'ಜಸ್ಟ್‌ NTR ಸಲುವಾಗಿ ನಾನು ಈ ಕೆಲಸ ಮಾಡಿದ್ದೆ..' ಕಾಜಲ್‌ ಅಗರ್ವಾಲ್‌ ಮಾತಿನ ಅರ್ಥವೇನು..

First Published | May 9, 2024, 4:39 PM IST

ನಟಿ ಕಾಜಲ್‌ ಅಗರ್ವಾಲ್‌ ಬಹಳ ದಿನಗಳ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.  ಈ ವೇಳೆ ಅವರು ಹೇಳಿರುವ ಮಾತು ಸಖತ್‌ ವೈರಲ್‌ ಆಗಿದೆ.

ಕಾಜಲ್ ಅಗರ್ವಾಲ್ ಬಹಳ ದಿನಗಳ ನಂತರ ಸಂದರ್ಶನವೊಂದನ್ನು ನೀಡಿದ್ದು. ಎನ್‌ಟಿಆರ್‌ ಬಗ್ಗೆ ಆಕೆಯ ಕಾಮೆಂಟ್‌ಗಳು ವೈರಲ್ ಆಗುತ್ತಿವೆ. ಜೂನಿಯರ್‌ ಎನ್‌ಟಿಆರ್‌ ಎನ್ನುವ ಏಕೈಕ ಕಾರಣಕ್ಕಾಗಿ ಈ ಕೆಲಸ ಮಾಡಿದ್ದಾಗಿ ಕಾಜಲ್‌ ಅಗರ್ವಾಲ್‌ ಹೇಳಿದ್ದಾರೆ.

ಬಹಳ ದೀರ್ಘ ಸಮಯದ ಕಾಲ ದಕ್ಷಿಣ ಭಾರತದ ಸಿನಿಮಾರಂಗವನ್ನು (South Indian Movie Industry) ಆಳಿದ ಕೆಲವೇ ಕೆಲವು ನಟಿಮಣಿಯರಲ್ಲಿ ಕಾಜಲ್‌ ಅಗರ್ವಾಲ್‌ ಕೂಡ ಒಬ್ಬರು. ಅವರ ಹವಾ ಬಹಳ ದೀರ್ಘಕಾಲದವರೆಗೂ ಚಾಲ್ತಿಯಲ್ಲಿತ್ತು.

Tap to resize

ಸುಮಾರು ಎರಡು ದಶಕಗಳಿಂದ ಅವರು ಸ್ಟಾರ್ ಹೀರೋಯಿನ್ (Star Heroine) ಪಟ್ಟವನ್ನು ಅನುಭವಿಸಿದ್ದರು. ಅವರು ಟಾಲಿವುಡ್ (Tollywood) - ಕಾಲಿವುಡ್‌ (Kollywood)ನಲ್ಲಿ ಟಾಪ್ ಸ್ಟಾರ್‌ಗಳ ಎದುರು ನಟಿಸಿದ್ದಾರೆ.
 

ಚಿರಂಜೀವಿ, ಬಾಲಕೃಷ್ಣ ಅವರಂತಹ ಹಿರಿಯ ನಾಯಕರ ಜೊತೆ ಜೊತೆಯಾಗಿ ನಟಿಸಿದ ದಾಖಲೆಯೂ ಇವರದಾಗಿದೆ. ರಾಜಮೌಳಿ ನಿರ್ದೇಶನದ ಮಗಧೀರ ಸಿನಿಮಾ ಮೂಲಕ ಅವರ ವೃತ್ತಿಜೀವನವನ್ನು (Career) ಅದ್ಭುತವಾಗಿ ಆರಂಭಿಸಿದ್ದರು. 
 

ಮಗಧೀರ ಸಿನಿಮಾದ ಮಹಾ ಯಶಸ್ಸಿನ ನಂತರ ಕಾಜಲ್ ಹಿಂತಿರುಗಿ ನೋಡಲೇ ಇಲ್ಲ. ಮಗಧೀರದ ನಂತರವೂ ಅವರ ಸಾಲು ಸಾಲು ಸಿನಿಮಾಗಳು ದೊಡ್ಡ ಮಟ್ಟದ ಯಶಸ್ಸು ಗಳಿಸುವಲ್ಲಿ ಯಶಸ್ವಿಯಾಯಿತು.
 

ಕಾಜಲ್ ಅಗರ್ವಾಲ್ ಬಹಳ ಸಮಯದ ನಂತರ ಟಾಕ್ ಶೋನಲ್ಲಿ ಭಾಗವಹಿಸಿದ್ದಾರೆ. ಜನಪ್ರಿಯ ಹಾಸ್ಯನಟ ಆಲಿ ಆಯೋಜಿಸಿರುವ ಫನ್ ವಿತ್ ಆಲಿ ಸೀಸನ್ 2 ಗೆ ಅತಿಥಿಯಾಗಿ ಪಾಲ್ಗೊಂಡಿದ್ದರು. 

ಅವರ ಇತ್ತೀಚಿನ ಚಲನಚಿತ್ರ ಸತ್ಯಭಾಮಾ ಸಂಗಟು ಜೊತೆಗೆ, ಅವರು ತಮ್ಮ ಅಭಿಮಾನಿಗಳೊಂದಿಗೆ ವೈಯಕ್ತಿಕ ಮತ್ತು ವೃತ್ತಿಪರ ವಿಷಯಗಳನ್ನು ಟಾಕ್‌ ಶೋನಲ್ಲಿ ಹಂಚಿಕೊಂಡಿದ್ದಾರೆ.
 

