ಬ್ರೇಕ್ ಫಾಸ್ಟ್ ಮೀಟಿಂಗ್ ಬೆನ್ನಲ್ಲೇ ಕಾಂಗ್ರೆಸ್ ಸರ್ಕಾರದದಲ್ಲಿ ಮತ್ತೊಂದು ಬೆಳವಣಿಗೆ

Published : Nov 29, 2025, 09:36 AM IST

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಬ್ರೇಕ್‌ಫಾಸ್ಟ್ ಮೀಟಿಂಗ್ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಇದೇ ವೇಳೆ, ಸುಮಾರು 10 ಶಾಸಕರು ರೆಸಾರ್ಟ್‌ನಲ್ಲಿ ಪ್ರತ್ಯೇಕ ಸಭೆ ಸೇರಿದ್ದು, ಈ ಬೆಳವಣಿಗೆಗಳು ಮುಂದಿನ ರಾಜಕೀಯ ನಡೆಗಳ ಬಗ್ಗೆ ಚರ್ಚೆಗೆ ಕಾರಣವಾಗಿವೆ.

PREV
15
ಬ್ರೇಕ್‌ಫಾಸ್ಟ್ ಮೀಟಿಂಗ್‌

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರ ಬ್ರೇಕ್‌ಫಾಸ್ಟ್ ಮೀಟಿಂಗ್‌ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಎಲ್ಲಾ ಬೆಳವಣಿಗೆ ನಡುವೆಯೂ ಸುಮಾರು 10 ಶಾಸಕರು ಒಂದೆಡೆ ಸೇರಿದ್ದಾರೆ. ಹಾಗಾಗಿ ಶಾಸಕರ ನಡೆ ಏನಾಗ್ತಿದೆ ಎಂಬುದರ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.

25
10ಕ್ಕೂ ಅಧಿಕ ಶಾಸಕರು

ಡಿಸಿಎಂ ಡಿಕೆ ಶಿವಕುಮಾರ್ ಬಣದದಲ್ಲಿ ಗುರುತಿಸಿಕೊಂಡಿರುವ ಸುಮಾರು 10 ಶಾಸಕರು, ಏರ್‌ಪೋರ್ಟ್ ರಸ್ತೆಯಲ್ಲಿರುವ ರೆಸಾರ್ಟ್‌ನಲ್ಲಿ ಸೇರಿ ಸುದೀರ್ಘವಾಗಿ ರಾಜ್ಯ ರಾಜಕೀಯದಲ್ಲಿ ಆಗುತ್ತಿರುವ ಬೆಳವಣಿಗೆ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ, ಡಿನ್ನರ್ ಹೆಸರಿನಲ್ಲಿ 10ಕ್ಕೂ ಅಧಿಕ ಶಾಸಕರು ಒಂದೆಡೆ ಸೇರಿರುವ ಕುರಿತ ಮಾಹಿತಿ ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಲಭ್ಯವಾಗಿದೆ.

35
ಸಭೆಯಲ್ಲಿ ಯಾರೆಲ್ಲಾ ಭಾಗಿ?

ಮಾಗಡಿ ಶಾಸಕ ಬಾಲಕೃಷ್ಣ, ಕುಣಿಗಲ್ ರಂಗನಾಥ್, ನಾರಾ ಭರತ್ ರೆಡ್ಡಿ, ಮಹೇಂದ್ರ ತಮ್ಮಣ್ಣನವರ್, ಎಚ್‌ಡಿ ತಮ್ಮಯ್ಯ, ಅಶೋಕ್ ಮನಗೊಳಿ ಸೇರಿದಂತೆ ಸುಮಾರು ಹತ್ತು ಮಂದಿ ಶಾಸಕರು ಡಿನ್ನರ್ ಮೀಟಿಂಗ್‌ನಲ್ಲಿ ಭಾಗಿಯಾಗಲಿದ್ದಾರಂತೆ. ಡಿಕೆಶಿ-ಸಿಎಂ ಬ್ರೇಕ್‌ಫಾಸ್ಟ್ ಖಚಿತವಾಗ್ತಿದ್ದಂತೆ ರಾತ್ರಿಯೇ ಡಿನ್ನರ್ ಮೀಟಿಂಗ್ ನಡೆಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಸಿಎಂ ಕುರ್ಚಿ ಕುಸ್ತಿಯಲ್ಲೇ ರಾಜ್ಯ ಸರ್ಕಾರ ಪತನ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ

45
ಬೆಂಬಲಿಗರಿಗೆ ಡಿಕೆಶಿ ಸೂಚನೆ

ಸಿಎಂ ಮನೆಯಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ಹಿನ್ನೆಲೆ ಯಾರು ಮನೆ ಬಳಿ ಬರದಂತೆ ಬೆಂಬಲಿಗರಿಗೆ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ. ನಾನು ಮನೆಯಲ್ಲಿರಲ್ಲ ಯಾರು ಬಂದು ಕಾಯೋದು ಬೇಡ ಎಂದು ಸಂದೇಶ ರವಾನಿಸಿದ್ದಾರೆ. ಇತ್ತ ಬೆಳಗ್ಗೆಯೇ ಕಾಂಗ್ರೆಸ್ ಯುವ ನಾಯಕ ನಲಪಾಡ್ ಅವರು ಡಿಕೆ ಶಿವಕುಮಾರ್ ಭೇಟಿಗೆ ಆಗಮಿಸಿದ್ದರು. ಆದ್ರೆ ಭೇಟಿ ಸಾಧ್ಯವಾಗದೇ ಹಿಂದಿರುಗಿದ್ದಾರೆ. ಬ್ರೇಕ್ ಫಾಸ್ಟ್ ಮೀಟಿಂಗ್ ಹಿನ್ನೆಲೆ ಉಭಯ ನಾಯಕರು ಇಂದು ಯಾವುದೇ ಕಾರ್ಯಕ್ರಮಗಳನ್ನ ಹಾಕಿಕೊಂಡಿಲ್ಲ.

ಇದನ್ನೂ ಓದಿ: ನಾಳಿನ ದೆಹಲಿ ಸಭೆ ಬಗ್ಗೆ ಭಾರಿ ಕುತೂಹಲ - ಬ್ರೇಕ್‌ಫಾಸ್ಟ್‌ ಸಭೆ ಫಲಿತಾಂಶವೇ ನಿರ್ಣಾಯಕ

55
ದೆಹಲಿಗೆ ಹೋಗ್ತಾರಾ?

ದೆಹಲಿಯಲ್ಲಿ ನಡೆಯಲಿದೆಯೇ ಅಥವಾ ಇಲ್ಲವೇ ಎಂಬುದು ಬ್ರೇಕ್ ಫಾಸ್ಟ್ ಮೀಟಿಂಗ್‌ ಫಲಿತಾಂಶವನ್ನು ಆಧರಿಸಿದೆ. ಒಂದು ವೇಳೆ ಹೈಕಮಾಂಡ್ ಕರೆದ್ರೆ ದೆಹಲಿಗೆ ಹೋಗುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹೈಕಮಾಂಡ್ ಸೂಚನೆ ಮೇರೆಗೆ ಇಬ್ಬರು ಒಂದೆಡೆ ಸೇರುತ್ತಿದ್ದಾರೆ.

ಇದನ್ನೂ ಓದಿ: 

Read more Photos on
click me!

Recommended Stories