ಅತ್ಯತ್ತಮ ನಟ ರಿಷಬ್‌ಗೆ ರಾಷ್ಟ್ರ ಪುರಸ್ಕಾರ ಪ್ರದಾನ: ದೆಹಲಿಯಲ್ಲಿ ಕಾಂತಾರ, ಕೆಜಿಎಫ್‌ ಕಲರವ!

First Published Oct 9, 2024, 7:38 AM IST

ನವದೆಹಲಿ(ಅ.09):  ಕೇಂದ್ರ ಸರ್ಕಾರ ಪ್ರತಿವರ್ಷ ನೀಡುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಂಗಳವಾರ ದೆಹಲಿಯಲ್ಲಿ ನಡೆಯಿತು. ರಾಷ್ಟ್ರಪತಿ ದೌಪದಿ ಮುರ್ಮು 85 ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಬಾರಿಯ ವಿಶೇಷವೆಂದರೆ ದಕ್ಷಿಣ ಚಿತ್ರರಂಗದ ಕಲಾವಿದರೇ ಹೆಚ್ಚಿನ ಪ್ರಶಸ್ತಿಯನ್ನು ಬಾಚಿಕೊಂಡರು. 

ಕನ್ನಡಿಗ ರಿಷಬ್ ಶೆಟ್ಟಿ ಕಾಂತಾರ ಚಿತ್ರಕ್ಕಾಗಿ ಅತ್ಯುತ್ತಮ ನಟ, ನಿತ್ಯಾ ಮೆನನ್, ಮಾನಸಿ ಪಾರೇಖ್ ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದರು. ಉಳಿದಂತೆ ವಿವಿಧ ವಿಭಾಗಗಳಲ್ಲಿ ಪುರಸ್ಕೃತರಾದವರಿಗೂ ರಾಷ್ಟ್ರಪತಿ ಪ್ರಶಸ್ತಿ ಪ್ರದಾನ ಮಾಡಿದರು. ಇನ್ನು ಇದೇ ವೇಳೆ ನಟ ಮಿಥುನ್ ಚಕ್ರವರ್ತಿ ಅವರಿಗೆ ಸಿನಿಮಾ ರಂಗದಲ್ಲಿ ಮಾಡಿದ ಜೀವಮಾನದ ಸಾಧನೆಗಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಗೆದ್ದ ಪ್ರಮುಖರು: ರಿಷಬ್ ಶೆಟ್ಟಿ (ಅತ್ಯುತ್ತಮ ನಟ), ನಿತ್ಯಾ ಮೆನೆನ್. ಮಾನಸಿ ಪಾರೇಖ್ (ಅತ್ಯುತ್ತಮ ನಟಿ), ನೀನಾ ಗುಪ್ತಾ (ಅತ್ಯುತ್ತಮ ಸಹ ನಟಿ), ಸೂರಜ್ ಬಾರ್ಜತ್ಯ (ಅತ್ಯುತ್ತಮ ನಿರ್ದೇಶಕ) ಎ.ಆರ್. ರೆಹಮಾನ್ ( ಅತ್ಯುತ್ತಮ ಹಿನ್ನೆಲೆ ಸಂಗೀತ ನಿರ್ದೇಶಕ) ಪ್ರೀತಂ (ಅತ್ಯುತ್ತಮ ಸಂಗೀತ ನಿರ್ದೇಶಕ) ಅರಿಜೀತ್ ಸಿಂಗ್ (ಅತ್ಯುತ್ತಮ ಗಾಯಕ), ಜಯಶ್ರೀ (ಅತ್ಯುತ್ತಮ ಗಾಯಕಿ ಪ್ರಶಸ್ತಿ) ಯನ್ನು ಗೆದ್ದಿದ್ದಾರೆ. ಮಲಯಾಳಂನ ಆಟ್ಟಂ ಸಿನಿಮಾ ಅತ್ಯುತ್ತಮ ಚಿತ್ರಕತೆ ಹಾಗೂ ಅತ್ಯುತ್ತಮ ಸಂಕಲನ ಪ್ರಶಸ್ತಿ ಪಡೆದಿದೆ.

Latest Videos


70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಂಗಳವಾರ ನವದೆಹಲಿಯಲ್ಲಿ ನಡೆಯಿತು. ರಾಷ್ಟ್ರ ಪತಿ ದೌಪದಿ ಮುರ್ಮು, ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ನಟ ರಿಷಬ್ ಶೆಟ್ಟಿ ಕಾಂತಾರ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದರೆ, ಅತ್ಯುತ್ತಮ ಮನರಂಜನಾ ಸಿನಿಮಾ ವಿಭಾಗದಲ್ಲಿ ಕಾಂತಾರ ಪ್ರಶಸ್ತಿ ಪಡೆದುಕೊಂಡಿತು. 

ಕಳೆದ ಆಗಸ್ಟ್‌ನಲ್ಲಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟವಾಗಿದ್ದು, ಕನ್ನಡಕ್ಕೆ ಈ ವರ್ಷ ಒಟ್ಟು 7 ಪ್ರಶಸ್ತಿಗಳು ಲಭಿಸಿವೆ. ಯಶ್ ಅಭಿಯನಯದ ಕೆಜಿಎಫ್ -2, ಅತ್ಯುತ್ತಮ ಪ್ರಾದೇಶಿಕ ಸಿನಿಮಾ ವಿಭಾಗದಲ್ಲಿ, ಅದೇ ಸಿನಿಮಾದ ಸಾಹಸ ನಿರ್ದೇಶನಕ್ಕಾಗಿ ಅನ್ವರಿವ್ ಅತ್ಯುತ್ತಮ ಸಾಹಸ ನಿರ್ದೇಶಕ ಪ್ರಶಸ್ತಿ ಸ್ವೀಕರಿಸಿದರು. ನಾನ್ ಫೀಚರ್ ಫಿಲಂವಿಭಾಗದಲ್ಲಿ ಬಸ್ತಿ ದಿನೇಶ್ ಶೆಣೈ 'ಮಧ್ಯಂತರ' ಚಿತ್ರಕ್ಕಾಗಿ ಚೊಚ್ಚಲ ನಿರ್ದೇಶನ, ಸುನೀಲ್ ಪುರಾಣಿಕ್ 'ರಂಗವೈಭೋಗ'ಚಿತ್ರಕ್ಕಾಗಿ ಕಲೆಮತ್ತು ಸಂಸ್ಕೃತಿ ವಿಭಾಗದಲ್ಲಿ ಹಾಗೂ ಸುರೇಶ್‌ ಅರಸ್ 'ಮಧ್ಯಂತರ' ಚಿತ್ರಕ್ಕಾಗಿ ಸಂಕಲನ ಪ್ರಶಸ್ತಿ ಸ್ವೀಕರಿಸಿದರು.

click me!