ಕರ್ನಾಟಕ ರಾಜ್ಯಪಾಲರ ಭಾಷಣ ವಿವಾದಕ್ಕೆ ಟ್ವಿಸ್ಟ್ ಕೊಟ್ಟ ಸಭಾಪತಿ ಬಸವರಾಜ ಹೊರಟ್ಟಿ

Published : Jan 23, 2026, 08:59 AM IST

ರಾಜ್ಯಪಾಲರ ಭಾಷಣ ವಿವಾದ, ಸಭಾಪತಿ ಹೊರಟ್ಟಿ ಗೂಗ್ಲಿಗೆ ಆಡಳಿತ ಪಕ್ಷ ಥಂಡಾ ಹೊಡೆದಿದೆ.ರಾಜ್ಯಪಾಲರ ಭಾಷಣದಲ್ಲಿ ಯಾವುದೇ ಅಗೌರವ ಅಗಿಲ್ಲ ಎಂದಿರುವ ಹೊರಟ್ಟಿ, ರೀಡ್‌ ಅಂಡ್‌ ರೆಕಾರ್ಡ್‌ ರೂಲ್ ಹೇಳಿದ್ದಾರೆ.

PREV
16
ಗೂಗ್ಲಿ ಹಾಕಿದ ಬಸವರಾಜ್ ಹೊರಟ್ಟಿ

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧಿವೇಷನದಲ್ಲಿನ ಚುಟುಕು ಭಾಷಣ ಸದ್ದರಾಮಯ್ಯ ಸರ್ಕಾರವನ್ನು ಕೆರಳಿಸಿದೆ. ಇತ್ತ ರಾಜ್ಯಪಾಲರ ಜೊತೆ ಸರ್ಕಾರದ ನಾಯಕರು ನಡೆದುಕೊಂಡ ರೀತಿಗೆ ಬಿಜೆಪಿ ಕೆಂಡವಾಗಿದೆ. ರಾಜ್ಯಪಾಲರಿಂದ ಅಗೌರವ ಎಂಬ ಆಕ್ರೋಶಗಲು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಸಭಾಪತಿ ಬಸವರಾಜ ಹೊರಟ್ಟಿ ಗೂಗ್ಲಿ ಹಾಕಿದ್ದಾರೆ. ಹೊರಟ್ಟಿ ಮಾತಿಗೆ ಆಡಳಿತ ಪಕ್ಷ ಥಂಡಾ ಹೊಡೆದಿದೆ.

26
ಮೊದಲ ಹಾಗೂ ಕೊನೆ ಪ್ಯಾರಾ

ರಾಜ್ಯಪಾಲರು ಜಂಟಿ ಅಧಿವೇಶನದಲ್ಲಿ ಲಿಖಿತ ಭಾಷಣದ ಮೊದಲ ಹಾಗೂ ಕೊನೆಯ ಪ್ಯಾರಾಗಳನ್ನು ಓದಿರುವುದರಿಂದ ಇಡೀ ಭಾಷಣ ವಾಚಿಸಿದಂತಾಗಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಆಗ ಸಭಾಪತಿ ಬಸವರಾಜ ಹೊರಟ್ಟಿ ಅವರು, ರಾಜ್ಯಪಾಲರು ತಮ್ಮ ಭಾಷಣದ ಮೊದಲ ಹಾಗೂ ಕೊನೆಯ ವಾಕ್ಯಗಳನ್ನು ಓದಿದ್ದಾರೆ. ಹೀಗಾಗಿ, ಅದನ್ನು ‘ರೀಡ್‌ ಅಂಡ್‌ ರೆಕಾರ್ಡ್‌’ ಎಂದು ಹೇಳಬೇಕಾಗುತ್ತದೆ ಎಂದರು.

