ಲೋಕಸಭಾ ಚುನಾವಣಾ ಪ್ರಚಾರ ಚರ್ಚಿಸಲು 29ಕ್ಕೆ ಜಂಟಿ ಸಭೆ: ಎಚ್‌.ಡಿ.ಕುಮಾರಸ್ವಾಮಿ

First Published | Mar 27, 2024, 6:43 AM IST

ಕಾಂಗ್ರೆಸ್‌ ಜತೆ ಹೋಗಿ ಪೆಟ್ಟು ತಿಂದಿದ್ದೇವೆ. ಬಿಜೆಪಿ ಜತೆ ಆ ರೀತಿಯಾಗದಂತೆ ಕ್ರಮ ವಹಿಸಲು ಜಂಟಿ ಸಭೆ ಮಾಡಲಾಗುತ್ತಿದೆ. ಈ ವೇಳೆ ಸಮನ್ವಯ ಕುರಿತು ಚರ್ಚೆ ನಡೆಸಲಾಗುವುದು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಬೆಂಗಳೂರು (ಮಾ.27): ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್‌ ಸಮನ್ವಯದೊಂದಿಗೆ ಪ್ರಚಾರ ನಡೆಸುವ ಸಂಬಂಧ ಇದೇ ತಿಂಗಳ 29ರಂದು ಉಭಯ ಪಕ್ಷಗಳ ಮುಖಂಡರ ಜಂಟಿ ಸಭೆ ನಡೆಸಲಾಗುವುದು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಮಂಗಳವಾರ ತಮ್ಮ ನಿವಾಸದಲ್ಲಿ ನಡೆದ ಕೋರ್‌ ಕಮಿಟಿ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಜೆಡಿಎಸ್‌ನಿಂದ 40 ಮಂದಿಯ ಸ್ಟಾರ್‌ ಪ್ರಚಾರ ಪಟ್ಟಿ ಪಡೆಯಲು ಮುಖ್ಯಚುನಾವಣಾಧಿಕಾರಿ ಕಚೇರಿಗೆ ಕಳುಹಿಸಲಾಗಿದೆ. 

Tap to resize

ಕಾಂಗ್ರೆಸ್‌ ಜತೆ ಹೋಗಿ ಪೆಟ್ಟು ತಿಂದಿದ್ದೇವೆ. ಬಿಜೆಪಿ ಜತೆ ಆ ರೀತಿಯಾಗದಂತೆ ಕ್ರಮ ವಹಿಸಲು ಜಂಟಿ ಸಭೆ ಮಾಡಲಾಗುತ್ತಿದೆ. ಈ ವೇಳೆ ಸಮನ್ವಯ ಕುರಿತು ಚರ್ಚೆ ನಡೆಸಲಾಗುವುದು ಎಂದರು. ಪ್ರಚಾರ ಕಾರ್ಯವು ಸುಗಮವಾಗಿ ನಡೆಯಬೇಕು. ಈ ಸಂಬಂಧ ಜೆಡಿಎಸ್‌ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೊಂದಿಗೆ ಚರ್ಚೆ ನಡೆಸಲಾಗಿದೆ. 

ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಅದೇ ರೀತಿಯಲ್ಲಿ ರಾಜ್ಯದೆಲ್ಲೆಡೆಯಾಗಬೇಕು. ಈ ಕುರಿತು ಸಹ ಸಭೆಯಲ್ಲಿ ಮಾತುಕತೆ ನಡೆಸುತ್ತೇವೆ. ಎರಡು ಪಕ್ಷದಿಂದ 100ಕ್ಕೂ ಹೆಚ್ಚು ಜನರು ಭಾಗಿಯಾಗುತ್ತಿದ್ದಾರೆ ಎಂದು ತಿಳಿಸಿದರು.

ಕುಮಾರಸ್ವಾಮಿ ಭೇಟಿಯಾದ ಕರಡಿ: ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್ ವಂಚಿತ ಸಂಗಣ್ಣ ಕರಡಿ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಸೋಮವಾರ ಭೇಟಿಯಾಗಿ, ಆರೋಗ್ಯ ವಿಚಾರಿಸಿದರು. ಇದು ರಾಜಕೀಯವಾಗಿ ಚರ್ಚೆಗೆ ಗ್ರಾಸವಾಗಿದೆ. ಟಿಕೆಟ್ ಕೈತಪ್ಪಿರುವುದರಿಂದ ಬಿಜೆಪಿಯ ವಿರುದ್ಧ ಸಿಡಿದೆದ್ದಾರೆ. 

ಬಿಜೆಪಿ ನಾಯಕರ ಜೊತೆಗೆ ಮಾತುಕತೆಗೆ ಮುಂದಾಗಿರುವ ವೇಳೆಯಲ್ಲಿಯೇ ಎಚ್‌ಡಿಕೆ ಭೇಟಿಯಾಗಿರುವುದು ನಾನಾ ಕುತೂಹಲ ಹುಟ್ಟುಹಾಕಿದೆ. ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಸಂಸದ ಕರಡಿ ಸಂಗಣ್ಣ, ಮಾಜಿ ಸಿಎಂ ಕುಮಾರಸ್ವಾಮಿ ಆರೋಗ್ಯ ವಿಚಾರಿಸಲು ಆಗಮಿಸಿದ್ದೇನೆ, ಹೊರತು ಯಾವುದೇ ರಾಜಕೀಯ ವಿಷಯದ ಬಗ್ಗೆ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Latest Videos

click me!