ಭಾರತದ ಸೆಲಿಬ್ರಿಟಿಗಳ ಅತ್ಯಂತ ಶಾಕಿಂಗ್‌ ಅನೈತಿಕ ಸಂಬಂಧಗಳು!

First Published | Nov 21, 2024, 4:58 PM IST

ಭಾರತೀಯ ಚಿತ್ರರಂಗದಲ್ಲಿ ಗುಟ್ಟಾಗಿ ಸಂಬಂಧ ಹೊಂದಿದ್ದ, ಈಗಲೂ ಸುದ್ದಿಯಲ್ಲಿರುವ ಜೋಡಿಗಳ ಪಟ್ಟಿ ಇಲ್ಲಿದೆ. ಕೆಲವು ಸಂಬಂಧಗಳು ವದಂತಿಗಳಾಗಿದ್ದರೆ, ಇನ್ನು ಕೆಲವನ್ನು ಸ್ವತಃ ಸ್ಟಾರ್‌ಗಳೇ ಒಪ್ಪಿಕೊಂಡಿದ್ದಾರೆ.

ಮದುವೆಯಾದರೂ ಸೆಲೆಬ್ರಿಟಿಗಳು ಅಲ್ಲೊಂದು ಇಲ್ಲೊಂದು ಸಂಬಂಧಗಳು ಹೊಂದಿರುವುದು ವಿದೇಶದಲ್ಲಿ ಮಾತ್ರವಲ್ಲ ಭಾರತದಲ್ಲೂ ಇದೆ. ಸಿನಿಮಾ ಸ್ಟಾರ್‌ಗಳು ಈಗಾಗಲೇ ಒಂದು ಮದುವೆ ಆಗಿದ್ದರೂ, ಸಿನಿಮಾರಂಗದಲ್ಲಿಯೇ ಗುಟ್ಟಾಗಿ ಅನೈತಿಕ ಸಂಬಂಧ ಹೊಂದಿರುತ್ತಾರೆ.
 

ಭಾರತೀಯ ಚಿತ್ರರಂಗದಲ್ಲಿ ಹೀಗೆ ಸುದ್ದಿಯಾದ ಶಾಕಿಂಗ್‌ ಅನೈತಿಕ ಸಂಬಂಧಗಳ ಲಿಸ್ಟ್‌ ಇಲ್ಲಿದೆ. ಇದರಲ್ಲಿ ಕೆಲವು ಸಂಬಂಧಗಳು ರೂಮರ್‌ಗಳಾಗಿದ್ದರು. ಇನ್ನೂ ಕೆಲವು ಸಂಬಂಧಗಳನ್ನು ಸ್ವತಃ ಅವರುಗಳೇ ಒಪ್ಪಿಕೊಂಡಿದ್ದಾರೆ. ಇನ್ನೂ ಕೆಲವು ಸಂಬಂಧಗಳಿಗೆ ಸ್ಟಾರ್‌ಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರ ಮೌನವೇ ಈ ಸಂಬಂಧ ಸತ್ಯ ಎನ್ನುವುದನ್ನು ಸೂಚಿಸಿವೆ.
 

Tap to resize

ಶಾರುಖ್‌ ಖಾನ್‌-ಪ್ರಿಯಾಂಕಾ ಚೋಪ್ರಾ: ಎಲ್ಲಿಯತನಕ ಈ ಸಂಬಂಧ ಸುದ್ದಿಯಾಗಿತ್ತೆಂದರೆ, ಪ್ರಿಯಾಂಕಾ ಚೋಪ್ರಾ ಹಾಗೂ ಶಾರುಖ್‌ ಖಾನ್‌ ಗುಟ್ಟಾಗಿ ಮದುವೆಯಾಗಿದ್ದಾರೆ. ಶಾರುಖ್‌, ಪ್ರಿಯಾಂಕಾಗಾಗಿ ಹೊಸ ಮನೆಯನ್ನೂ ಗಿಫ್ಟ್‌ ಮಾಡಿದ್ದಾರೆ ಎಂದು ಸುದ್ದಿಯಾಗಿತ್ತು. 2006ರಲ್ಲಿ ಇದು ಬಾಲಿವುಡ್‌ನಲ್ಲಿ ದೊಡ್ಡ ರೂಮರ್‌ ಎನಿಸಿಕೊಂಡಿತ್ತು. ಇದರ ಬಳಿಕ ಗೌರಿ ಖಾನ್‌, ಪ್ರಿಯಾಂಕಾ ಚೋಪ್ರಾ ಅವರೊಂದಿಗೆ ಶಾರುಖ್‌ ಖಾನ್‌ ಯಾವುದೇ ಸಿನಿಮಾದಲ್ಲಿ ನಟಿಸದಂತೆ ನಿರ್ಬಂಧ ಹೇರಿದ್ದರೂ ಎಂದೂ ವರದಿಯಾಗಿತ್ತು.
 

