ನಮ್ಮ ದೇಶದಲ್ಲಿ ಬೇಸಿಗೆ ಕಾಲ, ನೈಋತ್ಯ ಮತ್ತು ಈಶಾನ್ಯ ಮುಂಗಾರು ಮಳೆಗಾಲ, ಚಳಿಗಾಲ ಅಂತ ನಾಲ್ಕು ರೀತಿಯ ಕಾಲಗಳಿವೆ. ನೈಋತ್ಯ ಮುಂಗಾರು ಮಳೆ ಜೂನ್‌ನಿಂದ ಅಕ್ಟೋಬರ್‌ವರೆಗೆ ಇರುತ್ತೆ. ಆಮೇಲೆ, ಈಶಾನ್ಯ ಮುಂಗಾರು ಮಳೆ ಅಕ್ಟೋಬರ್ ಕೊನೆಯ ವಾರದಿಂದ ಜನವರಿ 2ನೇ ವಾರದವರೆಗೆ ಇರುತ್ತೆ. ಆಮೇಲೆ ಫೆಬ್ರವರಿವರೆಗೂ ಚಳಿಗಾಲ ಇರುತ್ತೆ. ಆಮೇಲೆ ಮಾರ್ಚ್‌ನಿಂದ ಜೂನ್ ಮೊದಲ ವಾರದವರೆಗೆ ಬೇಸಿಗೆ ಇರುತ್ತೆ.