ಶೋಯೆಬ್‌ ಮಲಿಕ್‌ಗೂ ಮೊದಲು ಸಾನಿಯಾ ಮಿರ್ಜಾ ಜತೆ ಥಳಕು ಹಾಕಿಕೊಂಡಿದ್ದ ಅಚ್ಚರಿಯ ಹೆಸರುಗಳಿವು..!

First Published | Nov 14, 2022, 5:25 PM IST

ಭಾರತೀಯ ಟೆನಿಸ್ ಆಟಗಾರ್ತಿ Sania Mirza ಈ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್‌ರನ್ನು (Shoaib Malik) ಪ್ರೀತಿಸಿ, ಎರಡು ದೇಶಗಳ ನಡುವಿನ ಬಿಗುವಿನ ವಾತಾವರಣದ ನಡುವೆಯೂ ಮದುವೆಯಾದರು ಮತ್ತು ಈಗ ಇಬ್ಬರೂ ವಿಚ್ಛೇದನ ಪಡೆದಿದ್ದಾರೆ.  ಇತ್ತೀಚಿನ ದಿನಗಳಲ್ಲಿ  ಸಾನಿಯಾ ಮಿರ್ಜಾ ಮತ್ತು  ಶೋಯೆಬ್ ಮಲಿಕ್‌  ಅವರ ವಿಚ್ಛೇದನದ ಸುದ್ದಿ ಹೆಚ್ಚು ವೈರಲ್ ಆಗುತ್ತಿದೆ. ಪಾಕಿಸ್ತಾನಿ ಜಿಯೋ ನ್ಯೂಸ್ ಕೂಡ ಕಾನೂನು ವಿಷಯಗಳನ್ನು ಪರಿಹರಿಸಿದ ನಂತರ, ಇಬ್ಬರೂ ಅಧಿಕೃತವಾಗಿ ವಿಚ್ಛೇದನವನ್ನು ಘೋಷಿಸಲಿದ್ದಾರೆ ಎಂದು ಹೇಳಿಕೊಂಡಿದೆ.  ಶೋಯೆಬ್ ಮಲಿಕ್ ಅವರನ್ನು ಮದುವೆಯಾಗುವ ಮೊದಲು ಸಾನಿಯಾ ಮಿರ್ಜಾ ಅವರ ವೈಯಕ್ತಿಕ ಜೀವನ ಹೇಗಿತ್ತು ಮತ್ತು ಅವರ ಹೆಸರು ಯಾರಾರ ಜೊತೆ ಲಿಂಕ್‌ ಆಗಿತ್ತು ಗೊತ್ತಾ?

ಸೊಹ್ರಾಬ್ ಮಿರ್ಜಾ:

ಶೋಯೆಬ್ ಮಲಿಕ್ ಅವರನ್ನು ಮದುವೆಯಾಗುವ ಮೊದಲು, ಸಾನಿಯಾ ಮಿರ್ಜಾ ತನ್ನ ಬಾಲ್ಯದ ಸ್ನೇಹಿತ ಸೊಹ್ರಾಬ್ ಮಿರ್ಜಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ನಿಶ್ಚಿತಾರ್ಥದ ಕೆಲವು ದಿನಗಳ ನಂತರ ಸಂಬಂಧವು ಮುರಿದುಹೋಯಿತು ಮತ್ತು ಅವರು ಬೇರೆಯಾಗಲು ನಿರ್ಧರಿಸಿದರು. ಸಾನಿಯಾ ಮತ್ತು ಸೊಹ್ರಾಬ್ ಕುಟುಂಬಗಳು ಮೂರು ತಲೆಮಾರುಗಳಿಂದ ಪರಸ್ಪರ ಸ್ನೇಹಿತರಾಗಿದ್ದರು ಎಂದು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಇಬ್ಬರ ಕುಟುಂಬಗಳು ಈ ಸಂಬಂಧದಿಂದ ತುಂಬಾ ಸಂತೋಷವಾಗಿದ್ದವು. ಆದರೆ ವರದಿಗಳ ಪ್ರಕಾರ, ನಿಶ್ಚಿತಾರ್ಥದ ನಂತರ, ಇಬ್ಬರ ನಡುವೆ ಬಿರುಕು ಪ್ರಾರಂಭವಾಯಿತು.

ಶಾಹಿದ್ ಕಪೂರ್:

ಒಂದು ಕಾಲದಲ್ಲಿ ಸಾನಿಯಾ ಮಿರ್ಜಾ ಮತ್ತು ಬಾಲಿವುಡ್ ನಟ ಶಾಹಿದ್ ಕಪೂರ್ ಅವರ ಅಫೇರ್ ಬಗ್ಗೆ ಚರ್ಚೆಯೂ ಜೋರಾಗಿಯೇ ಇತ್ತು. ಕರಣ್ ಜೋಹರ್ ಅವರ ಟಾಕ್ ಶೋ ಕಾಫಿ ವಿತ್ ಕರಣ್ ನಲ್ಲಿ ಸಾನಿಯಾ ಮತ್ತು ಶಾಹಿದ್ ಕಾಣಿಸಿಕೊಂಡ ನಂತರ ಅವರು ಮತ್ತು ಶಾಹಿದ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿವೆ. ಆದರೆ ಇಬ್ಬರೂ ತಮ್ಮ ಸಂಬಂಧದ ಊಹಾಪೋಹಗಳನ್ನು ಎಂದಿಗೂ ಖಚಿತಪಡಿಸಲಿಲ್ಲ.

