‘ಬಿಗ್ ಬಾಸ್ ಕನ್ನಡ ಸೀಸನ್ 4’ ವಿನ್ನರ್ ಒಳ್ಳೆ ಹುಡುಗ ಪ್ರಥಮ ಕೊಟ್ಟ ಮಾತಿನಂತೆ ಕೃಷಿಯಲ್ಲಿ ತೊಡಗಿಸಿಕೊಂಡು ಮಾತು ಉಳಿಸಿಕೊಂಡಿದ್ದಾರೆ.
undefined
ಕೊಳ್ಳೇಗಾಲದಿಂದಾಚೆ ಒಂದು ಪುಟ್ಟ ಗ್ರಾಮದಲ್ಲಿ ಭೂಮಿ ಖರೀದಿಸಿ ಭರ್ಜರಿ ವ್ಯವಸಾಯ ಮಾಡಿ ಜೋಳ, ಹುರುಳಿಕಾಳು ಬೆಳೆದು ಸರಿ ಸುಮಾರು ಎರಡು ವರೆ ಲಕ್ಷ ರೂ ಬೆಳೆ ಬೆಳೆದು ಲಾಭ ಮಾಡಿದ್ದಾರೆ
undefined
ಎಮ್.ಎಲ್.ಎ, ನಟಭಯಂಕರ ಇತ್ಯಾದಿ ಸಿನಿಮಾ ಮಾಡಿದ ಪ್ರಥಮ್ ಮೂರೂ ಸಿನಿಮಾದಲ್ಲಿ ಪಡೆದ ಅಷ್ಟೂ ಸಂಭಾವನೆಯ ದುಡ್ಡನ್ನು ಭೂಮಿ ಮೇಲೆ ಹಾಕಿ, ಈ ಬಾರಿ ನೀರಿನ ಅಭಾವವಿದ್ದರೂ ಸಹ ಭರ್ಜರಿ ಬೆಳೆ ಬೆಳೆದು ಲಾಭಗಳಿಸಿದ್ದಾರೆ.
undefined
ಇದರ ಪೂರ್ಣ ಜವಾಬ್ದಾರಿ ಹೊತ್ತವರು ಅವರ ತಂದೆ. ತಿಂಗಳಲ್ಲಿ ಮೂರು ಬಾರಿ ಊರಿಗೆ ಹೋಗಿ ವ್ಯವಸಾಯ ಏನಾಯ್ತು ಎಂಬುದರ ಕಡೆ ಪ್ರಥಮ್ ಗಮನವಿಟ್ಟಿದ್ದರು. ನಾಲ್ಕು ಎಕರೆ ಭೂಮಿಯಲ್ಲಿ ಹುರುಳಿ ಹಾಗೂ ಜೋಳದ ಭರ್ಜರಿ ಬೆಳೆ ಬೆಳೆದಿದ್ದಾರೆ.
undefined
ಪ್ರಥಮ್ ವ್ಯವಸಾಯ ಮಾಡ್ತೀನಿ ಅಂದಾಗ ಬಹಳಷ್ಟು ಮಂದಿ ನಕ್ಕವರೇ ಜಾಸ್ತಿ
undefined
ಬಹಳಷ್ಟು ಮಂದಿ ನಾನು ಊರಿನಲ್ಲಿ ವ್ಯವಸಾಯ ಮಾಡ್ತೀನಿ ಅಂದಾಗ ನಕ್ಕವರೇ ಜಾಸ್ತಿ. ಇವತ್ತು ಅವರೆಲ್ಲಾ call ಮಾಡಿ wish ಮಾಡಿದಾಗ ಆಗೋ ಸಂತೋಷ ಹೇಳೋಕಾಗ್ತಿಲ್ಲ....ಅದಕ್ಕಿಂತ ನಾನೇ ಬೆಳೆದಿರೋ ಬೆಳೆಯಿಂದ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದ ಪ್ರಥಮ್
undefined
ನನ್ನ ಕೈಲಾದ ಭೂದೇವಿಯ ಸೇವೆ ಮಾಡಿದ್ದೀನಿ. ನೀವು ಸಾಧ್ಯವಾದರೆ ಈ ಹಾಳಾದ್ ಬೆಂಗಳೂರು ಬಿಟ್ಟು ನಿಮ್ಮ ಊರಲ್ಲಿ ಭವಿಷ್ಯ ಅರಸಿ ಎಂದು ಕರೆ ಕೊಟ್ಟ ಒಳ್ಳೆ ಹುಡುಗ
undefined