ಕೇರಳಕ್ಕೆ ಬಂದ ತಾಂಜೇನಿಯಾದ ರೀಲ್ಸ್ ಸ್ಟಾರ್‌ ಕಿಲಿ ಪಾಲ್, ಮಲಯಾಳಂ ಸಿನಿಮಾಗೆ ಎಂಟ್ರಿ ಸುದ್ದಿ!

Published : May 17, 2025, 01:15 PM IST

ತಾಂಜೇನಿಯಾದ ಸಾಮಾಜಿಕ ಮಾಧ್ಯಮ ತಾರೆ ಕಿಲಿ ಪಾಲ್ ಕೇರಳಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ್ದಾರೆ. ಕೇರಳದ ಸಂಸ್ಕೃತಿಯನ್ನು ಅನುಭವಿಸಲು ಮತ್ತು ಮಲೆಯಾಳಂ ಸಿನಿಮಾದಲ್ಲಿ ನಟಿಸುವ ಸುದ್ದಿಯಿದೆ.

PREV
16
ಕೇರಳಕ್ಕೆ ಬಂದ ತಾಂಜೇನಿಯಾದ ರೀಲ್ಸ್ ಸ್ಟಾರ್‌ ಕಿಲಿ ಪಾಲ್, ಮಲಯಾಳಂ  ಸಿನಿಮಾಗೆ ಎಂಟ್ರಿ ಸುದ್ದಿ!

ತಾಂಜೇನಿಯಾದ ಖ್ಯಾತ ಸಾಮಾಜಿಕ ಮಾಧ್ಯಮ ತಾರೆ ಕಿಲಿ ಪಾಲ್ ಕೇರಳ ಬಂದಿದ್ದಾರೆ. ದಕ್ಷಿಣ ಭಾರತಕ್ಕೆ ಇದು ಅವರ ಮೊದಲ ಭೇಟಿಯಾಗಿದೆ. ಕೇರಳದ ಸಾಂಪ್ರದಾಯಿಕ  ಆಹಾರ,  ಕಲಾತ್ಮಕ ಬದುಕಿನ ಬಗ್ಗೆ ತಿಳಿದುಕೊಳ್ಳಲು ಉತ್ಸುಹಕರಾಗಿದ್ದಾರಂತೆ. ಮಲೆಯಾಳಂ ಸಿನೆಮಾವೊಂದರಲ್ಲಿನ ನಟನೆಗೆ ಬರುತ್ತಿದ್ದಾರೆ ಎಂದು ಸುದ್ದಿ ಹಬ್ಬಿದೆ. ಆದರೆ ಯಾವ ಸಿನೆಮಾ ಎಂಬ ಬಗ್ಗೆ ಮಾಹಿತಿ ಲಭ್ಯವಿಲ್ಲ. 

26

ಆದರೆ ಕೇರಳದ ಸಾಂಪ್ರದಾಯಿಕ ಉಡುಗೆ ತೊಡುಗೆ, ಆಹಾರ ಪದ್ದತಿಗಳನ್ನು ಅನುಭವಿಸಲು ಉತ್ಸುಹಕನಾಗಿದ್ದಾರೆ. ಆಲಪ್ಪುಳದ ಹಿನ್ನೀರಿನಲ್ಲಿ ನೆನೆಯುವ ಮತ್ತು ದೂರದಿಂದಲೇ ತಾನು ಮೆಚ್ಚುವ ತಾರೆಯರನ್ನು ಭೇಟಿಯಾಗುವ ಕನಸು ಅವರಿಗಿದೆ. ಆಫ್ರಿಕಾದ ಉಣ್ಣಿಯೆಟ್ಟನ್ ಮೊದಲ ಬಾರಿಗೆ ಕೇರಳಕ್ಕೆ ಬಂದಿದ್ದಾರೆ ಎಂದು ಆಪ್ತರು ಬರೆದುಕೊಂಡಿದ್ದಾರೆ. ಮಲೆಯಾಳಿಗಳು ಕಿಲಿಯನ್ನು ಉಣ್ಣಿಯೆಟ್ಟನ್ ಎಂದು ಕರೆಯುತ್ತಾರೆ.

36

 ಇನ್ಸ್ಟಾಗ್ರಾಮ್‌ನಲ್ಲಿ 10 ಮಿಲಿಯನ್‌ಗೂ ಹೆಚ್ಚು ಅನುಯಾಯಿಗಳುನ್ನು ಹೊಂದಿರುವ ಕಿಲಿ ಪಾಲ್ ಭಾರತದ ಎಲ್ಲಾ ಭಾಷೆಗಳನ್ನು ಪ್ರೀತಿಸುವ ಅವರು ಕನ್ನಡ, ಮಲಯಾಳಂ, ತೆಲುಗು, ತಮಿಳು ಹಿಂದಿ ಮಾತ್ರವಲ್ಲ ಎಲ್ಲಾ ಭಾಷೆಗಳಿಗೆ ಲಿಪ್‌ ಸಿಂಕ್ ಮಾಡಿ ರೀಲ್ಸ್ ಮಾಡುತ್ತಾರೆ. ತಮ್ಮ ಸಾಂಪ್ರದಾಯಿಕ ಉಡುಗೆ ಮಾಸಾಯಿ ಬಟ್ಟೆಗಳನ್ನು ಧರಿಸಿ  ತಮ್ಮ ತಂಗಿ ನೀಮಾ ಜೊತೆಗೆ "ಶೇರ್ಷಾ" ಚಿತ್ರದ "ರಾತಾನ್ ಲಂಬಿಯಾನ್" ಹಾಡಿಗೆ ಲಿಪ್ ಸಿಂಕ್ ಮಾಡುತ್ತಿರುವ ವಿಡಿಯೋ ವೈರಲ್ ಆದ ನಂತರ ಭಾರತದಲ್ಲಿ ಹಲವು ಮಂದಿ ಅವರನ್ನು ಅನುಸರಿಸಲು ಆರಂಭಿಸಿದರು.

