ಕರ್ನಾಟಕದ ಚುನಾಯಿತ ಪ್ರತಿನಿಧಿಗಳಿಗೆ ಶೇ. 100ರಷ್ಟು ವೇತನ ಹೆಚ್ಚಳವಾಗಿದೆ.ಈ ವಿಧೇಯಕಕ್ಕೆ ಶುಕ್ರವಾರ ಅನುಮತಿಯೂ ಸಿಕ್ಕಿದೆ. ವೇತನ ದ್ವಿಗುಣಗೊಳಿಸಿದ್ದನ್ನು ಸಮರ್ಥನೆ ಮಾಡಿಕೊಂಡಿರುವ ಗೃಹ ಸಚಿವ ಜಿ ಪರಮೇಶ್ವರ ಅವರು ಹೆಚ್ಚುತ್ತಿರುವ ವೆಚ್ಚಗಳ ಸಮಸ್ಯೆ ಶಾಸಕರಿಗೂ ಬಾಧಿಸುತ್ತಿದೆ ಎಂದಿದ್ದಾರೆ.
ಹೊಸ ಪ್ರಸ್ತಾವನೆಯಡಿಯಲ್ಲಿ, ಮುಖ್ಯಮಂತ್ರಿಗಳ ಮಾಸಿಕ ವೇತನವು ಹಿಂದಿನ 75,000 ರೂ.ಗಳಿಂದ 1.5 ಲಕ್ಷ ರೂ.ಗಳಿಗೆ ಏರಿಕೆಯಾಗಲಿದ್ದು, ಶಾಸಕರ ವೇತನವು 40,000 ರೂ.ಗಳಿಂದ 80,000 ರೂ.ಗಳಿಗೆ ದ್ವಿಗುಣಗೊಳ್ಳಲಿದೆ. ಈ ವೇತನ ಹೆಚ್ಚಳವು ಹೆಚ್ಚುವರಿ ಭತ್ಯೆಗಳು ಮತ್ತು ಸವಲತ್ತುಗಳನ್ನು ಹೊರತುಪಡಿಸಿ ಸಿಗುವುದಾಗಿದೆ.
ಯಾವ ರಾಜ್ಯಗಳು ಮುಖ್ಯಮಂತ್ರಿ ಮತ್ತು ಶಾಸಕರಿಗೆ ಅತಿ ಹೆಚ್ಚು ಸಂಬಳ ನೀಡುತ್ತಿದೆ ಅನ್ನೋದನ್ನು ನೋಡೋದಾದರೆ,ವೇತನ ಹೆಚ್ಚಳದ ಹೊರತಾಗಿಯೂ, ಕರ್ನಾಟಕದ ಚುನಾಯಿತ ಪ್ರತಿನಿಧಿಗಳು ಇತರ ರಾಜ್ಯಗಳಲ್ಲಿನ ಪ್ರತಿನಿಧಿಗಳಿಗೆ ಹೋಲಿಸಿದರೆ ಕಡಿಮೆ ವೇತನ ಪಡೆಯುತ್ತಿದ್ದಾರೆ.
ತೆಲಂಗಾಣ ರಾಜ್ಯದ ಚುನಾಯಿತ ಪ್ರತಿನಿಧಿಗಳು ಇಡೀ ದೇಶದಲ್ಲಿಯೇ ಹೆಚ್ಚಿನ ವೇತನ ಪಡೆಯುತ್ತಾರ. ಇಲ್ಲಿನ ಮುಖ್ಯಮಂತ್ರಿ ತಿಂಗಳಿಗೆ 4.10 ಲಕ್ಷ ರೂಪಾಯಿ ವೇತನ ಪಡೆಯಲಿದ್ದರೆ, ಸಚಿವರು 3ರಿಂದ 3.5 ಲಕ್ಷ ವೇತನ ಪಡೆಯುತ್ತಾರೆ. ಶಾಸಕರು 2.5 ಲಕ್ಷ ವೇತನ ಪಡೆಯುತ್ತಾರೆ. ಈ ಸಂಭಾವನೆಯು ಪ್ರಯಾಣ, ವಸತಿ ಮತ್ತು ಭದ್ರತೆಯ ಭತ್ಯೆಗಳನ್ನು ಒಳಗೊಂಡಿದೆ.
2ನೇ ಸ್ಥಾನದಲ್ಲಿ ದೆಹಲಿ ರಾಜ್ಯವಿದೆ. ಇಲ್ಲಿನ ಮುಖ್ಯಮಂತ್ರಿ ತಿಂಗಳಿಗೆ 3.90 ಲಕ್ಷ ವೇತನ ಪಡೆಯಲಿದ್ದರೆ, ಸಚಿವರು 3 ಲಕ್ಷ ಹಾಗೂ ಶಾಸಕರು 90 ಸಾವಿರ ವೇತನ ಪಡೆಯುತ್ತಾರೆ.
ದೇಶದ ಅತಿದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶದ ಮುಖ್ಯಮಂತ್ರ 3.65 ಲಕ್ಷ ಮಾಸಿಕ ವೇತನ ಪಡೆಯಲಿದ್ದು, ಸಚಿವರು 2 ರಿಂದ 2.5 ಲಕ್ಷ ವೇತನ ಪಡೆಯತ್ತಾರೆ. ಶಾಸಕರು 1.87 ಲಕ್ಷ ರೂಪಾಯಿ ವೇತನ ಪಡೆಯುತ್ತಾರೆ.
ದೇಶದ ಅತ್ಯಂತ ಶ್ರೀಮಂತ ರಾಜ್ಯವಾಗಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಪ್ರತಿ ತಿಂಗಳು 3.40 ಲಕ್ಷ ವೇತನ ಪಡೆಯಲಿದ್ದರೆ, ಸಚಿವರು 2.5 ರಿಂದ 3 ಲಕ್ಷ ವೇತನ ಪಡೆಯುತ್ತಾರೆ. ಶಾಸಕರು 1.60 ಲಕ್ಷ ವೇತನ ಪಡೆಯುತ್ತಿದ್ದಾರೆ.