ಕನ್ನಡ ನಟ ಗಣೇಶ್ ರಾವ್‌ರನ್ನು ಹಾಡಿ ಹೊಗಳಿದ ಕೆಚ್ಚೆದೆಯ ಕನ್ನಡತಿ ಅನು ಅಕ್ಕ! ಬಲವಾದ ಕಾರಣವಿದೆ!
ಕನ್ನಡತಿ ಅನು ಅಕ್ಕ ಎನ್ನುವವರು ಸರ್ಕಾರಿ ಶಾಲೆಗಳ ಉಳಿವಿಗೆ ಮುಂದಾಗಿರೋದು ಎಲ್ಲರಿಗೂ ಗೊತ್ತೇ ಇದೆ. ಈಗ ಇವರ ಕೆಲಸಕ್ಕೆ ನಟ ಗಣೇಶ್ ರಾವ್ ಅವರು ಸಹಕಾರ ನೀಡಿದ್ದಾರೆ.
ಕನ್ನಡತಿ ಅನು ಅಕ್ಕ ಎನ್ನುವವರು ಸರ್ಕಾರಿ ಶಾಲೆಗಳ ಉಳಿವಿಗೆ ಮುಂದಾಗಿರೋದು ಎಲ್ಲರಿಗೂ ಗೊತ್ತೇ ಇದೆ. ಈಗ ಇವರ ಕೆಲಸಕ್ಕೆ ನಟ ಗಣೇಶ್ ರಾವ್ ಅವರು ಸಹಕಾರ ನೀಡಿದ್ದಾರೆ.
"ಕನ್ನಡ ಚಿತ್ರರಂಗದಲ್ಲಿ ವಿಶೇಷ ಅಧಿಕಾರಿಗಳ ಪಾತ್ರಕ್ಕೆ ಹಾಗೂ ವಿಭಿನ್ನ ತರಹದ ಪಾತ್ರಗಳಿಗೂ ಸೀಮಿತವಾಗಿರುವಂತ ವ್ಯಕ್ತಿಗಳಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸುವಂತ ಉತ್ತಮ ರಂಗಭೂಮಿ ಕಲಾವಿದರು ಹಾಗೂ ಸಮಾಜ ಸೇವಕರು ಕೂಡ ಹೌದು. ಗಣೇಶ್ ರಾವ್ ಕೇಸರ್ಕರ್ ಅವರನ್ನು ಭೇಟಿ ಮಾಡಿ ವಿಚಾರಗಳನ್ನ ವಿನಿಮಯ ಮಾಡಿಕೊಂಡೆ. ನಿಜಕ್ಕೂ ಉತ್ತಮವಾದ ಸಮಯವನ್ನು ಗಣೇಶ್ ರಾವ್ ಸರ್ ನಮಗೆ ದಾನಮಾಡಿಕೊಟ್ಟರು" ಎಂದು ಅನು ಅಕ್ಕ ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ಗಣೇಶ್ ರಾವ್ ಅವರು ಊರಿನ ಸರ್ಕಾರಿ ಶಾಲೆಯೊಂದನ್ನು ದತ್ತು ಪಡೆದುಕೊಂಡಿರುತ್ತಾರೆ.ಶಾಲೆಗೆ ಸುಣ್ಣ ಬಣ್ಣದ ಅವಶ್ಯಕತೆ ಇರುವುದರಿಂದ
ಶಾಲೆಯ ಅಭಿವೃದ್ದಿ ಸೇವಾ ಕಾರ್ಯದಲ್ಲಿ ನಮ್ಮದು ಒಂದು ಪಾತ್ರವಿರಲೆಂದು ಭೇಟಿ ಆದೆ ಎಂದು ಅನು ಅಕ್ಕ ಹೇಳಿದ್ದಾರೆ.
