ಮಾಡಿದರು.
ಈ ಹಲ್ಲೆಯಾಗಿದೆ ಎಂದು ಹೇಳುತ್ತಿದ್ದು ದೂರು ಕೊಡ್ತೀರಾ ಎಂಬ ಮಾಧ್ಯಮದ ಪ್ರಶ್ನೆಗೆ ಪೊಲೀಸರು ಸೀಟ್ ಸೇಲ್ ಆಗಿದೆ. ನಾನು ಕೋರ್ಟ್ ಗೆ ದೂರು ಕೊಡ್ತೀನಿ. ಫ್ಲೆಕ್ಸ್ ಹಾಕಿರೋದು, ಹಲ್ಲೆ ಮಾಡಿರೋದು ಎಲ್ಲ ಕೋರ್ಟ್ ಮುಂದೆ ಇಡ್ತೀನಿ ಎಂದು ಹೇಳಿದರು. ಮತ್ತೊಂದೆಡೆ ಬಿಜೆಪಿ ನಾಯಕರು ಈ ಘಟನೆ ಸಂಬಂಧ ಪ್ರತಿಕ್ರಿಯೆ ನೀಡುತ್ತಿದ್ದು ಡಿಕೆ ಶಿವಕುಮಾರ್ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ.