ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲು ಸಿಎಂ ನಿವಾಸದಲ್ಲಿ ಖಾಸಗಿ ಉಪಹಾರ ಸಭೆ ನಡೆಯಿತು. ಹೈಕಮಾಂಡ್ ಸೂಚನೆಯ ಮೇರೆಗೆ ನಡೆದ ಈ ಸಭೆಗೂ ಮುನ್ನ, ಡಿಕೆಶಿ ಬಣದ ಶಾಸಕರು ಡಿನ್ನರ್ ಮೀಟಿಂಗ್ ನಡೆಸಿರುವುದು ಕುತೂಹಲ ಮೂಡಿಸಿದೆ.
ಬ್ರೇಕ್‌ಫಾಸ್ಟ್ ಆಹ್ವಾನದ ಹಿನ್ನೆಲೆ ಸಿಎಂ ಸಿದ್ದರಾಮಯ್ಯನವರ ನಿವಾಸಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಆಗಮಿಸಿದ್ದಾರೆ. ಡಿಕೆ ಶಿವಕುಮಾರ್ ಬರುತ್ತಿದ್ದಂತೆ ಮುಖ್ಯಮಂತ್ರಿಗಳೇ ಸ್ವಾಗತಿಸಿದ್ದಾರೆ. ನಂತರ ಇಬ್ಬರು ಜೊತೆಯಾಗಿ ಉಪಹಾರ ಸೇವನೆ ಮಾಡಿದ್ದಾರೆ.
25
ಖಾಸಗಿಯಾಗಿ ಮಾತುಕತೆ
ಸದಾಶಿವನಗರದ ತಮ್ಮ ನಿವಾಸದಿಂದ ಹೊರಡುವ ವೇಳೆ, ಸಿಎಂ ಮನೆಗೆ ಹೋಗುತ್ತಿದ್ದೇನೆ ಎಂದು ಹೇಳಿ ಡಿಕೆ ಶಿವಕುಮಾರ್ ಹೇಳಿದ್ದರು. ಡಿಕೆ ಶಿವಕುಮಾರ್ ಆಗಮನದ ಹಿನ್ನೆಲೆ ಮುಖ್ಯಮಂತ್ರಿಗಳು ತಮ್ಮ ಇಂದಿನ ಕಾರ್ಯಕ್ರಮಗಳು ಭಾಗಶಃ ರದ್ದುಗೊಳಿಸಿದ್ದಾರೆ. ನಿವಾಸದಲ್ಲಿ ಅಗತ್ಯಕ್ಕಿಂತ ಹೆಚ್ಚಿರುವ ಸಿಬ್ಬಂದಿಯನ್ನು ಹೊರಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.
35
ಸಿಎಂ ನಿವಾಸಕ್ಕಿಲ್ಲ ಪ್ರವೇಶ
ಬ್ರೇಕ್‌ಫಾಸ್ಟ್ ಮೀಟಿಂಗ್ ಹಿನ್ನೆಲೆ ಮತ್ಯಾರಿಗೂ ಭೇಟಿಗೆ ಅನುಮತಿ ನೀಡದಂತೆ ಸಿಎಂ ತಮ್ಮ ಸಹಾಯಕರಿಗೆ ಸೂಚಿಸಿದ್ದು, ಇಂದು ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳಲು ಯಾರಿಗೂ ಅನುಮತಿ ನೀಡಲಾಗಿಲ್ಲ. ಸಿಎಂ ಮತ್ತು ಡಿಸಿಎಂ ಜೊತೆಯಾಗಿ ಉಪಹಾರ ಸೇವನೆ ಮಾಡುವ ಫೋಟೋಗಳು ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಲಭ್ಯವಾಗಿವೆ.
ಬ್ರೇಕ್‌ಫಾಸ್ಟ್ ಮೀಟಿಂಗ್‌ನಲ್ಲಿ ಗೊಂದಲ ಬಗೆಹರಿದ್ರೆ ಒಳ್ಳೆಯದು. ಗೊಂದಲ ಇರಬಾರದು ಅಂತ ಎಲ್ಲರ ಇಚ್ಛೆ ಇದೆ. ಹೈಕಮಾಂಡ್ ಸಹ ಗೊಂದಲ ಇರಬಾರದು ಅಂತ ಹೇಳಿರ್ತಾರೆ. ಇಬ್ಬರು ನಾಯಕರು ಗೊಂದಲ ಇದ್ರೆ ಬಗೆಹರಿಸಿಕೊಳ್ಳಲು ತಿಳಿಸಿದ್ದಾರೆ. ಗೊಂದಲಗಳಿಗೆ ತೆರೆ ಬಿದ್ರೆ ಒಳ್ಳೆಯದು ಅಲ್ಲವಾ? ದೆಹಲಿಗೆ ಹೋಗುವ ಅವಶ್ಯಕತೆ ಬಂದ್ರೇ ಹೋಗ್ತೀವಿ. ಸದ್ಯಕ್ಕೆ ದೆಹಲಿಗೆ ಹೋಗಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
ಬ್ರೇಕ್‌ಫಾಸ್ಟ್ ಮೀಟಿಂಗ್ ನಿಗಧಿಯಾಗುತ್ತಿದ್ದಂತೆ ಡಿಸಿಎಂ ಡಿಕೆ ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡಿರುವ ಸುಮಾರು 10ಕ್ಕೂ ಅಧಿಕ ಶಾಸಕರು ಡಿನ್ನರ್ ಮೀಟಿಂಗ್ ಮಾಡಿದ್ದಾರೆ. ಏರ್‌ಪೋರ್ಟ್ ರಸ್ತೆಯಲ್ಲಿವ ರೆಸಾರ್ಟ್‌ನಲ್ಲಿ ಮಾಗಡಿ ಶಾಸಕ ಬಾಲಕೃಷ್ಣ, ಕುಣಿಗಲ್ ರಂಗನಾಥ್, ನಾರಾ ಭರತ್ ರೆಡ್ಡಿ, ಮಹೇಂದ್ರ ತಮ್ಮಣ್ಣನವರ್, ಎಚ್‌ಡಿ ತಮ್ಮಯ್ಯ, ಅಶೋಕ್ ಮನಗೊಳಿ ಸೇರಿದಂತೆ ಸುಮಾರು 10ಕ್ಕೂ ಶಾಸಕರು ಸೇರಿದ್ದರು ಎಂದು ತಿಳಿದು ಬಂದಿದೆ.