Published : Aug 30, 2024, 04:00 PM ISTUpdated : Aug 30, 2024, 04:01 PM IST
dhanashree Verma Hot Makeover ಡಾನ್ಸ್‌ನಿಂದ ಕೆಲ ಕಾಲ ಬ್ರೇಕ್ ಪಡೆದಿದ್ದ ಧನಶ್ರೀ ವರ್ಮ ಮತ್ತೆ ಡಾನ್ಸ್‌ಗೆ ಮರಳುತ್ತಿದ್ದಾರೆ. ಅದೃಷ್ಟ ಬದಲಾಯಿಸಿಕೊಳ್ಳಲು ಹೊಸ ಹೇರ್‌ಸ್ಟೈಲ್ ಮಾಡಿಸಿಕೊಂಡಿದ್ದಾರೆ.
ಯಜುವೇಂದ್ರ ಚಾಹಲ್ ಪತ್ನಿಯಾಗಿರುವ ಕಾರಣಕ್ಕಾಗಿ ಮಾತ್ರವಲ್ಲ, ಧನಶ್ರಿ ವರ್ಮ ಅವರು ತಮ್ಮ ಸೌಂದರ್ಯ ಹಾಗೂ ಉದ್ದ ಕೂದಲಿನ ಕಾರಣಕ್ಕಾಗಿಯೂ ಜನಪ್ರಿಯರಾಗಿದ್ದಾರೆ.
29
ಡಾನ್ಸ್ ಮಾಡುವ ವೇಳೆ ಕಾಲು ಮುರಿದುಕೊಂಡಿದ್ದ ಧನಶ್ರೀ ವರ್ಮ ಆ ಬಳಿಕ ಕೆಲ ಕಾಲ ಡಾನ್ಸ್‌ನಿಂದ ದೂರ ಉಳಿದಿದ್ದರು. ಈಗ ಮತ್ತೊಮ್ಮೆ ಡಾನ್ಸ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುವ ನಿರ್ಧಾರ ಮಾಡಿದ್ದಾರೆ.
39
ತಮ್ಮ ಅದೃಷ್ಟದಲ್ಲಿ ಬದಲಾವಣೆ ತರುವ ಉದ್ದೇಶಕ್ಕಾಗಿ ಧನಶ್ರಿ ವರ್ಮ ಮನಸ್ಸು ಮಾಡಿದ್ದು, ಅದಕ್ಕಾಗಿ ಹೊಸ ಮೇಕ್‌ಓವರ್ ಕೂಡ ಮಾಡಿಸಿಕೊಂಡಿದ್ದಾರೆ.
49
ತಮ್ಮ ಅದೃಷ್ಟದ ಕೂದಲಿಗೆ ಹೊಸ ರೂಪ ನೀಡಿರುವ ಧನಶ್ರೀ ವರ್ಮ ಇದರ ಫೋಟೋಗಳನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಕೂಡ ಧನಶ್ರಿ ವರ್ಮ ಸಖತ್ ಕ್ಯೂಟ್ ಆಗಿ ಕಂಡಿದ್ದಾರೆ. ಈ ವೇಳೆ ತಮ್ಮ ಉದ್ದ ಕೂದಲಿನ ಸೌಂದರ್ಯವನ್ನು ಪ್ರದರ್ಶನ ಮಾಡಿಸಿಕೊಂಡಿದ್ದಾರೆ.
59
ಧನಶ್ರಿ ವರ್ಮ ಅವರ ಹೊಸ ಹೇರ್‌ಸ್ಟೈಲ್‌ಗೆ ಅಭಿಮಾನಿಗಳು ಫಿದಾ ಆಗಿದ್ದು, ನಿಮ್ಮ ಮೇಕ್‌ಓವರ್ ಅದ್ಭುತವಾಗಿದೆ ಎಂದು ಹೇಳಿದ್ದಾರೆ. ಇನ್ಸ್‌ಟಾಗ್ರಾಮ್‌ನಲ್ಲಿ ಧನಶ್ರಿ ವರ್ಮಗೆ 6.2 ಮಿಲಿಯನ್ ಫಾಲೋವರ್‌ಗಳಿದ್ದು, ಇದರಲ್ಲಿ ತಮ್ಮ ಡಾನ್ಸ್ ವಿಡಿಯೋಗಳನ್ನು ಅವರು ಪೋಸ್ಟ್ ಮಾಡುತ್ತಿರುತ್ತಾರೆ.
69
ಅವರ ಪ್ರತಿ ಫೋಟೋಶೂಟ್‌ಗಳು ಕೂಡ ವೈರಲ್ ಆಗುತ್ತವೆ. ಆದರೆ, ಈ ಬಾರಿ ಅವರ ಅಭಿಮಾನಿಗಳು ಕೂದಲಿನ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ.
79
ಸೆಲ್ಫಿ ಕ್ವೀನ್ ಧನಶ್ರೀ ವರ್ಮ ತಮ್ಮ ಹೊಸ ಹೇರ್‌ಮೇಕ್‌ಓವರ್ ಬಳಿಕ ಕನ್ನಡಿಯ ಎದುರು ನಿಂತು ತೆಗೆದ ಚಿತ್ರವನ್ನು ಕೂಡ ಅವರು ಹಂಚಿಕೊಂಡಿದ್ದಾರೆ.
89
ಹೊಸ ಮೇಕ್‌ಓವರ್ ಫೋಟೋ ಬಳಿಕ ಧನಶ್ರಿ ವರ್ಮ ಯಜುವೇಂದ್ರ ಚಾಹಲ್ ಜೊತೆಗೂ ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.