Tap to resize

Image Credit: Getty Images

ಮಹೇಶ್ ಭೂಪತಿ:

ಸಾನಿಯಾ ಮಿರ್ಜಾ ಅವರ ಹೆಸರು ಟೆನಿಸ್ ಆಟಗಾರ ಮಹೇಶ್ ಭೂಪತಿಯೊಂದಿಗೆ ಸಹ ಲಿಂಕ್‌ ಆಗಿತ್ತು. ಮಾಧ್ಯಮ ವರದಿಗಳ ಪ್ರಕಾರ, ಮಹೇಶ್ ಭೂಪತಿ ತನ್ನ ಹೆಂಡತಿಯೊಂದಿಗೆ ಉತ್ತಮ  ಸಂಬಂಧವನ್ನು ಹೊಂದಿರಲಿಲ್ಲ. ಹೀಗಿರುವಾಗ ಸಾನಿಯಾ ಹತ್ತಿರ ಬಂದರೂ ಈ ಸಂಬಂಧ ಹೆಚ್ಚು ಕಾಲ ಉಳಿಯದೇ ಇಬ್ಬರೂ ಬೇರೆಯಾದರು.

ನವದೀಪ್ ಪಲ್ಲಪೋಲು:

ಮಾಧ್ಯಮ ವರದಿಗಳ ಪ್ರಕಾರ, ದಕ್ಷಿಣ ಭಾರತದ ನಟ ನವದೀಪ್ ಪಲ್ಲಪೋಲು ಮತ್ತು ಸಾನಿಯಾ ಅವರ ನಡುವಿನ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಆದಾಗ್ಯೂ, ಇಬ್ಬರೂ ಸಂಬಂಧದ ವಂದತಿಗಳನ್ನು ಅಧಿಕೃತವಾಗಿ ಬೆಳಕಿಗೆ ಬಂದಿರಲಿಲ್ಲ. ನಾವಿಬ್ಬರು ಫ್ರೆಂಡ್ಸ್ ಆಗಿದ್ದೇವೆ ಮತ್ತು ಒಟ್ಟಿಗೆ ಸುತ್ತಾಡುತ್ತೇವೆ ಮತ್ತು ಜಿಮ್‌ಗೆ ಹೋಗುತ್ತೇವೆ ಎಂದು ನವದೀಪ್ ಸಂದರ್ಶನವೊಂದರಲ್ಲಿ ಹೇಳಿದ್ದರು.

ಯುವರಾಜ್ ಸಿಂಗ್:

ಸಾನಿಯಾ ಮಿರ್ಜಾ ಮತ್ತು ಭಾರತೀಯ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ಸಂಬಂಧದ ಸುದ್ದಿಯೂ ಜೋರಾಗಿಯೇ ಇತ್ತು. ಇಬ್ಬರೂ ಅನೇಕ ಬಾರಿ ಒಟ್ಟಿಗೆ ಪಾರ್ಟಿ ಮಾಡುತ್ತಿರುವುದು ಕಂಡುಬಂದಿದೆ. ಆದರೆ ನಾವು ಕೇವಲ ಒಳ್ಳೆಯ ಸ್ನೇಹಿತರು ಎಂದು ಅವರು ಹೇಳಿದಾಗ ಅದು ಕೊನೆಗೊಂಡಿತು. ಯುವರಾಜ್ ಸಿಂಗ್ ಮತ್ತು ಸಾನಿಯಾ ಮಿರ್ಜಾ ಇಂದಿಗೂ ಉತ್ತಮ ಸ್ನೇಹಿತರು. ಇಬ್ಬರೂ ಒಬ್ಬರ ಕಾಲನ್ನು ಒಬ್ಬರು ಎಳೆದುಕೊಳ್ಳುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬರುತ್ತಿದೆ

ಶೋಯೆಬ್ ಮಲಿಕ್‌:

ಈ ಎಲ್ಲಾ ಲಿಂಕಪ್‌ ರೂಮರ್‌ಗಳ ನಂತರ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಏಪ್ರಿಲ್ 12, 2010 ರಂದು ಹೈದರಾಬಾದ್‌ನಲ್ಲಿ ವಿವಾಹವಾದರು. ಇದಾದ ಬಳಿಕ ಇಬ್ಬರ ವಲೀಮಾ ಸಮಾರಂಭ ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ನಡೆಯಿತು ಮತ್ತು ಈ ಜೋಡಿ 2018 ರಲ್ಲಿ ಮಗ ಇಝಾನ್ ಮಿರ್ಜಾ ಮಲಿಕ್‌ನಿಗೆ ಪೋಷಕರಾದರು.

Latest Videos

click me!