ರಜನಿಕಾಂತ್ ಕೈಯಲ್ಲಿ ಭಾರೀ ಹೊಡೆತ ತಿಂದ ನಾಗಾರ್ಜುನ.., ಯಾಕೆ ಬೇಕಿತ್ತು ಇವೆಲ್ಲಾ ಅಂತೀರಾ..!?
Rajinikanth vs Nagarjuna: ಕಿಂಗ್ ನಾಗಾರ್ಜುನ ಟಾಲಿವುಡ್‌ನ ಸ್ಟಾರ್ ಹೀರೋ. 90ರ ದಶಕದಲ್ಲಿ ತೆಲುಗು ಚಿತ್ರರಂಗವನ್ನಾಳಿದ ಸ್ಟಾರ್ ಹೀರೋಗಳಲ್ಲಿ ನಾಗಾರ್ಜುನ ಕೂಡ ಒಬ್ಬರು. ಚಿತ್ರರಂಗಕ್ಕೆ ನಾಲ್ಕು ಆಧಾರ ಸ್ತಂಭಗಳಂತೆ ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನ, ವೆಂಕಟೇಶ್ ಇದ್ದರು. ಈಗಲೂ ಅವರ ಕ್ರೇಜ್ ಕಡಿಮೆಯಾಗಿಲ್ಲ. ಮೆಗಾಸ್ಟಾರ್, ಬಾಲಯ್ಯ ಬ್ಲಾಕ್ ಬಸ್ಟರ್ ಹಿಟ್ಸ್ ನೀಡುತ್ತಿದ್ದಾರೆ. ವೆಂಕಟೇಶ್ ಕೂಡ ಫ್ಯಾಮಿಲಿ ಸಬ್ಜೆಕ್ಟ್ ಸಿನಿಮಾಗಳಿಂದ ಹಿಟ್ ಮೇಲೆ ಹಿಟ್ ನೀಡುತ್ತಿದ್ದಾರೆ. ಆದರೆ ನಾಗಾರ್ಜುನಗೆ ಸಮಯ ಅಷ್ಟಾಗಿ ಒಗ್ಗಿ ಬರುತ್ತಿಲ್ಲ. ಸತತವಾಗಿ ಫ್ಲಾಪ್ ಸಿನಿಮಾಗಳ ಸಹವಾಸ ಮಾಡುತ್ತಿದ್ದಾರೆ ನಾಗಾರ್ಜುನ. ಅದಕ್ಕೆ ರೂಟ್ ಬದಲಿಸಿ ಮಲ್ಟಿ ಸ್ಟಾರರ್ ಮೂವೀಸ್ ಮಾಡಿಕೊಂಡು ಹೋಗುತ್ತಿದ್ದಾರೆ. ಕೆಲವು ಸಿನಿಮಾಗಳಲ್ಲಿ ಹೀರೋಯಿಸಂ ಇರುವ ಕ್ಯಾರೆಕ್ಟರ್ ರೋಲ್ಸ್ ಗೂ ಗ್ರೀನ್ ಸಿಗ್ನಲ್ ನೀಡುತ್ತಿದ್ದಾರೆ ನಾಗ್. ಅಷ್ಟೇ ಅಲ್ಲ, ಈಗ ವಿಲನ್ ಪಾತ್ರಗಳಿಗೂ ಸೈ ಎನ್ನುತ್ತಿದ್ದಾರೆ ನಾಗಾರ್ಜುನ.