ತೆಲುಗಿನಲ್ಲಿ ಕಾಜಲ್ ಅವರ ಮೊದಲ ಚಿತ್ರ ಲಕ್ಷ್ಮಿ ಕಲ್ಯಾಣಂ ಮತ್ತು ನಿರ್ದೇಶಕ ತೇಜಾ ಅವರನ್ನು ಹೇಗೆ ಆಯ್ಕೆ ಮಾಡಿದರು ಎಂದು ಅಲಿ ಪ್ರಶ್ನೆ ಮಾಡಿದ್ದಾರೆ.. ಫೋಟೋಗಳನ್ನು ನೋಡಿದ ನಂತರ ತೇಜಾ ಆಡಿಷನ್‌ಗೆ ಕರೆದಿದ್ದರು ಎಂದಿದ್ದಾರೆ. ಇದು ಜೀವನದಲ್ಲಿ ನನ್ನ ಮೊದಲ ಆಡಿಷನ್ (Audition) ಆಗಿತ್ತು ಎಂದು ಕಾಜಲ್‌ ತಿಳಿಸಿದ್ದಾರೆ.
 

ಆಡಿಷನ್‌ನಲ್ಲಿ ನನಗೆ ಅಳಲು ಅವರು ಹೇಳಿದ್ದರು. ನಾನು ನನ್ನ ಜೀವನದಲ್ಲಿ ಎಂದೂ ಅತ್ತೇ ಇರಲಿಲ್ಲ. ಈ ಹಂತದಲ್ಲಿ ನನ್ನ ತಂದೆ ಏನೋ ಹೇಳಿದಾಗ ನನಗೆ ಅಳು ಬಂತು. ಅದರ ಬೆನ್ನಲ್ಲಿಯೇ ನಾನು ಚಿತ್ರಕ್ಕೆ ಸೆಲೆಕ್ಟ್‌ ಆದೆ ಎಂದಿದ್ದಾರೆ.

ನಿಮ್ಮದು ಪ್ರೇಮ ವಿವಾಹವೇ (Love Marriage) ಅಥವಾ ಅರೇಂಜ್ಡ್‌ ವಿವಾಹವೇ? (Arranged Marriage) ಎನ್ನುವ ಪ್ರಶ್ನೆಗೆ..ನನಗೆ ಗೌತಮ್ ಕಿಚ್ಲು (ಕಾಜಲ್ ಪತಿ) ಹತ್ತು ವರ್ಷಗಳಿಂದ ಗೊತ್ತು.  ಲಾಕ್‌ಡೌನ್ (Lockdown) ಸಮಯದಲ್ಲಿ ಇಡೀ ವಿಶ್ವವೇ ಸ್ತಬ್ಧಗೊಂಡಿತ್ತು. ಏನಾಗುತ್ತೋ ಗೊತ್ತಿರಲಿಲ್ಲ. ಆಗ ನಾವು ಮದುವೆಯಾಗಲು ನಿರ್ಧರಿಸಿದ್ದೆವು ಎಂದು ಕಾಜಲ್ ಹೇಳಿದ್ದಾರೆ.

ಕಾಜಲ್ ತಮ್ಮ ವೃತ್ತಿ ಜೀವನದಲ್ಲಿ ಒಂದೇ ಒಂದು ಚಿತ್ರದಲ್ಲಿ ಐಟಂ ಸಾಂಗ್ ಮಾಡಿದ್ದಾರೆ. ಈ ಬಗ್ಗೆಯೂ ಅಲಿ ಪ್ರಶ್ನೆ ಮಾಡಿದ್ದರು. ಜನತಾ ಗ್ಯಾರೇಜ್ ಚಿತ್ರದಲ್ಲಿ ಐಟಂ ಸಾಂಗ್ ಮಾಡಲು ಕಾರಣ ಯಾರು? ಎಂದು ಹೇಳಿದ್ದರು.
 

ನಾಯಕ, ನಿರ್ದೇಶಕ ಅಥವಾ ನಿರ್ಮಾಪಕ? ಯಾರ ಕಾರಣಕ್ಕಾಗಿ ನೀವು ಈ ಐಟಂ ಸಾಂಗ್‌ನಲ್ಲಿ ಮಾಡಿದ್ರಿ ಎಂದು ಕೇಳಲಾಯಿತು. ಅದಕ್ಕೆ ಕಾಜಲ್‌,  ಕೇವಲ ಎನ್ ಟಿಆರ್ ಕಾರಣದಿಂದ ಐಟಂ ಸಾಂಗ್ ಗೆ ಒಪ್ಪಿಕೊಂಡೆ ಎಂದಿದ್ದಾರೆ.
 

ಕಾಜಲ್, ಎನ್ ಟಿಆರ್ ಜೊತೆ ಮೂರು ಚಿತ್ರಗಳಲ್ಲಿ ನಟಿಸಿದ್ದರು. ವೃಂದಾವನಂ, ಬಾದ್ ಶಾ ಮತ್ತು ಟೆಂಪರ್ ಒಟ್ಟಿಗೆ ಜೋಡಿಯಾಗಿವೆ. ಈ ಮೂರು ಚಿತ್ರಗಳು ಯಶಸ್ವಿಯಾಗಿರುವುದು ಗಮನಾರ್ಹ

ಜೂನಿಯರ್‌ ಎನ್ ಟಿಆರ್ ಜೊತೆಗಿನ ಆಪ್ತತೆಯಿಂದಾಗಿ ಐಟಂ ಸಾಂಗ್‌ನಲ್ಲಿ ಡಾನ್ಸ್‌ ಮಾಡಿದ್ದೆ ಎಂದು ನಟಿ ಕಾಜಲ್‌ ಅಗರ್ವಾಲ್‌ ಹೇಳಿದ್ದಾರೆ.

Latest Videos

click me!