Priyanka Upendra: ಅತ್ತೆಯ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿದ ಪ್ರಿಯಾಂಕ… ಮಗ ಉಪೇಂದ್ರ ಮಿಸ್ಸಿಂಗ್!

Published : May 24, 2025, 10:53 AM ISTUpdated : May 28, 2025, 02:33 PM IST

ಸ್ಯಾಂಡಲ್ ವುಡ್ ನಟಿ ಪ್ರಿಯಾಂಕ ಉಪೇಂದ್ರ ತಮ್ಮ ಅತ್ತೆಯ ಹುಟ್ಟುಹಬ್ಬವನ್ನು ಕುಟುಂಬದ ಜೊತೆ ಆಚರಿಸಿದ್ದು, ಮಗ ಉಪೇಂದ್ರ ಮಿಸ್ ಆಗಿದ್ದಾರೆ.

PREV
19

ಸ್ಯಾಂಡಲ್ ವುಡ್ ನಟ ಉಪೇಂದ್ರ (Upendra )ಅವರ ತಾಯಿ ಅನುಸೂಯ ಅವರು ಮೇ 23 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.

29

ಉಪೇಂದ್ರ ಪತ್ನಿ ಪ್ರಿಯಾಂಕ ಉಪೇಂದ್ರ (Priyanka Upendra) ತಮ್ಮ ಅತ್ತೆಯ ಹುಟ್ಟುಹಬ್ಬವನ್ನು ಕುಟುಂಬದವರ ಜೊತೆ ಸೇರಿ ಭರ್ಜರಿಯಾಗಿ ಆಚರಿಸಿದರು.

39

ಪ್ರಿಯಾಂಕ ತಮ್ಮ ಅತ್ತೆಯ ಹುಟ್ಟುಹಬ್ಬದ ವಿಶೇಷ ಕ್ಷಣಗಳ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಹುಟ್ಟುಹಬ್ಬದ ಶುಭಾಶಯಗಳು ಮಾಜಿ (Happy birthday Maji ! Wishing you a blessed year ahead) ಎಂದು ಬರೆದುಕೊಂಡಿದ್ದಾರೆ.

49

ಅನುಸೂಯ ಅವರ ಹುಟ್ಟುಹಬ್ಬದಲ್ಲಿ ಮಕ್ಕಳು, ಮರಿಮಕ್ಕಳು ಎಲ್ಲರೂ ಇದ್ದು ಸಂಭ್ರಮಿಸಿದ್ದಾರೆ. ಆದರೆ ಉಪೇಂದ್ರ ಅವರೇ ಮಿಸ್ ಆಗಿದ್ದಾರೆ. ಬಹುಶಃ ಶೂಟಿಂಗ್ ನಲ್ಲಿ ಬ್ಯುಸಿ ಇದ್ದಿರಬಹುದು.

59

ಮನೆಯಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ ಬಳಿಕ ಕುಟುಂಬದ ಎಲ್ಲಾ ಸದಸ್ಯರು ಔಟಿಂಗ್ ಹೋಗಿ ಸಂಭ್ರಮಿಸಿದ್ದಾರೆ. ಉಪೇಂದ್ರ ಅವರ ತುಂಬಿದ ಕುಟುಂಬ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.

69

ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರಿಯಾಂಕಾ, ಉಪೇಂದ್ರ ಅವರ ಅಣ್ಣ ಸುಧೀಂದ್ರ, ಅತ್ತಿಗೆ, ಪ್ರಿಯಾಂಕ ತಾಯಿ, ತಮ್ಮ, ಉಪೇಂದ್ರ ಅವರ ಅಣ್ಣನ ಮಕ್ಕಳು ಹಾಗೂ ಮಗ ಆಯುಷ್ ಎಲ್ಲರೂ ಸೇರಿ ಸಂಭ್ರಮಿಸಿದ್ದಾರೆ.

79

ಅಭಿಮಾನಿಗಳು ಸಹ ಉಪೇಂದ್ರ ಅವರ ತಾಯಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಎರಡು ಕುಟುಂಬಗಳು ಒಟ್ಟಿಗೆ ಸೇರಿ ಹುಟ್ಟುಹಬ್ಬ ಆಚರಿಸುವುದನ್ನು ನೋಡಿ ಫ್ಯಾನ್ಸ್ ಸಂಭ್ರಮಿಸಿದ್ದಾರೆ.

89

ಪ್ರಿಯಾಂಕ ಬೆಂಗಾಲಿ ನಟಿಯಾಗಿದ್ದು, (Bengali Actress) ಅವರು ಉಪೇಂದ್ರ ಜೊತೆ ತಮಿಳಿನ ರಾ ಹಾಗೂ ಕನ್ನಡದಲ್ಲಿ H2O ಸಿನಿಮಾಗಳಲ್ಲಿ ನಟಿಸಿದ್ದರು. ನಂತರ ಪ್ರೀತಿಯಲ್ಲಿ ಬಿದ್ದು ಈ ಜೋಡಿ 2003 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸದ್ಯ ಈ ಜೋಡಿ ಇಬ್ಬರು ಮಕ್ಕಳ ತಾಯಿ.

99

ಸ್ಟಾರ್ ನಟಿಯಾಗಿ ಕನ್ನಡ, ತಮಿಳು, ಬೆಂಗಾಲಿ ಹಿಂದಿಯಲ್ಲಿ ಗುರುತಿಸಿಕೊಂಡಿದ್ದರೂ, ತಮ್ಮ ಕುಟುಂಬದ ಜೊತೆಗಿನ ಬಾಂಧವ್ಯ, ಸಂಪ್ರದಾಯವನ್ನು ಬಿಡದೆ ತುಂಬು ಕುಟುಂಬವನ್ನು ನಡೆಸಿಕೊಂಡು ಹೋಗುವ ಪ್ರಿಯಾಂಕ ಉಪೇಂದ್ರ ಅವರೆಂದರೆ ಜನರಿಗೂ ಪ್ರೀತಿ.

Read more Photos on
click me!

Recommended Stories