TOP 10 in Prayagraj: ಪ್ರಯಾಗ್‌ರಾಜ್‌ನ ಈ 10 ಪ್ರಸಿದ್ಧ ಸ್ಥಳಗಳನ್ನು ಮಿಸ್ ಮಾಡದೇ ನೋಡಿ..!

ಪ್ರಯಾಗ್‌ರಾಜ್‌ನ ಪ್ರಮುಖ ಸ್ಥಳಗಳು: ಪ್ರಯಾಗ್‌ರಾಜ್‌ನಲ್ಲಿ ತ್ರಿವೇಣಿ ಸಂಗಮ, ಚಂದ್ರಶೇಖರ್ ಆಜಾದ್ ಪಾರ್ಕ್ ಮತ್ತು ಆನಂದ್ ಭವನದಂತಹ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ. ಇಲ್ಲಿ ಇತಿಹಾಸ, ಆಧ್ಯಾತ್ಮಿಕತೆ ಮತ್ತು ನೈಸರ್ಗಿಕ ಸೌಂದರ್ಯದ ಸಂಗಮವಿದೆ. ಪ್ರಯಾಗ್‌ರಾಜ್‌ನ 10 ಸುಂದರ ಸ್ಥಳಗಳ ಬಗ್ಗೆ ತಿಳಿಯೋಣ..

Prayagraj Top 10 Must Visit Tourist Attractions to see
ತ್ರಿವೇಣಿ ಸಂಗಮ

ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಪವಿತ್ರ ಸಂಗಮವನ್ನು ತ್ರಿವೇಣಿ ಸಂಗಮ ಎನ್ನುತ್ತಾರೆ. ಈ ಸ್ಥಳವು ತನ್ನ ಆಧ್ಯಾತ್ಮಿಕ ಮಹತ್ವಕ್ಕೆ ಹೆಸರುವಾಸಿಯಾಗಿದೆ.

Prayagraj Top 10 Must Visit Tourist Attractions to see
ಚಂದ್ರಶೇಖರ್ ಆಜಾದ್ ಪಾರ್ಕ್

ಚಂದ್ರಶೇಖರ್ ಆಜಾದ್ ಪಾರ್ಕ್ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್‌ಗೆ ಸಮರ್ಪಿತವಾದ ದೊಡ್ಡ ಸಾರ್ವಜನಿಕ ಉದ್ಯಾನವನವಾಗಿದೆ.


ಬಡೆ ಹನುಮಾನ್ ಮಂದಿರ

ಬಡೆ ಹನುಮಾನ್ ಮಂದಿರವು ಪ್ರಯಾಗ್‌ರಾಜ್‌ನಲ್ಲಿದೆ. ಇದು ಹನುಮಂತನ ಅತಿದೊಡ್ಡ ವಿಗ್ರಹಗಳಲ್ಲಿ ಒಂದಾಗಿದೆ. ಈ ದೇವಾಲಯವು ತನ್ನ ಶಾಂತ ವಾತಾವರಣದಿಂದ ಭಕ್ತರನ್ನು ಆಕರ್ಷಿಸುತ್ತದೆ.

ಆನಂದ ಭವನ

ಆನಂದ ಭವನವು ನೆಹರು ಕುಟುಂಬದ ಪೂರ್ವಜರ ಮನೆಯಾಗಿದೆ. ಇಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದ ಕಲಾಕೃತಿಗಳಿವೆ.

ಇಲಾಹಾಬಾದ್ ಫೋರ್ಟ್

ಇಲಾಹಾಬಾದ್ ಫೋರ್ಟ್ ಅನ್ನು ಅಕ್ಬರ್ ನಿರ್ಮಿಸಿದನು. ಈ ಐತಿಹಾಸಿಕ ಕೋಟೆಯು ಯಮುನಾ ನದಿಯ ದಡದಲ್ಲಿದೆ. ಇದು ಮೊಘಲ್ ವಾಸ್ತುಶಿಲ್ಪದ ಬಗ್ಗೆ ಮಾಹಿತಿಯನ್ನು ನೀಡುತ್ತದೆ.

ಖುಸ್ರೋ ಬಾಗ್

ಖುಸ್ರೋ ಮಿರ್ಜಾ ಮತ್ತು ಅವರ ಕುಟುಂಬದ ಸಮಾಧಿಗಳ ಸುತ್ತಲೂ ಒಂದು ಸುಂದರವಾದ ಮೊಘಲ್ ಉದ್ಯಾನವಿದೆ. ಅಲ್ಲಿ ಮತಧರ್ಮಗಳ ಯಾವುದೇ ಬೇಧವಿಲ್ಲದಂತೆ ನೋಡಲು ಪ್ರವಾಸಿಗರು ಬರುತ್ತಾರೆ.  

ಆಲ್ ಸೆಂಟ್ಸ್ ಕ್ಯಾಥೆಡ್ರಲ್

ಬ್ರಿಟಿಷ್ ಆಳ್ವಿಕೆಯಲ್ಲಿ ನಿರ್ಮಿಸಲಾದ ಗಾಥಿಕ್ ವಾಸ್ತುಶಿಲ್ಪದ ಉದಾಹರಣೆ. ಈ ಕ್ಯಾಥೆಡ್ರಲ್‌ನ ಬಣ್ಣದ ಗಾಜಿನ ಕಿಟಕಿಗಳು ಸುಂದರವಾಗಿವೆ.

ಜವಾಹರ್ ಪ್ಲಾನೆಟೇರಿಯಂ

ಜವಾಹರ್ ಪ್ಲಾನೆಟೇರಿಯಂ ಅನ್ನು 1979 ರಲ್ಲಿ ಆನಂದ ಭವನದಲ್ಲಿ ಸ್ಥಾಪಿಸಲಾಯಿತು. ಇದು ಶೈಕ್ಷಣಿಕ ಪ್ರದರ್ಶನಗಳನ್ನು ನೀಡುವ ಆಧುನಿಕ ಪ್ಲಾನೆಟೇರಿಯಂ ಆಗಿದೆ.

ಮಿಂಟೋ ಪಾರ್ಕ್

ಮಿಂಟೋ ಪಾರ್ಕ್ ಒಂದು ಐತಿಹಾಸಿಕ ತಾಣವಾಗಿದೆ. ಪಾರ್ಕ್‌ನ ಉದ್ಯಾನವು ಶಾಂತ ವಾತಾವರಣವನ್ನು ಸೃಷ್ಟಿಸುತ್ತದೆ. ಇಲ್ಲಿ ಸದಾ ಜನಜಂಗುಳಿ ಇದ್ದೇ ಇರುತ್ತದೆ. 

ಸರಸ್ವತಿ ಘಾಟ್

ಸರಸ್ವತಿ ಘಾಟ್ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿದೆ. ಇದು ಚಿಂತನೆಗೆ ಸೂಕ್ತವಾದ ಸ್ಥಳವೆಂದು ಪರಿಗಣಿಸಲಾಗಿದೆ. ಏಕಾಂತ ಹಾಗೂ ಆಧ್ಯಾತ್ಮವನ್ನು ಬಯಸುವವರು ಇಲ್ಲಿಗೆ ಪದೇಪದೇ ಭೇಟಿ ಕೊಡುತ್ತಾರೆ. 

Latest Videos

vuukle one pixel image
click me!