ಕಬೀರ್ ಬೇಡಿಯವರ ನಾಲ್ಕನೇ ಪತ್ನಿ ಪರ್ವೀನ್ ಬ್ರಿಟಿಷ್-ಪಂಜಾಬಿ ಮೂಲದವರು. ಪರ್ವೀನ್ ಕಬೀರ್ ಗಿಂತ 29 ವರ್ಷ ಚಿಕ್ಕವರು. ಕಬೀರ್ ಬೇಡಿಯವರ ಮಗಳು ಪೂಜಾ ಬೇಡಿಗಿಂತ ಐದು ವರ್ಷ ಚಿಕ್ಕವರು.
ಪರ್ವೀನ್ ದುಸಾಂಜ್ ಒರ್ವ ನಿರ್ಮಾಪಕಿ, ಸಾಮಾಜಿಕ ಸಂಶೋಧಕಿ ಮತ್ತು ಉದ್ಯಮಿ. 2005 ರಲ್ಲಿ ಲಂಡನ್‌ನಲ್ಲಿ ನಾಟಕವೊಂದರಲ್ಲಿ ಕಬೀರ್ ಅವರನ್ನು ಭೇಟಿಯಾದರು ಪರ್ವೀನ್. ಅವರ ಸ್ನೇಹ ಅಲ್ಪಾವಧಿಯಲ್ಲಿಯೇ ಪ್ರೀತಿಗೆ ತಿರುಗಿತು ಮತ್ತು ಕಬೀರ್ -ಪರ್ವೀನ್ 10 ವರ್ಷಗಳ ಕಾಲ ಲಿವ್-ಇನ್ ರಿಲೇಶನ್ಶಿಪ್‌ನಲ್ಲಿ ಇದ್ದರು.