ಬಾಲಿವುಡ್‌ನಲ್ಲಿ ಮತ್ತೊಂದು ಶಾಕಿಂಗ್ ವಿಚ್ಛೇದನ ಸುದ್ದಿಯಾಗಿದೆ. ಕಳೆದ 12 ವರ್ಷಗಳ ದಾಂಪತ್ಯವನ್ನು ಮುಕ್ತಾಯ ಮಾಡುತ್ತಿರುವುದಾಗಿ ಧೂಮ್ ಮಚಾಲೆ ಎಂದು ಕುಣಿದಿದ್ದ ನಟಿ ತನ್ನ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಬಾಲಿವುಡ್‌ಗೆ ಮತ್ತೊಂದು ವಿಚ್ಛೇದನದ ಸುದ್ದಿ ಅಪ್ಪಳಿಸಿದೆ. ಅದರೊಂದಿಗೆ ಕಳೆದ ವರ್ಷದ ಟ್ರೆಂಡ್ ಬಾಲಿವುಡ್‌ನಲ್ಲಿ ಈ ವರ್ಷವೂ ಮುಂದುವರಿಯುವುದು ನಿಶ್ಚಿತವಾಗಿದೆ.
215
ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಹಾಗೂ ನಟಿ ಹೇಮಾಮಾಲಿನಿ ಅವರ ಪುತ್ರಿ ಇಶಾ ಡಿಯೋಲ್ ತಮ್ಮ ವಿಚ್ಛೇದನವನ್ನು ದೃಢಪಡಿಸಿದ್ದಾರೆ.
315
42 ವರ್ಷದ ಇಶಾ ಡಿಯೋಲ್ 2012ರಲ್ಲಿ ಭರತ್ ಥಕ್ತಾನಿಯನ್ನು ವಿವಾಹವಾಗಿದ್ದರು. ಇವರಿಬ್ಬರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ.
415
ಆದರೆ, ಇತ್ತೀಚೆಗೆ ಇವರಿಬ್ಬರ ನಡುವೆ ಏನೂ ಸರಿಯಿಲ್ಲ. ಶೀಘ್ರದಲ್ಲಿಯೇ ವಿಚ್ಛೇದನವಾಗಬಹುದು ಎನ್ನುವ ಗಾಸಿಪ್‌ಗಳು ಬಾಲಿವುಡ್ ಅಂಗಣದಲ್ಲಿದ್ದವು.
515
ಅದರಂತೆ ಮಂಗಳವಾರ ಇಬ್ಬರೂ ಕೂಡ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಇದನ್ನು ಹಂಚಿಕೊಂಡಿದ್ದು, 12 ವರ್ಷದ ದಾಂಪತ್ಯ ಕೊನೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
615
ಇಶಾ ಡಿಯೋಲ್ ಮತ್ತು ಭರತ್ ತಖ್ತಾನಿ ಅವರು ತಮ್ಮ ವಿಚ್ಛೇದನದ ವದಂತಿಗಳ ಮಧ್ಯೆ ಅವರು ಬೇರೆಯಾಗುತ್ತಿರುವುದನ್ನು ಖಚಿತಪಡಿಸಿದ್ದಾರೆ ಎಂದು ವರದಿಯಾಗಿದೆ.
715
ಇಬ್ಬರೂ ಕೂಡ ಈ ಕುರಿತಾಗಿ ಜಂಟಿ ಹೇಳಿಕೆಯನ್ನು ಪ್ರಕಟ ಮಾಡಿದ್ದಾರೆ. ನಾವಿಬ್ಬರೂ ಸೌಹಾರ್ದಯುತವಾಗಿ ಬೇರೆಯಾಗಲು ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
815
ನಮ್ಮಿಬ್ಬರ ಜೀವನದಲ್ಲಿ ಇದು ಪ್ರಮುಖ ಬದಲಾವಣೆ ಎನ್ನುವುದು ಗೊತ್ತಿದೆ. ಆದರೆ, ಇಬ್ಬರು ಮಕ್ಕಳ ಹಿತಾಸಕ್ತಿ ಹಾಗೂ ಅವರಿಗೆ ಒಳ್ಳೆಯದು ಎನ್ನುವ ನಿರ್ಧಾರ ನಮಗೆ ಬಹಳ ಪ್ರಮುಖವಾಗಿದೆ ಎಂದು ಇಶಾ ಡಿಯೋಲ್ ಹಾಗೂ ಭರತ್ ತಿಳಿಸಿದ್ದಾರೆ.
915
ನಮ್ಮಿಬ್ಬರ ಖಾಸಗಿತನವನ್ನು ಎಲ್ಲರೂ ಗೌರವಿಸಬೇಕು ಎಂದು ಇಬ್ಬರೂ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಡೆಲ್ಲಿ ಟೈಮ್ಸ್ ವರದಿ ಮಾಡಿದೆ.
1015
ಇದಕ್ಕೂ ಮುನ್ನ ರೆಡಿಟ್ (ಸೋಶಿಯಲ್ ಮೀಡಿಯಾ ವೇದಿಕೆ) ಪೋಸ್ಟ್‌ನಲ್ಲಿ ಭರತ್ ಹಾಗೂ ಇಶಾ ಈಗಾಗಲೇ ಬೇರೆ ಬೇರೆಯಾಗಿದ್ದಾರೆ ಎಂದು ತಿಳಿಸಲಾಗಿತ್ತು.
1115
ಇದಕ್ಕೆ ಕಾರಣ ಎನ್ನುವಂತೆ ಕಳೆದ ಕೆಲವು ತಿಂಗಳುಗಳಿಂದ ಇಶಾ ಡಿಯೋಲ್ ಸಾಕಷ್ಟು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದು, ಎಲ್ಲಿಯೂ ಅವರ ಪತಿಯ ಜೊತೆ ಹಾಜರಾಗಿಲ್ಲ ಎಂದು ತಿಳಿಸಲಾಗಿತ್ತು.
1215
ಇಶಾ ಹಾಗೂ ಭರತ್ ಅವರ ವಿವಾಹ 2012ರಲ್ಲಿ ನಡೆದಿತ್ತು. 2017ರಲ್ಲಿ ಇಶಾ ಡಿಯೋಲ್ ತಮ್ಮ ಮೊದಲ ಪುತ್ರಿ ರಾಧ್ಯಾಗೆ ಜನ್ಮ ನೀಡಿದ್ದರು.
1315
2019ರಲ್ಲಿ ಇಶಾ ಡಿಯೋಲ್ ಹಾಗೂ ಭರತ್ ಥಕ್ತಾನಿ 2ನೇ ಬಾರಿಗೆ ತಂದೆ ತಾಯಿ ಎನಿಸಿಕೊಂಡಿದ್ದರು. ಈ ವೇಳೆ ಮಿರಾಯಾಗೆ ಇಶಾ ಡಿಯೋಲ್ ಜನ್ಮ ನೀಡಿದ್ದರು.
1415
2002ರಲ್ಲಿ ವಿನಯ್ ಶುಕ್ಲಾ ಅವರ ಕೋಯಿ ಮೇರೆ ದಿಲ್ ಸೇ ಪೂಚೆ ಚಿತ್ರದ ಮೂಲಕ ಇಶಾ ಡಿಯೋಲ್ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು.
1515
ಇನ್ನು 2004ರಲ್ಲಿ ಯಶ್ ರಾಜ್ ಬ್ಯಾನರ್‌ನಲ್ಲಿ ಬಂದ ಧೂಮ್ ಚಿತ್ರ ಇವರಿಗೆ ಸಿಕ್ಕಾಪಟ್ಟೆ ಹೆಸರು ತಂದುಕೊಟ್ಟಿತು. ಚಿತ್ರದಲ್ಲಿ ಹೆಚ್ಚಿನ ಪಾತ್ರ ಇಲ್ಲದೇ ಇದ್ದರೂ, ಧೂಮ್ ಮಚಾಲೆ ಹಾಡು ಹಾಗೂ ಬಿಕಿನಿ ದೃಶ್ಯದ ಮೂಲಕ ಗಮನಸೆಳೆದಿದ್ದರು.