ಹೃತಿಕ್‌ ರೋಶನ್‌-ಕಂಗನಾ ರನೌತ್‌: ಹೃತಿಕ್‌ ರೋಶನ್‌ ಹಾಗೂ ಕಂಗನಾ ರನೌತ್‌ ನಡುವಿನ ಸಂಬಂಧ ವಿವಾದಾತ್ಮಕವಾಗಿ ಸುದ್ದಿಯಾಗಿತ್ತು. ಕ್ರಿಶ್‌ 2 ಸಿನಿಮಾದಲ್ಲಿ ಜೊತೆಯಾಗಿ ನಟಿಸುವ ವೇಳೆ ಇವರಿಬ್ಬರ ನಡುವೆ ರಿಲೇಷನ್‌ಷಿಪ್‌ ಇತ್ತು. ಕೊನೆಗೆ ಅದು ಇಬ್ಬರ ನಡುವಿನ ವೈಮನಸ್ಯದಿಂದಾಗಿ ಭಾರೀ ವಿವಾದದೊಂದಿಗೆ ಮುಕ್ತಾಯ ಕಂಡಿತು. 2016ರಲ್ಲಿ ಕಂಗನಾ ರನೌತ್‌, ಹೃತಿಕ್‌ ರೋಶನ್‌ ಅವರನ್ನು ತಮ್ಮ 'ಸಿಲ್ಲಿ ಎಕ್ಸ್‌' ಎಂದು ಕರೆದಿದ್ದು ಸಾರ್ವಜನಿಕವಾಗಿ ವಿವಾದವೆಬ್ಬಿಸಿತ್ತು.
 

ಆಮೀರ್‌ ಖಾನ್‌-ಫಾತಿಮಾ ಸನಾ ಶೇಖ್: ದಂಗಲ್‌ ಸಿನಿಮಾದಲ್ಲಿ ಆಮೀರ್‌ ಖಾನ್‌ ಜೊತೆ ನಟಿಸಿದ್ದ ಫಾತಿಮಾ ಸನಾ ಶೇಖ್‌, ನಟನೊಂದಿಗೆ ಆಪ್ತತೆ ಬೆಳೆಸಿಕೊಂಡಿದ್ದರು. ಇದು ಆಮೀರ್‌ ಖಾನ್‌ ಪತ್ನಿಗೆ ಗೊತ್ತಾಗಿದ್ದೆ ತಡ, ಬಾಲಿವುಡ್‌ನ ಮಿ.ಫರ್ಪೆಕ್ಷನಿಸ್ಟ್‌ನಿಂದ ವಿಚ್ಛೇದನವನ್ನೇ ಪಡೆದುಕೊಂಡರು. ಆಮೀರ್‌ ಖಾನ್‌, ಫಾತಿಮಾ ಸನಾ ಶೇಖ್‌ ಜೊತೆ ಹಲವು ಬಾರಿ ಪಾರ್ಟಿ ಮಾಡಿದ್ದರು. ಫಾತಿಮಾರ ಆಪ್ತ ಕುಟುಂಬ ಮಾತ್ರವೇ ಭಾಗವಹಿಸುತ್ತಿದ್ದ ಪಾರ್ಟಿಯಲ್ಲಿ ಆಮೀರ್‌ ಖಾನ್‌ಗೂ ಆಹ್ವಾನವಿರುತ್ತಿತ್ತು. ಆಮೀರ್‌ ಖಾನ್‌ ಫಿಲ್ಮ್‌ ಸೆಟ್‌ಗಳಲ್ಲಿ ನಟನನ್ನು ಡ್ರಾಪ್‌ ಮಾಡಲು ಬರುವಾಗ ಹಲವರು ಗಮನಿಸಿದ್ದರು.
 

