'ಹುಷಾರು ಕಣ್ರೋ...!' ತನ್ನವರ ಕಾಳಜಿ ವಹಿಸಿದ್ದ ಚಿರು: ಕೊನೆ ಕ್ಷಣದಲ್ಲಿ ಆಡಿದ ಮಾತಿದು!

First Published Jun 9, 2020, 10:13 AM IST

ಚಿರಂಜೀವಿ ಸರ್ಜಾ ಚಿರ ನಿದ್ರೆಗೆ ಜಾರಿದ್ದಾರೆ. ನಿನ್ನೆ, ಸೋಮವಾರ ಕನಕಪುರದ ನೆಲಗುಳಿ ಫಾರ್ಮ್‌ಹೌಸ್‌ನಲ್ಲಿ ಅವರ ಅಂತ್ಯಕ್ರಿಯೆ ನಡೆದಿದೆ. ಚಿರು ಅಗಲುವಿಕೆ ಕುಟುಂಬಕ್ಕೆ ಬಹುದೊಡ್ಡ ಆಘಾತ ನೀಡಿದ್ದರೆ, ಸ್ಯಾಂಡಲ್‌ವುಡ್‌ ತನ್ನ ಅಮೂಲ್ಯ ರತ್ನವೊಂದನ್ನು ಕಳೆದುಕೊಂಡ ಶೋಕದಲ್ಲಿದೆ. ತಾನೊಬ್ಬ ಸ್ಟಾರ್ ಎಂಬ ಅಹಂ ತೋರದೆ ಎಲ್ಲರೊಂದಿಗೂ ನಗುಮೊಗದಿಂದ ಖುಷಿ ಖುಷಿಯಾಗೇ ಇರುತ್ತಿದ್ದ ಚಿರುಗೆ ಬೇರೆಯವರ ಮುಖದಲ್ಲಿ ಖುಷಿ ಕಂಡು ತಾನೂ ಸಂತಸಪಡುತ್ತಿದ್ದರು ಎಂಬ ವಿಚಾರ ಇಡೀ ಕರ್ನಾಟಕಕ್ಕೇ ತಿಳಿದಿದೆ. ಆದರೆ ಅವರು ಆಸ್ಪತ್ರೆಗೆ ಕರೆದೊಯ್ಯುವಾಗಲೂ ತನ್ನವರ ಕಾಳಜಿ ಎಷ್ಟು ವಹಿಸಿದ್ದರೆಂಬುವುದಕ್ಕೆ ಅವರಾಡಿದ ಕೊನೆ ಮಾತುಗಳೇ ಸಾಕ್ಷಿ.

ಸದ್ಯ ಚಿರು ಕನ್ನಡಿಗರ ಮನದಲ್ಲಿ ಚಿರಂಜೀವಿಯಾಗಿದ್ದಾರೆ.
undefined
ಪತ್ನಿ, ತಮ್ಮ, ಅಪ್ಪ, ಅಮ್ಮ, ಮಾವ ಹೀಗೆ ತನ್ನೆಲ್ಲಾ ಆಪ್ತರನ್ನು ಬಿಟ್ಟು ಅವರು ಚಿರ ನಿದ್ರೆಗೆ ಜಾರಿದ್ದಾರೆ.
undefined

Latest Videos


ಆದರೆ ಅವರು ಯಾರನ್ನೂ ನೋವಿನಲ್ಲಿ ನೋಡಲು ಇಷ್ಟಡಸುತ್ತಿರಲಿಲ್ಲ. ಯಾವತ್ತೂ ನಗು ನಗುತ್ತಲೇ ಇರುತ್ತಿದ್ದ ಚಿರು, ಇತರರನ್ನೂ ನಗಿಸುತ್ತಿದ್ದರು.
undefined
ಕುಟುಂಬ ಸದಸ್ಯರು ಮಾತ್ರವಲ್ಲದೇ ಗೆಳೆಯರು, ಚಾಲಕ, ಹೀಗೆ ಎಲ್ಲರಿಗೂ ಅಚ್ಚು ಮೆಚ್ಚಿನವರಾಗಿದ್ದರು.
undefined
ಲಾಕ್‌ಡೌನ್‌ ಘೋಷಣೆಯಾದ ಬೆನ್ನಲ್ಲೇ ಮನೆಗೆ ಸುಮಾರು ಇನ್ನೂರಕ್ಕೂ ಅಧಿಕ ಸ್ಯಾನಿಟೈಸರ್ ಬಾಟಲ್‌ಗಳನ್ನು ತಂದಿಟ್ಟಿದ್ದರಂತೆ.
undefined
ಅಲ್ಲದೇ 2500ಕ್ಕೂ ಹೆಚ್ಚು ದುಬಾರಿ ಮಾಸ್ಕ್ ತಂದಿಟ್ಟಿದ್ದ ಚಿರು, ಮನೆಯವರಿಗೆ ಮಾತ್ರವಲ್ಲದೇ, ಹುಡುಗರಿಗೂ ಇದನ್ನು ಧರಿಸುವಂತೆ ಸೂಚಿಸಿದ್ದರು
undefined
ಇನ್ನು ಭಾನುವಾರ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದ ಅವರನ್ನು ಕಂಡು ಗಾಬರಿಗೀಡಾದ ಹುಡುಗರು ಅವರನ್ನೆತ್ತಿಕೊಮಡು ಕೂಡಲೇ ಆಸ್ಪತ್ರೆಯತ್ತ ಧಾವಿಸಿದ್ದರು.
undefined
ಚಿರು ಕಾರು ಚಾಲಕ ಹೇಳುವಂತೆ ಕಣ್ಮುಚ್ಚಿ ತೆರೆಯುವಷ್ಟು ವೇಗವಾಗಿ ಆಸ್ಪತ್ರೆಯತ್ತ ಕಾರು ಓಡಿಸಿದ್ದರು.
undefined
ಆದರೆ ಈ ವೇಳೆಯೂ ತನ್ನವರ ಕಾಳಜಿ ಬಯಸಿದ್ದ ಚಿರು ಹುಷಾರು ಕಣ್ರೋ, ಮೆಲ್ಲಗೆ ಕಾರು ಓಡಿಸ್ರೋ, ನನಗೇನೂ ಆಗಿಲ್ಲ ಎಂದಿದ್ದರಂತೆ.
undefined
ದುರಾದೃಷ್ಟವಶಾತ್ ಹೃದಯಾಘಾತದಿಂದ ಚಿರು ಕೊನೆಯುಸಿರೆಳೆದಿದ್ದಾರೆ. ಜೇನಿನ ಗೂಡಿನಂತಿದ್ದ ಅವರ ಕುಟುಂಬವೀಗ ಶೋಕ ಸಾಗರದಲ್ಲಿ ಮುಳುಗಿದೆ.
undefined
click me!