"ಕನ್ನಡ ಚಿತ್ರರಂಗದಲ್ಲಿ ವಿಶೇಷ ಅಧಿಕಾರಿಗಳ ಪಾತ್ರಕ್ಕೆ ಹಾಗೂ ವಿಭಿನ್ನ ತರಹದ ಪಾತ್ರಗಳಿಗೂ ಸೀಮಿತವಾಗಿರುವಂತ ವ್ಯಕ್ತಿಗಳಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸುವಂತ ಉತ್ತಮ ರಂಗಭೂಮಿ ಕಲಾವಿದರು ಹಾಗೂ ಸಮಾಜ ಸೇವಕರು ಕೂಡ ಹೌದು" ಎಂದು ಅನು ಅಕ್ಕ ಹೇಳಿದ್ದಾರೆ.
"ಗಣೇಶ್ ಅವರನ್ನು ಭೇಟಿ ಮಾಡಿ ವಿಚಾರಗಳನ್ನ ವಿನಿಮಯ ಮಾಡಿಕೊಂಡೆ. ನಿಜಕ್ಕೂ ಉತ್ತಮವಾದ ಸಮಯವನ್ನು ಗಣೇಶ್ ರಾವ್ ಸರ್ ನಮಗೆ ದಾನ ಕೊಟ್ಟರು.
ಇವರನ್ನು ಶಾಲೆಗೆ ಬಣ್ಣಗಳ ಅವಶ್ಯ ಇರುವುದರಿಂದ ಸ್ವತಃ ತಾವೇ ಶಾಲೆಗೆ ಬಣ್ಣ ಕೊಡುಸುವೇವು, ನಿಮ್ಮದೊಂದು ಸೇವಾಕಾರ್ಯ ನಮ್ಮ ಶಾಲೆಗೆ ಇರಲೆಂದು ಆತ್ಮೀಯವಾಗಿ ಕೇಳಿದರು. ಇದಕ್ಕೂ ಮುನ್ನ ಇವರು ಸುಮಾರು ಸಾಮಾಜಿಕ ಹೋರಾಟಗಳಲ್ಲಿ ಹಾಗೂ ಉತ್ತಮ ಕಾರ್ಯಗಳಲ್ಲಿ ಭಾಗಿಯಾಗಿದ್ದುಂಟು. ಜೊತೆ ಜೊತೆಯಲ್ಲಿ ಸುಮಾರು ವರ್ಷದಿಂದ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ, ಸಮವಸ್ತ್ರಗಳ ವಿತರಣೆ,ರಸ್ತೆ ಬದಿ ವಾಸುಗರಿಗೆ ಬಟ್ಟೆ ಬರೆಯಲ್ಲದೆ, ಹಾಸಿಗೆ ಹೊದಿಕೆಗಳನ್ನ ಕೊಟ್ಟಿದ್ದುಂಟು" ಎಂದು ಅನು ಅಕ್ಕ ಹೇಳಿದ್ದಾರೆ.
"ಸುಮಾರು ಸಾಮಾಜಿಕ ಚಿಂತನೆಯನ್ನ ಇಟ್ಟುಕೊಂಡು ಸಾಮಾಜಿಕ ಕಾರ್ಯಕ್ಕೆ ಮುಂದಾದ ಇಂತಹ ಕಲಾವಿದರ ಅವಶ್ಯಕೆತೆ ಖಂಡಿತ ನಾಡಿಗಿದೆ. ಇಂತವರ ಸಂಖ್ಯೆ ಸಹಸ್ರಾರು ಆಗ್ಲಿ ರಾಜ್ಯದೆಲ್ಲೆಡೆ ಸರ್ಕಾರಿ ಕನ್ನಡ ಶಾಲೆಗಳು ಉಳಿಯಲಿ ಬೆಳೆಯಲಿ,ಬಡ ವಿದ್ಯಾರ್ಥಿಗಳಿಗೆ ಗುಣ ಮಟ್ಟದ ಶಿಕ್ಷಣ ಹಾಗೂ ಪೌಷ್ಠಿಕ ಆಹಾರ ಸಿಗಲಿ ಎನ್ನುವುದೇ ನಮ್ಮ ಮುಖ್ಯ ಧ್ಯೇಯ" ಎಂದು ಅನು ಅಕ್ಕ ಹೇಳಿದ್ದಾರೆ.