36
ಪರಿಷತ್ತಿನಲ್ಲಿ ವಾದ ವಿವಾದ

ವಿಧಾನ ಪರಿಷತ್ತಿನಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಸಭಾನಾಯಕ ಎನ್‌.ಎಸ್‌. ಬೋಸರಾಜು, ರಾಜ್ಯಪಾಲರು ಸಂವಿಧಾನದ 176 ಮತ್ತು 163 ವಿಧಿಯ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಈ ರೀತಿ ನಡೆದುಕೊಳ್ಳುವ ಮೂಲಕ ಸದನಕ್ಕೆ ಅಗೌರವ ತೋರಿಸಿದ್ದಾರೆ, ಅವರ ನಡವಳಿಕೆ ಖಂಡನೀಯ ಎಂದರು.

46
ಬಿಜೆಪಿಗರ ಅಕ್ಷೇಪ

ಇದಕ್ಕೆ ಬಿಜೆಪಿಯ ಅನೇಕ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ರಾಜ್ಯಪಾಲರು ಸರಿಯಾಗಿ ನಡೆದುಕೊಂಡಿದ್ದಾರೆ ಎಂದು ವಾದಿಸಿದರೆ, ಆಡಳಿತಾರೂಢ ಕಾಂಗ್ರೆಸ್‌ ಸದಸ್ಯರು ರಾಜ್ಯಪಾಲರು ಸಂವಿಧಾನದ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಜೋರಾಗಿ ಹೇಳತೊಡಗಿದರು. ಇದರಿಂದ ಕೆಲ ಕಾಲ ಗದ್ದಲದ ವಾತಾವರಣ ಉಂಟಾಯಿತು.

56
ಅಪೂರ್ಣ ಭಾಷಣ

ಇದಕ್ಕೆ ಜೆಡಿಎಸ್‌ ಸದಸ್ಯ ಬೋಜೇಗೌಡ ಅವರು, ರಾಜ್ಯಪಾಲರು ಪೂರ್ಣ ಭಾಷಣ ಓದಿದ್ದಾರೆ ಎಂದು ಹೇಳುವುದು ಸರಿಯಲ್ಲ. ಅವರು ಪೂರ್ಣ ಪ್ರಮಾಣದ ಭಾಷಣ ವಾಚಿಸಿಲ್ಲ. ಆಡಳಿತ ಪಕ್ಷದ ಸದಸ್ಯರು ರಾಜ್ಯಪಾಲರು ಪೂರ್ಣ ಭಾಷಣ ಓದಿಲ್ಲ ಎಂದು ಹೇಳುತ್ತಿರುವುದರಿಂದ ಭಾಷಣ ಅಪೂರ್ಣ ಎಂದು ಭಾವಿಸಬೇಕಾಗುತ್ತದೆ ಎಂದು ವಾದಿಸಿದರು.

66
ರಾಜ್ಯಪಾಲರ ವಿರುದ್ದ ಖಂಡನೆ

ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹಮದ್‌ ಅವರು, ಮೊದಲ ಬಾರಿಗೆ ರಾಜ್ಯದಲ್ಲಿ ರಾಜ್ಯಪಾಲರು ಸರ್ಕಾರ ನೀಡಿದ ಭಾಷಣ ಓದದಿರುವದು ಖಂಡನೀಯ. ಇಂತಹ ಅಗೌರವ ಎಂದೂ ಆಗಿಲ್ಲ. ಸಂವಿಧಾನಕ್ಕೆ ರಾಜ್ಯಪಾಲರು ಅಪಚಾರ ಮಾಡಿದ್ದಾರೆ ಎಂದು ಪ್ರತಿ ವಾದಿಸಿದರು. ಕೊನೆಗೆ ಸಭಾಪತಿ ಹೊರಟ್ಟಿ ಅವರು ಈ ವಿಷಯವನ್ನು ಕಲಾಪ ಸಲಹಾ ಸಮಿತಿಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಹೇಳಿ ಸಂತಾಪ ಸೂಚನೆ ಪ್ರಸ್ತಾವನೆ ಮಂಡಿಸಿದರು.

ರಾಜ್ಯಪಾಲರ ವಿರುದ್ದ ಖಂಡನೆ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories