ನೀವು ಮನೆಯಲ್ಲಿ ಪ್ರತಿದಿನ ಬಿರಿಯಾನಿ ತಿಂತೀರಾ? ಬೋಲ್ಡ್‌ ಪಾತ್ರಗಳ ಬಗ್ಗೆ ನಟಿ ಅನುಪಮಾ ಶಾಕಿಂಗ್‌ ಹೇಳಿಕೆ!

First Published | Mar 19, 2024, 10:46 PM IST

ಡಿಜೆ ಟಿಲ್ಲು ಸ್ಕ್ವೇರ್‌ ಮೂವಿಯಲ್ಲಿ ನಟಿ ಅನುಪಮಾ ಪರಮೇಶ್ವರನ್‌ ಹಾಟ್‌ ದೃಶ್ಯಗಳಲ್ಲಿ ನಟಿಸಿದ್ದಾರೆ. ಚಿತ್ರದ ಟೀಸರ್‌ ಕಂಡು ಅನುಪಮಾ ಅವರ ಅಭಿಮಾನಿಗಳೇ ಅಚ್ಚರಿಪಟ್ಟಿದ್ದಾರೆ.

ನಟಿ ಅನುಪಮಾ ಪರಮೇಶ್ವರ್‌ ಅಂದರೆ ಯಾರಿಗೂ ಗೊತ್ತಾಗಲಿಕ್ಕಿಲ್ಲ. ಆದರೆ, ಪುನೀತ್‌ ರಾಜ್‌ಕುಮಾರ್‌ ಜೊತೆ ನಟ ಸಾರ್ವಭೌಮ ಚಿತ್ರದಲ್ಲಿ ನಟಿಸಿದ್ದ ಮಲಯಾಳಿ ನಟಿ ಎಂದಾಗ ಅನುಪಮಾ ಅವರ ಮುದ್ದು ಮುಖ ನೆನಪಿಗೆ ಬರುತ್ತದೆ.

ಕನ್ನಡದಲ್ಲಿ ಅದೊಂದೇ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದ ಅನುಪಮಾ ಪರಮೇಶ್ವರನ್‌ ಇಲ್ಲಿಯವರೆಗೂ ತಮ್ಮ ಸೀದಾ ಸಾದಾ ಪಾತ್ರಗಳಿಂದಲೇ ಹೆಸರುವಾಸಿ.

Tap to resize

ಪ್ರೇಮಂ ಚಿತ್ರದಲ್ಲಿ ಗಂಗುರು ಕೂದಲಿನ ಮುಗ್ಧ ಹೈಸ್ಕೂಲ್‌ ಹುಡುಗಿಯಾಗಿ ನಟಿಸಿದ್ದ ಅನುಪಮಾ ಪರಮೇಶ್ವರ್‌ ಅದಾದ ಬಳಿಕ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ.

ಈಕೆ ನಟಿಸಿರುವ ಕೆಲವೊಂದು ಚಿತ್ರಗಳು ಹಿಟ್‌ ಆಗಿದ್ದರೂ, ಅನುಪಮಾ ಪರಮೇಶ್ವರನ್‌ಗೆ ಮಾತ್ರ ಹೆಚ್ಚಿನ ಕ್ರೆಡಿಟ್‌ ಏನೂ ಸಿಕ್ಕಿರಲಿಲ್ಲ.

ಇದರ ಬೆನ್ನಲ್ಲಿಯೇ ಅನುಪಮಾ ಪರಮೇಶ್ವರನ್‌ ಮೈಚಳಿ ಬಿಟ್ಟು ನಟಿಸಲು ಆರಂಭಿಸಿದ್ದಾರೆ. ಹೀಗಿರುವಾಗಲೇ ಅವರ ಡಿಜೆ ಟಿಲ್ಲು ಚಿತ್ರದ ಫೋಟೋಗಳು ವೈರಲ್‌ ಆಗಿದ್ದವು.

ಅನುಪಮಾ ನಟಿಸಿದ ಹಿಂದಿನ ಎಲ್ಲಾ ಚಿತ್ರಗಳಿಂತ ಡಿಜೆ ಟಿಲ್ಲು ಸ್ಕ್ವೇರ್‌ ಚಿತ್ರದಲ್ಲಿ ಸಖತ್‌ ಹಾಟ್‌ ಆಗಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಟೀಸರ್‌ ಕೂಡ ಬಿಡುಗಡೆಯಾಗಿದೆ.

ಒಂದೊಂದು ದೃಶ್ಯಗಳನ್ನೂ ಬಹಳ ಮಾದಕವಾಗಿ ಅನುಪಮಾ ಕಂಡಿದ್ದಾರೆ. ಈ ಚಿತ್ರ ಮಾರ್ಚ್‌ 29ಕ್ಕೆ ಬಿಡುಗಡೆಯಾಗಲಿದ್ದು, ಚಿತ್ರದ ಪ್ರಚಾರ ಕಾರ್ಯ ಕೂಡ ಆರಂಭವಾಗಿದೆ.

ಈ ಚಿತ್ರದಲ್ಲಿ ಹಿಂದಿನ ಎಲ್ಲಾ ಚಿತ್ರಗಳಲ್ಲಿ ಇದ್ದ ಲಿಮಿಟೇಷನ್‌ಗಳನ್ನು ದಾಟಿ ನೀವು ನಟಿಸಿದ್ದೀರಿ ಇದಕ್ಕೆ ಏನಾದರೂ ಕಾರಣವಿದೆಯೇ ಎಂದು ಪ್ರಶ್ನೆ ಮಾಡಲಾಗಿತ್ತು.

ಇದಕ್ಕೆ ಉತ್ತರ ನೀಡಿರುವ ಅನುಪಮಾ, ನಟಿಯಾಗಿ ಹಲವು ವರ್ಷಗಳಿಂದ ಒಂದೇ ರೀತಿಯ ಪಾತ್ರದಲ್ಲಿ ನಟಿಸುತ್ತಿದ್ದರೆ ಅದು ಬೇಸರವಾಗುತ್ತದೆ ಎಂದಿದ್ದಾರೆ.

ಸಾಮಾನ್ಯವಾಗಿ ಕಮರ್ಷಿಯಲ್‌ ಸಿನಿಮಾಗಳಲ್ಲಿ ಹುಡುಗಿಯರಿಗೆ ಒಳ್ಳೆ ಪಾತ್ರ ಸಿಗೋದಿಲ್ಲ. ಆದರೆ, ಈ ಚಿತ್ರದಲ್ಲಿ ಲಿಲ್ಲಿ ಪಾತ್ರ ಬಹಳ ಅದ್ಭುತವಾಗಿದೆ.

ಹಾಗೇನಾದರೂ ನಾನಿ ಲಿಲ್ಲಿ ಪಾತ್ರದಲ್ಲಿ ನಟಿಸದೇ ಅದನ್ನು ಬಿಟ್ಟುಕೊಟ್ಟಿದ್ದರೆ, ಇದಕ್ಕಿಂತ ದಡ್ಡ ನಿರ್ಧಾರ ಮತ್ತೊಂದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಒಳ್ಳೆಯ ಪಾತ್ರ ಬಿಟ್ಟುಕೊಡಲು ನನಗೆ ಮನಸ್ಸಿರಲಿಲ್ಲ. ಹಾಗಾಗಿ ಎಲ್ಲಾ ಇತಿ ಮಿತಿಗಳನ್ನು ದಾಟಿ ಈ ಸಿನಿಮಾದಲ್ಲಿ ನಟಿಸಲು ನಿರ್ಧಾರ ಮಾಡಿದೆ ಎಂದಿದ್ದಾರೆ.

ವರದಿಗಾರನಿಂದ ಮತ್ತೆ ಅದೇ ಪ್ರಶ್ನೆ ಬಂದಾಗ, ನಿಮಗೆ ಬಿರಿಯಾನಿ ಇಷ್ಟ ಅಂತಾ ಮನೆಯಲ್ಲಿ ಪ್ರತಿದಿನ ಬಿರಿಯಾನಿ ತಿನ್ನುತ್ತೀರಾ ಎಂದು ಅನುಪಮಾ ಕೇಳಿದ್ದಾರೆ.

ನನಗೂ ಅದೇ ರೀತಿ ಪ್ರತಿದಿನ ಬಿರಿಯಾನಿ ತಿನ್ನೋದಿಲ್ಲ. ಪುಳಿಯೊಗರೆ, ಪುಲಾವ್‌ ಕೂಡ ತಿನ್ನಬೇಕು ಅಂತಾ ಅನಿಸುತ್ತದೆ ಎಂದು ಹೇಳಿದ್ದಾರೆ.

ಅನುಪಮಾ ಅವರ ಈ ಬೋಲ್ಡ್‌ ಹೇಳಿಕೆ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದ್ದು, ಸಿನಿ ಪ್ರಿಯರ ನಡುವೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Latest Videos

click me!