ಸನ್ನಿ ಡಿಯೋಲ್‌-ಡಿಂಪಲ್‌ ಕಪಾಡಿಯಾ: ಅಕ್ಷಯ್‌ ಕುಮಾರ್‌ ಅವರ ಅತ್ತೆ ಡಿಂಪಲ್‌ ಕಪಾಡಿಯಾ ಜೊತೆ ಸನ್ನಿ ಡಿಯೋಲ್‌ ಪ್ರೀತಿಯಲ್ಲಿದ್ದರು. ಈ ವೇಳೆ ಡಿಂಪಲ್‌ ಕಪಾಡಿಯಾ ರಾಜೇಶ್‌ ಖನ್ನಾಗೆ ಡೈವೋರ್ಸ್‌ ನೀಡಿದ್ದರು. ಇನ್ನೊಂದೆಡೆ ಸನ್ನಿ ಡಿಯೋಲ್‌, ಪೂಜಾ ಡಿಯೋಲ್‌ರೊಂದಿಗೆ ವಿವಾಹವಾಗಿದ್ದರು.ಇವರಿಬ್ಬರ ನಡುವೆ ಆತ್ಮೀಯ ಸಂಬಂಧ ಕಾಣುತ್ತಿತ್ತು. ಈಗಲೂ ಕೂಡ ಅವರ ನಡುವೆ ಇಂಥ ಸಂಬಂಧವೇ ಇದೆ. 2017ರಲ್ಲಿ ಇವರಿಬ್ಬರು ಜೊತೆಯಾಗಿ ಕೈ ಕೈ ಹಿಡಿದುಕೊಂಡು ಕಂಡಿದ್ದ ಪೋಟೋ ವೈರಲ್‌ ಆಗಿತ್ತು. ಆದರೆ, ಸನ್ನಿ ಡಿಯೋಲ್‌ ಆಗಲಿ ಡಿಂಪಲ್‌ ಕಪಾಡಿಯಾ ಆಗಲು ಈ ಸಂಬಂಧದ ಬಗ್ಗೆ ಇಲ್ಲಿಯವರೆಗೂ ಎಲ್ಲೂ ಮಾತನಾಡಿಲ್ಲ.

ಇದನ್ನೂ ಓದಿ: ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ 7 ನಗರಗಳಲ್ಲಿ ಮನೆ ಖರೀದಿ ದುಬಾರಿ!

ಅಕ್ಷಯ್‌ ಕುಮಾರ್‌-ಪ್ರಿಯಾಂಕಾ ಚೋಪ್ರಾ: ಈ ಸುದ್ದಿಯ ಬಗ್ಗೆ ಎಲ್ಲೂ ಖಚಿತತೆ ಸಿಕ್ಕಿಲ್ಲ. ಆದರೆ, ಇಂದಿಗೂ ರೂಮರ್‌ ಆಗಿಯೇ ಉಳಿದುಕೊಂಡಿದೆ. ಟ್ವಿಂಕಲ್‌ ಖನ್ನಾ ಜೊತೆ ವಿವಾಹವಾಗಿದದ್ದ ಅಕ್ಷಯ್‌ ಕುಮಾರ್‌, ಪ್ರಿಯಾಂಕಾ ಚೋಪ್ರಾ ಜೊತೆ ಅನೈತಿಕ ಸಂಬಂಧ ಹೊಂದಿದ್ದರು. 2003ರಲ್ಲಿ ಬಿಡುಡೆಯಾದ ಅಂದಾಸ್‌ ಸಿನಿಮಾದಲ್ಲಿ ಇವರಿಬ್ಬರ ಕೆಮಿಸ್ಟ್ರಿ ಕಂಡು ಬಾಲಿವುಡ್‌ ಮಂದಿಯೇ ಈ ಬಗ್ಗೆ ಮಾತನಾಡಿಕೊಳ್ಳಲು ಆರಂಭಿಸಿದ್ದರು. ಅದಾದ ಬಳಿಕ ಒಟ್ಟಾಗಿ ಮೂರು ಸಿನಿಮಾಗಳಿಗೆ ಇವರು ಸಹಿ ಹಾಕಿದ್ದರು. ಆನ್‌ ಸ್ಕ್ರೀನ್‌ನಲ್ಲಿ ಇವರಿಬ್ಬರ ಕೆಮಿಸ್ಟ್ರಿ ಕಂಡು ಸಿಟ್ಟಾಗಿದ್ದ ಟ್ವಿಂಕಲ್‌ ಖನ್ನಾ, ಅಕ್ಷಯ್‌ ಕುಮಾರ್‌ ಇನ್ನೆಂದೂ ಪ್ರಿಯಾಂಕಾ ಚೋಪ್ರಾ ಜೊತೆ ನಟಿಸಬಾರದು ಎಂದು ಕಟ್ಟಪ್ಪಣೆ ಹೊರಡಿಸಿದ್ದರಂತೆ.

ಇದನ್ನೂ ಓದಿ: ಇದು ಬೆಂಗಳೂರಿನ 'ಬಿಲಿಯನೇರ್‌ ಸ್ಟ್ರೀಟ್‌', 67.5 ಕೋಟಿಗೆ ಸೇಲ್‌ ಆಗಿದೆ ಇಲ್ಲಿನ ಒಂದು ಸೈಟ್‌!

Latest Videos

click me!