46

ಅವರು ನಿಯಮಿತವಾಗಿ ತಮ್ಮ ಮಾಸಾಯಿ ಬಟ್ಟೆಗಳನ್ನು ಧರಿಸಿ ಬಾಲಿವುಡ್ ಮಾತ್ರವಲ್ಲದೆ ಭಾರತದಲ್ಲಿರುವ ಎಲ್ಲಾ ಭಾಷೆಯ ಸಿನೆಮಾ ಹಾಡುಗಳಿಗೆ ಲಿಪ್ ಸಿಂಕ್ ಮತ್ತು ನೃತ್ಯ ಮಾಡುತ್ತಿರುತ್ತಾರೆ. ಕಿಲಿ  ಭಾರತದ ಮೇಲಿನ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದು, ಭಾರತಕ್ಕೆ ಹಲವು ಬಾರಿ ಭೇಟಿ ನೀಡಿದ್ದಾರೆ. ಅವರು ಬಾಲಿವುಡ್‌ನ ಭಾಗವಾಗಬೇಕೆಂಬ ಬಯಕೆಯನ್ನು ಕೂಡ ವ್ಯಕ್ತಪಡಿಸಿದ್ದರು ಮತ್ತು ಬಿಗ್ ಬಾಸ್ ಸೀಸನ್ 16 ಮನೆಗೆ ಕೂಡ ಭೇಟಿ ನೀಡಿದ್ದರು.
 

56

 ಈ ಹಿಂದೆ 2024ರಲ್ಲಿ ಅಹಮದಾಬಾದ್‌ ಗೆ ಭೇಟಿ ನೀಡಿ ಸ್ನೇಹಿತರ ಮದುವೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ನಾನು ಭಾರತವನ್ನು ಬಹಳ ಇಷ್ಟಪಡುವೆ. ಇಲ್ಲಿ ಜನರು ನನ್ನನ್ನು ತುಂಬಾ ಆತ್ಮೀಯವಾಗಿ ಸ್ವಾಗತಿಸುತ್ತಾರೆ. ನಾನು ಬಂದಾಗಲೆಲ್ಲಾ ಅವರು ನನ್ನನ್ನು ಸೆಲೆಬ್ರಿಟಿಯಂತೆ ನಡೆಸಿಕೊಳ್ಳುತ್ತಾರೆ. ನನಗೆ ಸಂತೋಷವಾಗಿತ್ತಿದೆ. ಭಾರತೀಯ ಮದುವೆಗಳು ನಿಜಕ್ಕೂ ಹಬ್ಬಗಳಂತಿವೆ ಎಂದಿದ್ದರು.

66

ಭಾರತೀಯ ಊಟದ ಬಗ್ಗೆ ಮಾತನಾಡುತ್ತಾ ನಾನು ಧೋಕ್ಲಾ, ಆಮ್ರಾಸ್ ಪೂರಿ, ತುಪ್ಪದ ರೊಟ್ಟಿ, ಮಾವಿನ ಲಸ್ಸಿ ಇತ್ಯಾದಿ ಹಲವಾರು ಗುಜರಾತಿ ತಿನಿಸುಗಳನ್ನು  ತಿಂದಿರುವೆ ಆದರೆ ಬಿರಿಯಾನಿ ನನ್ನ ಮನಸ್ಸಿಗೆ ತುಂಬಾ ಹಿಡಿಸಿತು. ನಾನು ಎಲ್ಲಿಗೆ ಹೋದರೂ ಇದನ್ನು ಸೇವಿಸುತ್ತೇನೆ. ನಾನು ಭಾರತದಾದ್ಯಂತ ಹಾಡುಗಳನ್ನು ರೆಕಾರ್ಡ್ ಮಾಡಲು, ಸಂಗೀತ ಪ್ರವಾಸ ಕೈಗೊಳ್ಳಲು ಇಚ್ಛಿಸುತ್ತೇನೆ. ಇಲ್ಲಿ ವಿವಿಧತೆ ತುಂಬಾ ಇದೆ. ಸಂಸ್ಕೃತಿ, ಭಾಷೆ, ಜನರ ಭಾವನೆಗಳು. ನಾನು ಈ ನಾಡಿನಲ್ಲಿ ಜನರನ್ನು ಮನರಂಜಿಸಲು ನಿರಂತರ ಪ್ರಯತ್ನಿಸುತ್ತೇನೆ ಎಂದಿದ್ದರು. ಇದರ ಭಾಗವಾಗಿ ಈಗ ಕೇರಳಕ್ಕೆ ಬಂದಿದ್ದಾರೆ.
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories